ಜೀವ ತೆಗೆದ ಮೊಬೈಲ್ ಫೋನ್ ಮಾತು! ಹೂವು ತಿಂದು ಕೊನೆಯುಸಿರೆಳೆದ ಯುವತಿ!

ತಿರುವನಂತಪುರ: ಕೇರಳದಲ್ಲಿ (Kerala) ಅರಿವಿಲ್ಲದೇ ಕಣಗಿಲೆ ಹೂವನ್ನು ಕಿತ್ತು ತಿಂದ ನರ್ಸ್ (Nurse) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನರ್ಸ್ ಸೂರ್ಯ ಸುರೇಂದ್ರನ್ ಕೇರಳದ ಹರಿಪತ್ ಮೂಲದವರು. ಇತ್ತೀಚೆಗಷ್ಟೇ ಇಂಗ್ಲೆಂಡಿನಲ್ಲಿ (England) ಕೆಲಸ ಸಿಕ್ಕಿದ್ದರಿಂದ ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ವಿಮಾನ ನಿಲ್ದಾಣಕ್ಕೆ (Airport) ಹೋಗಲು ಪ್ರಯಾಣ ಬೆಳೆಸಿದ್ದರು. ಆದರೆ ಪ್ರಯಾಣಕ್ಕೂ ಮುನ್ನ ಸೆಲ್ ಫೋನ್ ನಲ್ಲಿ ಮಾತನಾಡುತ್ತಾ ಗಿಡದಲ್ಲಿದ್ದ ಕಣಗಿಲೆ ಹೂವನ್ನು (Indian Oleander) ಅರಿವಿಲ್ಲದೆ ಕುಡಿದು ತಿಂದಿದ್ದಾರೆ ಎನ್ನಲಾಗಿದೆ.

ಇನ್ನು, ಮನೆಯಿಂದ ಕೇರಳದ ನೆಡುಂಬಚೇರಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅವರಿಗೆ ಅಲಪ್ಪುಳದಲ್ಲಿ ವಾಕರಿಕೆ ಮತ್ತು ವಾಂತಿ ಆಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆತಂದು ಕುಟುಂಬಸ್ಥರು ಚಿಕಿತ್ಸೆ ಕೊಡಿಸಿ ಮನೆಗೆ ವಾಪಸ್ ಕರೆತಂದಿದ್ದಾರೆ. ಆದರೆ ಮನೆಗೆ ಆಗಮಿಸುತ್ತಿದ್ದಂತೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪರುಮಲೈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಯುವತಿಯ ಸಾವಿನ ಬಗ್ಗೆ ಅನುಮಾನಗೊಂಡು ಪ್ರಕರಣ ದಾಖಲಾಗಿದ್ದು, ಆ ಬಳಿಕ ಮತದೇಹ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಕಣಗಿಲೆ ಹೂವಿನಲ್ಲಿರುವ ವಿಷವೇ ಯುವತಿಯ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವೇಳೆ ತಿರುವಾಂಕೂರು ದೇವಸಂ ಬೋರ್ಡ್ ಅಧೀನದಲ್ಲಿರುವ ದೇವಾಲಯಗಳಲ್ಲಿ ಅರಳಿ ಹೂವುಗಳನ್ನು ನಿಷೇಧಿಸುವ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಣಗಿಲೆ ಹೂ ಬಗ್ಗೆ ಇರಲಿ ಎಚ್ಚರ!

ಆರ್ಯವೇದದಲ್ಲಿ ಕಣಗಿಲೆ ಹೂವನ್ನು ಅತ್ಯಂತ ವಿಷಕಾರಿ ಸಸ್ಯ ಅಂತಲೇ ಎಂದು ಹೇಳಲಾಗಿದೆ. ಈ ಸಸ್ಯ ಇಡೀ ಭಾರತದಲ್ಲಿ ಎಲ್ಲಾ ಕಡೆಯೂ ಕಾಣಸಿಗುತ್ತದೆ. ಪಾರ್ಕ್, ಕೆರೆ ಕಟ್ಟೆ, ಉದ್ಯಾನವನಗಳಲ್ಲಿ ಇದನ್ನು ಅಲಂಕಾರಿಕ ಸಸ್ಯವಾಗಿ ಬೆಳೆಸಲಾಗುತ್ತದೆ. ಇದಕ್ಕೆ ಕನ್ನಡದಲ್ಲಿ ಈ ಹೂವಿಗೆ ಕಸ್ತೂರಿ ಪಟ್ಟಿ, ಕಣಗಿಲೆ ಹಾಗೂ ಕುದುರೆ ವಿಷದ ಗಿಡ ಅಂತಲೂ ಕರೆಯುತ್ತಾರೆ.

ಇದನ್ನು ಓದಿ : Karnataka Lok Sabha Election : ಕರ್ನಾಟಕ ಲೋಕಸಭಾ ಚುನಾವಣೆ, 1 ಗಂಟೆ ಹೊತ್ತಿಗೆ ರಾಜ್ಯದಲ್ಲಿ 41.59% ರಷ್ಟು ಮತದಾನ!

ಈ ಸಸ್ಯದ ವಿವಿಧ ಭಾಗಗಳು ಅನೇಕ ಆಯುರ್ವೇದ ಔಷಧಗಳಲ್ಲಿ ಉಪಯೋಗದಲ್ಲಿವೆ. ಈ ಗಿಡದ ಬೇರು, ತೊಗಟೆ, ಬೀಜ ಮತ್ತು ಇತರ ಭಾಗಗಳೂ ವಿಷಕಾರಿಯಾದವು. ಅದರ ಹಾಲಿನಂಥ ದ್ರವದಲ್ಲಿರುವ ಗ್ಲೈಕೊಸೈಡ್ ಎಂಬ ವಸ್ತು ಹೃದಯ ಮತ್ತು ಬೆನ್ನುನರಗಳ ಮೇಲೆ ನಿಶ್ಚೇತನಗೊಳಿಸುವ ಪರಿಣಾಮವನ್ನು ಬೀರುವುದು. ಈ ಸಸ್ಯದ ಸುಟ್ಟಬೂದಿಯಲ್ಲಿ ಪೊಟ್ಯಾಸಿಯಂ ಲವಣಗಳು ಅಧಿಕವಾಗಿರುತ್ತವೆ. ಬೇರಿನ ತೊಗಟೆಯಿಂದ ಇಳಿಸುವ ಒಂದು ಜಾತಿಯ ತೈಲವನ್ನು ಚರ್ಮರೋಗಕ್ಕೆ ಔಷಧಿಯಾಗಿ ಬಳಸುವರು.

Source : https://kannada.news18.com/news/national-international/nurse-who-unknowingly-ate-indian-oleander-flower-died-in-kerala-sns-1689423.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *