ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 25 : ನಗರದ ವೀರಶೈವ ಅರ್ಬನ್ ಬ್ಯಾಂಕಿನ ಅಧ್ಯಕ್ಷರು, ಸಮಾಜದ ಮುಖಂಡರಾದ ಸಿದ್ದಾಪುರದ ಪಟೇಲ್ ಶಿವಕುಮಾರ್ ಅವರ ಹಿರಿಯ ಮಗನಾದ ಅಭಿಷೇಕ್ ಎಸ್. ಪಟೇಲ್ (28) ಅವರು ಇಂದು ಬೆಳಿಗ್ಗೆ ಅಕಾಲಿಕ ಮರಣ ಹೊಂದಿದ್ದಾರೆ.
ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ನಗರದ ಭೀಮಸಮುದ್ರ ರಸ್ತೆಯಲ್ಲಿನ ಧವಳಗಿರಿ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ 25ರ ಸಂಜೆ 5:00 ಘಂಟೆಯಿಂದ ವ್ಯವಸ್ಥೆ ಮಾಡಲಾಗಿದೆ. ಮೃತರು ತಂದೆ-ತಾಯಿ, ತಮ್ಮ, ಅಜ್ಜ, ಅಜ್ಜಿ ಸೇರಿದಂತೆ ಆಪಾರವಾದ ಬಂಧು-ಬಳಗವನ್ನು ಆಗಲಿದ್ದಾರೆ.
ದಿನಾಂಕ 26-8-2024 ಸೋಮವಾರ ಬೆಳಿಗ್ಗೆ ಅವರ ಸ್ವಗ್ರಾಮವಾದ ಸಿದ್ದಾಪುರದಲ್ಲಿ 12 ಗಂಟೆಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.