Aadhaar-Ration Card Link: 2 ಅಥವಾ ಅದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವವರು ಮತ್ತು ಅನರ್ಹರು ಸಬ್ಸಿಡಿ ದರದಲ್ಲಿ ಸಿಗುವ ಪಡಿತರವನ್ನು ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ರೇಷನ್ ಕಾರ್ಡ್‍ಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.

ನವದೆಹಲಿ: ಇದೀಗ ಜೂನ್ 30ರ ನಂತರವೂ ನೀವು ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ನಿಮ್ಮ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರವು ಮತ್ತೆ ವಿಸ್ತರಿಸಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರ ಪಡಿತರ ಚೀಟಿ ವಿಚಾರದಲ್ಲಿ ಕಟ್ಟುನಿಟಿನ ನಿಯಮಗಳನ್ನು ಜಾರಿಗೊಳಿಸಿದೆ. ಉಚಿತ ಅಂತ್ಯೋದಯ ಅನ್ನ ಯೋಜನೆ ಯೋಜನೆಯನ್ನು ಪಡೆಯಲು ಆಧಾರ್‌ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೀಗಾಗಿ ಅನರ್ಹರನ್ನು ಪತ್ತೆಹಚ್ಚಲು ಮತ್ತು ಬಳಕೆದಾರರು ಬಹು ಪಡಿತರ ಚೀಟಿಗಳನ್ನು ಹೊಂದುವುದನ್ನು ತಡೆಯಲು ಸರ್ಕಾರ ಈ ನಿಯಮವನ್ನು ರೂಪಿಸಿದೆ. ನೀವು ನಿಮ್ಮ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಸ್ಥಳೀಯ ಪಡಿತರ ಕಚೇರಿಗೆ ಹೋಗಬೇಕು. ಇದೀಗ ಪಡಿತರ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಆಧಾರ್-ಪಡಿತರ ಚೀಟಿ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30 ಕೊನೆಯ ದಿನಾಂಕವಾಗಿತ್ತು. ಇದೀಗ ಈ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಇದುವರೆಗೆ ತಮ್ಮ ದಾಖಲೆಗಳನ್ನು ಲಿಂಕ್ ಮಾಡದ ಜನರಿಗೆ ಸಾಕಷ್ಟು ಸಮಯ ಸಿಕ್ಕಂತಾಗಿದೆ.
ಸೆಪ್ಟೆಂಬರ್ 30ರ ಕೊನೆಯ ದಿನಾಂಕದ ನಂತರ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಯಾರಿಗೂ ಅವಕಾಶವಿರುವುದಿಲ್ಲ. ಯುಐಡಿಎಐನ ವೆಬ್ಸೈಟ್ ಮೂಲಕ ರೇಷನ್ ಕಾರ್ಡ್ ಲಿಂಕ್ ಮಾಡಬಹುದು. ರಾಜ್ಯ ಪಿಡಿಎಸ್ ವೆಬ್ಸೈಟ್ ಮೂಲಕವೂ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಇದಲ್ಲದೆ ಸಮೀಪದ ಪಡಿತರ ಕಚೇರಿಗೆ ಹೋಗಿಯೂ ನೀವು ಉಚಿತವಾಗಿ ಆಧಾರ್ ನಂಬರ್ ಲಿಂಕ್ ಮಾಡಬಹುದಾಗಿದೆ.
ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವ ಹಂತಗಳು
1) ಮೊದಲು ಅಧಿಕೃತ ವೆಬ್‌ಸೈಟ್ food.wb.gov.inಗೆ ಭೇಟಿ ನೀಡಿ .
2) ಅಗತ್ಯವಿರುವ ವಿವರಗಳನ್ನು ನಮೂದಿಸಿ: ಆಧಾರ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ.
3 ‘ಮುಂದುವರಿಸಿ’ ಕ್ಲಿಕ್ ಮಾಡಿ.
4 ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಸ್ವೀಕರಿಸುತ್ತೀರಿ
5 OTP ನಮೂದಿಸಿ ಮತ್ತು ನಿಮ್ಮ ಪಡಿತರ ಮತ್ತು ಆಧಾರ್ ಅನ್ನು ಲಿಂಕ್ ಮಾಡಿ.