
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 27 : ಸರ್ಕಾರದ ಬಹುತೇಕ ಕಚೇರಿಗಳಲ್ಲಿ ಲಂಚ ಇಲ್ಲದೆ ಏನು ಕೆಲಸವಾಗುವುದಿಲ್ಲ ಇದರ ಬಗ್ಗೆ ಜಿಲ್ಲಾಧಿಕಾರಿಗಳಾದವರು ಆಯಾ ಇಲಾಖೆಯ ಮುಖ್ಯಸ್ಥರನ್ನು ಕರೆಯಿಸಿ ತಾವು ಪಡೆಯುವ ವೇತನಕ್ಕೆ ತಕ್ಕಂತೆ ಲಂಚ ಇಲ್ಲದೆ ಸರ್ಕಾರಿ ಕೆಲಸವನ್ನು ಮಾಡುವಂತೆ ಸೂಚನೆಯನ್ನು ನೀಡುವಂತೆ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಬಿ.ಇ.ಜಗದೀಶ್ ಜಿಲ್ಲಾಧಿಕಾರಿ ಗಳನ್ನು ಒತ್ತಾಯಿಸಿದ್ದಾರೆ.
ಭ್ರಷ್ಠಾಚಾರ ಮುಕ್ತ ಚಿತ್ರದುರ್ಗವನ್ನಾಗಿ ಮಾಡುವ ಸಲುವಾಗಿ ಆಮ್ ಆದ್ಮಿ ಪಾರ್ಟಿ ಚಿತ್ರದುರ್ಗ ಘಟಕದವತಿಯಿಂದ ಜಿಲ್ಲಾಧಿಕಾರಿಗಳ
ಕಚೇರಿ ಬಳಿ ನಿನ್ನೆಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹದ ಎರಡನೇ ದಿನವಾದ ಇಂದು ಸತ್ಯಾಗ್ರಹದ
ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ, ಆರ್.ಟಿ.ಓ. ಆಸ್ತಿ ನೊಂದಾಣಿ, ಸರ್ವೇ, ಖಜಾನೆ, ನಗರಸಭೆ,
ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜನಿಯರ್, ತಾಲ್ಲೂಕು ಕಚೇರಿ, ಸೇರಿದಂತೆ ವಿವಿಧ ಇಲಾಖೆಗಳಲ್ಲಿ
ಸಾರ್ವಜನಿಕರು ತಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಲಂಚವನ್ನು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಯಾವ
ಇಲಾಖೆಯಲ್ಲಿಯೂ ಸಹಾ ಜನತೆ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಬೇಕಾದರೆ ಲಂಚವನ್ನು ನೀಡಲೇಬೇಕಾದ ಅನಿವಾರ್ಯತೆ ಇಂದು
ನಿರ್ಮಾಣವಾಗಿದೆ ಎಂದು ದೂರಿದರು.
ಸರ್ಕಾರಿ ಕಚೇರಿಯಲ್ಲಿ ಲಂಚವನ್ನು ಪಡೆಯುವುದು ತಪ್ಪು ಎಂದು ಗೊತ್ತಿದ್ದರು ಸಹಾ ಸರ್ಕಾರಿ ಇಲಾಖೆಯ ಸಿಬ್ಬಂದಿಗಳು ಅವರ
ಅನುಕೂಲಕ್ಕೆ ತಕ್ಕಂತೆ ಲಂಚವನ್ನು ಪಡೆಯುತ್ತಿದ್ದಾರೆ ಇದರ ಬಗ್ಗೆ ಎಲ್ಲರಿಗೂ ತಿಳಿದಿದ್ದರು ಸಹಾ ಯಾರು ಮಾತನಾಡುತ್ತಿಲ್ಲ ತಮ್ಮ
ಕೆಲಸವಾದರೆ ಸಾಕು ಎಂಬಂತೆ ಇದ್ದಾರೆ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ನೀಡುವುದರ ಮೂಲಕ ಆಯಾ ಇಲಾಖೆಯ
ಮುಖ್ಯಸ್ಥರನ್ನು ಕರೆಯಿಸಿ ಸಾರ್ವಜನಿಕರು ವಿವಿಧ ರೀತಿಯ ಕೆಲಸಕ್ಕಾಗಿ ತಮ್ಮ ಕಚೇರಿಗೆ ಬಂದಾಗ ಅವರ ಕೆಲಸವನ್ನು ಅವರನ್ನು
ಓಡಾಡಿಸದೇ ಶೀಘ್ರವಾಗಿ ಲಂಚವನ್ನು ಪಡೆಯದೇ ಕೆಲಸವನ್ನು ಮಾಡಿಕೊಡುವಂತೆ ಸೂಚನೆಯನ್ನು ನೀಡುವಂತೆ ಜಿಲ್ಲಾಧಿಕಾರಿಗಳನ್ನು
ಜಗದೀಶ್ ಒತ್ತಾಯಿಸಿದ್ದಾರೆ.
ಭ್ರಷ್ಠಾಚಾರ ಮುಕ್ತ ಚಿತ್ರದುರ್ಗವನ್ನಾಗಿ ಮಾಡುವ ಸಲುವಾಗಿ ಆಮ್ ಆದ್ಮಿ ಪಾರ್ಟಿ ಚಿತ್ರದುರ್ಗ ಘಟಕದವತಿಯಿಂದ ನಿನ್ನೆಯಿಂದ
ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ ಇದನ್ನು ನೋಡಿ ಸರ್ಕಾರಿ ನೌಕರರು ಲಂಚವನ್ನು ಪಡೆಯದೆ ಸಾರ್ವಜನಿಕರ ಕೆಲಸವನ್ನು
ಉಚಿತವಾಗಿ ಮಾಡಿಕೊಡದಿದ್ದರೆ ಮುಂದಿನ ದಿನದಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸಿ ಲಂಚವನ್ನು ಪಡೆಯುವ ಸರ್ಕಾರಿ ನೌಕರನ
ಮನೆ ಮತ್ತು ಕಚೇರಿ ಮುಂದೆ ಹೋರಾಟವನ್ನು ಮಾಡಲಾಗುವುದೆಂದು ಎಚ್ಚರಿಸಿದ್ದು, ಇ.ಡಿ. ಐ.ಟಿ. ಲೋಕಾಯುಕ್ತರು ಸರ್ಕಾರಿ ನೌಕರ
ಲಂಚವನ್ನು ಪಡೆದಾಗ ಧಾಳಿಯನ್ನು ಮಾಡದೇ ಮುಂಚಿತವಾಗಿಯೆ ಅಂತಹರನ್ನು ಪತ್ತೆ ಮಾಡಿ ಅವರ ಮೇಲೆ ಧಾಳಿಯನ್ನು ಮಾಡುವುದರ
ಮೂಲಕ ಅವರಿಗೆ ತಕ್ಕ ಪಾಠವನ್ನು ಕಲಿಸಬೇಕೆಂದು ಮನವಿ ಮಾಡಿದರು.
ಈ ಸತ್ಯಾಗ್ರಹದಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕಾರ್ಯದರ್ಶಿ ರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಲಕ್ಷ್ಮೀ, ಪ್ರಧಾನ
ಕಾರ್ಯದರ್ಶಿ ವಿನೋದಮ್ಮ, ಸಂಘಟನಾ ಕಾರ್ಯದರ್ಶಿ ಶಿವಮ್ಮ. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೈಯದ್ ತನ್ವೀರ್,
ಕಾರ್ಯದರ್ಶಿ ಸೈಯದ್ ದಾವೂದ್, ಹೊಳಲ್ಕೆರೆ ಘಟಕದ ಅಧ್ಯಕ್ಷ ಮಲ್ಲಿಕಾರ್ಜನಪ್ಪ, ಜಂಟಿ ಕಾರ್ಯದರ್ಶಿ ಲೋಕೇಶಪ್ಪ, ಜಿಲ್ಲಾ
ಸಂಘಟನಾ ಕಾರ್ಯದರ್ಶಿ ರವಿ, ಹೊಸದುರ್ಗ ಅಧ್ಯಕ್ಷ ರಾಜು, ಜಿಲ್ಲಾ ಮಾಧ್ಯಮ ಸಲಹೆಗಾರ ಲೋಹಿತ್, ಯುವ ಘಟಕದ ಅಧ್ಯಕ್ಷ ರವಿ,
ಚಂದ್ರಮ್ಮ, ಪರಮೇಶ್ವರಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.
ನಗರಕ್ಕಿಂದು ಮುಖ್ಯಮಂತ್ರಿ ಚಂದ್ರು : ಭ್ರಷ್ಠಾಚಾರ ಮುಕ್ತ ಚಿತ್ರದುರ್ಗವನ್ನಾಗಿ ಮಾಡುವ ಸಲುವಾಗಿ ಆಮ್ ಆದ್ಮಿ ಪಾರ್ಟಿ ಚಿತ್ರದುರ್ಗ
ಘಟಕದವತಿಯಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ನ. 28ಕ್ಕೆ ಮೂರನೇ ದಿನಕ್ಕೆ ಕಾಲಿಡುತ್ತಿದ್ದು ಇದರಲ್ಲಿ ಭಾಗವಹಿಸುವ
ಸಲುವಾಗಿ ಮಧ್ಯಾಹ್ನ 1 ಗಂಟೆಗೆ ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ
ಪೃಥ್ವಿರೆಡ್ಡಿ, ರಾಜ್ಯ ಕಾರ್ಯದರ್ಶಿ ಬಸವರಾಜು ಮುದಿಗೌಡ ಹಾಗೂ ಉಷಾ ಮೋಹನ್ ಭಾಗವಹಿಸಲಿದ್ದಾರೆ ಎಂದು ಜಗದೀಶ್ ತಿಳಿಸಿದರು.