ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್
ಚಿತ್ರದುರ್ಗ: ಫೆ.10
ಮಕ್ಕಳಲ್ಲಿ ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆಯಾಗುವುದು, ರಕ್ತಹೀನತೆ, ಹೊಟ್ಟೆ ನೋವು ಗುದದ್ವಾರದಲ್ಲಿ ತುರಿಕೆ ಇಂತಹ ಸಮಸ್ಯೆಗಳು ಕಂಡು ಬಂದಲ್ಲಿ ಮಕ್ಕನ್ನು ತಕ್ಷಣವೇ ವೈದ್ಯರಲ್ಲಿ ಕರೆತಂದು ಆರೋಗ್ಯ ಪರೀಕ್ಷೆ ಮಾಡಿದುವುದು ಸೂಕ್ತ ಏಕೆಂದರೆ ಇದು ಮಗುವಿನ ದೇಹದಲ್ಲಿ ಜಂತುಹುಳುಗಳ ಸಮಸ್ಯೆಯಾಗಿರಬಹುದು ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಬೆಳಗಟ್ಟ ಸರ್ಕಾರಿ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ನಳಿನಾಕ್ಷಿ ಸಲಹೆ ನೀಡಿದರು.
ಅವರು ಮಂಗಳವಾರ ರಾಷ್ಟ್ರೀಯ ಜಂತುಹುಳುಗಳ ನಿವಾರಣಾ ದಿನದ ಅಂಗವಾಗಿ ಚಿತ್ರದುರ್ಗ ತಾಲ್ಲೂಕು ಬೆಳಗಟ್ಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಭಾರತದಂತಹ ದೇಶಗಳಲ್ಲಿ ಪ್ರತಿವರ್ಷ 20 ಕೋಟಿಗೂ ಹೆಚ್ಚು ಮಕ್ಕಳು ಈ ಸಮಸ್ಯೆಗೆ ಒಳಗಾಗುತ್ತಾರೆ ಮಕ್ಕಳಲ್ಲಿ ಜಂತುಹುಳು ಸೋಂಕು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಅಶುದ್ಧ ಆಹಾರ, ನೀರು ಅಥವಾ ಮಣ್ಣಿನ ಮೂಲಕ ಹರಡುತ್ತದೆ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುವುದು ಆತಂಕಕಾರಿ ವಿಷಯವಾಗಿದೆ ಈ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಫೆಬ್ರವರಿ10ರಂದು ರಾಷ್ಟ್ರೀಯ ಜಂತುಹುಳು ನಿವಾರಣ ದಿನವನ್ನಾಗಿ ಆಚರಿಸಲಾಗುತ್ತದೆ.ಈ ದಿನ ಆರೋಗ್ಯ ಇಲಾಖೆಯ ಎಲ್ಲಾ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಪ್ರತಿ ಅಂಗನವಾಡಿ ಶಾಲಾ ಕಾಲೇಜುಗಳಿಗೆ ಭೇಟಿನೀಡಿ 1ರಿಂದ 19 ವರ್ಷ ವಯಸ್ಸಿನ ಮಕ್ಕಳಗೆ ಜಂತುಹುಳು ಸೋಂಕು ತಡೆಗಟ್ಟುವ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ ಇದರಿಂದ ಯಾವುದೇ ಮಗುವು ವಂಚಿತವಾಗಬಾರದು ಎಲ್ಲಾ ಮಕ್ಕಳ ಅಲ್ಬೆಂಡಾಜೋಲ್ ಮಾತ್ರೆ ತೆಗೆದುಕೊಳ್ಳಬೇಕು ಈ ಕಾರ್ಯಕ್ರಮ ಯಶಸ್ವಿಗೊಳಲು ಸಮಾಜ ಮತ್ತು ಸಮುದಾಯದ ಎಲ್ಲರ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹೇಶ್ ಡಿ, ಅರೋಗ್ಯ ನೀರಿಕ್ಷಣಾಧಿಕಾರಿ, PHCO ಶುಭಶ್ರೀ, ಟಿ. ನಿರ್ಮಲ, ಅಶಾ ಕಾರ್ಯಕರ್ತೆಯರು, ಇತರರು ಭಾಗವಹಿಸಿದ್ದರು.