ಚಿತ್ರದುರ್ಗ| ಒಳ ಮೀಸಲಾತಿ ಜಾರಿಗೆ ಅನುಮೋದನೆ ಮಾಡುವುದರಲ್ಲಿ ರಾಜ್ಯ ಸರ್ಕಾರ ವಿಫಲ: ಅಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಇ.ಜಗದೀಶ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 04: 30 ವರ್ಷಗಳ ಕಾಲ ನಿರಂತರ ಹೋರಾಟದಿಂದ ಒಳ ಮೀಸಲಾತಿ ಜಾರಿ ಕುರಿತು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ ಆದರೆ ಅಂದಿನಿಂದ ಇಂದಿನವರೆಗೂ ಕೂಡ ರಾಜ್ಯ ಸರ್ಕಾರ ಅನುಮೋದನೆ ಮಾಡುವುದರಲ್ಲಿ ವಿಫಲವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಕರ್ನಾಟಕ. ಚಿತ್ರದುರ್ಗ ಜಿಲ್ಲೆ ಘಟಕ ಆರೋಪಿಸಿದೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಮ್ ಆದ್ಮಿ ಪಾರ್ಟಿ ಕರ್ನಾಟಕ. ಚಿತ್ರದುರ್ಗ ಜಿಲ್ಲೆ ಘಟಕದ ಅಧ್ಯಕ್ಷರಾದ ಬಿ.ಇ.ಜಗದೀಶ್ ಮಾತನಾಡಿ, ಕಡು ಬಡತನದಲ್ಲಿ ಜನಿಸಿದ ಅದೆಷ್ಟೋ ಜನಾಂಗದವರು ಇಂದಿಗೂ ಕೂಡ ಬಡತನ ರೇಖೆಗಿಂತ ಕೆಳ ವರ್ಗದಲ್ಲೇ ಇದ್ದಾರೆ ಇಂಥವರಿಗೆ ಒಳ ಮೀಸಲಾತಿ ಜಾರಿ ಆಗುವುದರಿಂದ ಅವರ ಆರ್ಥಿಕ ಅಭಿವೃದ್ಧಿಯು ಸಹ ವೃದ್ಧಿಸಲಿದೆ ಅಷ್ಟೇ ಅಲ್ಲದೆ ಒಳ ಮೀಸಲಾತಿ ಜಾರಿ ಆಗುವುದರಿಂದ ಅದೆಷ್ಟು ಕುಟುಂಬಗಳು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತವೆ.ಬಹುತೇಕ ರಾಜಕಾರಣಿಗಳು ಮೀಸಲಾತಿಯ ಅವಕಾಶವನ್ನು ಪಡೆದುಕೊಂಡು ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ ಅಂತಹ ರಾಜಕಾರಣಿ ವ್ಯಕ್ತಿಗಳೇ ಇಂದು ಒಳ ಮೀಸಲಾತಿಯ ಕನೆ ಪದರು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಮುದಾಯಕ್ಕೆ ಮಾಡಿದ ಮೋಸವೆಂದರೆ ತಪ್ಪಾಗಲಾರದು ಎಂದು ತಿಳಿಸಿದರು.

ಮಾದಿಗ ಸಮುದಾಯದವರು ನಿರಂತರ ಹೋರಾಟದಿಂದ ಒಳ ಮೀಸಲಾತಿಗೆ ಧ್ವನಿಯೆತ್ತಿದ್ದಾರೆ ಕಳೆದ ಎರಡು ತಿಂಗಳ ಹಿಂದೆ ಸುಪ್ರೀಂಕೋರ್ಟ್ ನೀಡಿದ ತೀರ್ಪುನಿಂದ ಅವರ ಬದುಕು ಬದಲಾಗುತ್ತದೆ ಎನ್ನುವ ಕಲ್ಪನೆ ಎಲ್ಲರ ಮನೆ ಮಾತಾಗಿದ್ದು ಆದರೆ ಸರ್ಕಾರ ಮಾತ್ರ ಅದಕ್ಕೆ ಅನುಮೋದನೆ ನೀಡಲು ಹಿಂದೇಟು ಹಾಕುತ್ತಿದೆ. ಒಳ ಮೀಸಲಾತಿ ಅಂಗೀಕಾರ ಮಾಡುವ ಕುರಿತಾಗಿ ಈಗಲೂ ಸಹ ನಿರಂತರ ದಲಿತ ಸಮುದಾಯಗಳ ಹೋರಾಟ ಮಾಡುತ್ತಲೇ ಇದ್ದಾರೆ, ಸಂಬಂಧಪಟ್ಟ ಸ್ವಾಮೀಜಿಗಳು ಸಹ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸುತ್ತಲೇ ಇದ್ದಾರೆ ಆದರೂ ಸಹ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಂತಿದೆ, ಒಳ ಮೀಸಲಾತಿಯನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕೆನ್ನುವ ಸಮುದಾಯಗಳು ಮತ್ತೆ ಸಂಕಷ್ಟಕ್ಕೆ ಸಿಗುವಂತಹ ಪರಿಸ್ಥಿತಿ ಎದುರಾಗಿದೆ ಎಂದಿದ್ದಾರೆ.

ಒಳ ಮೀಸಲಾತಿ ಜಾರಿ ಕುರಿತು ಸುಪ್ರೀಂ ಕೋರ್ಟ್ ಸೂಚನೆಯನ್ನು ನೀಡಿದ್ದರು ಸಹಾ ಇದರ ಬಗ್ಗೆ ಆಯಾ ಸಮುದಾಯದ ಚುನಾಯಿತ ಪ್ರತಿನಿಧಿಗಳು ಇದರ ಬಗ್ಗೆ ಮಾತನಾಡದಿರುವುದು ವಿಪರ್ಯಾಸವಾಗಿದೆ. ಈ ಮೀಸಲಾತಿ ಜಾರಿಯಾದರೆ ನಮ್ಮ ಮೀಸಲಾತಿ ಕೈತಪ್ಪುತ್ತದೆ ಎಂಬ ಭಯದಿಂದ ಇದನ್ನು ಜಾರಿ ಮಾಡಲು ವಿಳಂಭ ಮಾಡುತ್ತಿದ್ದಾರೆ ನೊಂದವರ ಧ್ವನಿಯಾಗಿ ಅಮ್ ಆದ್ಮಿ ಪಾರ್ಟಿ ಕರ್ನಾಟಕ. ಚಿತ್ರದುರ್ಗ ಜಿಲ್ಲೆ ಘಟಕ ಕೆಲಸ ಮಾಡಲಿದೆ ಅವರ ಪರವಾಗಿ ಹೋರಾಟವನ್ನು ಮಾಡಲಿದೆ. ಸರ್ಕಾರ ಇದನ್ನು ಜಾರಿ ಮಾಡದಿದ್ದರೆ ಮುಂದಿನ ದಿನದಲ್ಲಿ ವಿಧಾನಸೌಧ ಮುತ್ತಿಗೆಯನ್ನು ಸಹಾ ಹಾಕಲಾಗುವುದು, ಈ ಮೀಸಲಾತಿಯ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ಸಹಾ ಯಾವ ಮಾತನ್ನು ಸಹಾ ಹೇಳುತ್ತಿಲ್ಲ ಬರೀ ಮಾತಿನಲ್ಲಿ ಭಾಷಣದಲ್ಲಿ ಹಿಂದುಳಿದವರ ಪರವಾಗಿ ನಾವು ಇದ್ದೇವೆ ಎಂದು ಹೇಳುವ ರಾಜಕೀಯ ಪಕ್ಷದ ಮುಖಂಡರು ಇದನ್ನು ಜಾರಿ ಮಾಡಿಸಲು ಮುಂದಾಗಬೇಕಿದೆ ಎಂದು ವಿವಿಧ ರಾಜಕೀಯ ಪಕ್ಷದವರನ್ನು ಜಗದೀಶ್ ಆಗ್ರಹಿಸಿದರು.

ಮೀಸಲಾತಿಯನ್ನು ನೀಡುವುದಾದರೆ ರಾಜ್ಯದ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಹಂಚಿಕೆ ಮಾಡಬೇಕಿದೆ, ಇದಕ್ಕೆಜನಗಣತಿಯನ್ನು ಮಾಡಿಸುವುದರ ಮೂಲಕ ಮೀಸಲಾತಿಯನ್ನು ನೀಡಬೇಕಿದೆ ಇಲ್ಲಿ ಯಾರಿಗೂ ಸಹಾ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ಮೀಸಲಾತಿಯನ್ನು ಹಂಚಿಕೆ ಮಾಡಬೇಕಿದೆ. ಇದರ ಬಗ್ಗೆ ವಿವಿಧ ಮಠಾಧೀಶರನ್ನು ಬೇಟಿ ನಮ್ಮ ಹೋರಾಟಕ್ಕೆ ಬೆಂಬಲವನ್ನುನೀಡುವಂತೆ ಮನವಿ ಮಾಡಲಾಗಿದೆ. ಈವರೆವಿಗೂ ಮೀಸಲಾತಿಯನ್ನು ಅನುಭವಿಸಿದರು ಇನ್ನೂ ಮುಂದೆ ಬೇರೆಯವರಿಗೆ ಮೀಸಲಾತಿ ಸಿಗುವಂತೆ ಮಾಡಬೇಕಿದೆ ಎಂದು ಒತ್ತಾಯಿಸಿದರು,

ಗೋಷ್ಟಿಯಲ್ಲಿ ಅಮ್‍ಆದ್ಮಿಪಾರ್ಟಿ ಕರ್ನಾಟಕ. ಚಿತ್ರದುರ್ಗ ಜಿಲ್ಲೆ ಘಟಕದ ಸೈಯದ್ ಷಾ ತನ್ವೀರ್, ಲೋಕೇಶರಪ್ಪ, ರಾಮಣ್ಣ ಭಾಗವಹಿಸಿದ್ದರು.

Leave a Reply

Your email address will not be published. Required fields are marked *