ವೈದ್ಯ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ನಿಷ್ಟಕ್ಷಪಾತ  ತನಿಖೆಯಾಗಲಿ, ಜಿಲ್ಲಾಧಿಕಾರಿಗಳಿಗೆ ಎಬಿವಿಪಿ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 02: ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಯ ಆತ್ಮಹತ್ಯೆಯ ಪ್ರಕರಣವನ್ನು ನಿಷ್ಟಕ್ಷಪಾತವಾಗಿ ತನಿಖೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಎಬಿವಿಪಿ ಮನವಿ ಸಲ್ಲಿಸಲಾಯಿತು.

ಚನ್ನರಾಯಪಟ್ಟಣ ಮೂಲದ ಮನೋಜ್ ಎಂಬ ವೈದ್ಯಕೀಯ ಶಿಕ್ಷಣದ ಎರಡನೇ ವರ್ಷದ ವಿದ್ಯಾರ್ಥಿಯು ಚಿತ್ರದುರ್ಗ ನಗರದ ಬಸವೇಶ್ವರ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಬುಧವಾರ ರಾತ್ರಿ ಅದೇ ವಿದ್ಯಾರ್ಥಿನಿಲಯದ ಜೆ.ಎಂ.ಐ.ಟಿ ಕ್ಯಾಂಪಸ್‍ನಲ್ಲಿದ್ದಂತಹ ನಿಲಯದ ಕೊಠಡಿಯಲ್ಲಿ ಆತ್ಯಹತ್ಯೆಗೆ ಶರಣಾಗಿರುತ್ತಾರೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಯ ಸಾವಿಗೆ ಕಾರಣವನ್ನು ಸೂಕ್ತವಾದ ಹಾಗೂ ನಿಷ್ಪಕ್ಷಪಾತವಾದ ತನಿಖೆಯ ಮೂಲಕ ವಿದ್ಯಾರ್ಥಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಗೋಪಿ, ಸಾಮಾಜಿಕ ಜಾಲತಾಣ ನಾನು ಚಿತ್ರಸ್ವಾಮಿ, ಹಾಸ್ಟೆಲ್ ಪ್ರಮುಖ್ ಸುದೀಪ್.ಪಿ.ಕೆ, ಕಾರ್ಯಕರ್ತರಾದ ಸಂಜಯ್, ನಿತೀಶ್, ಅನಿಲ್, ವರವೇಶ್, ಪ್ರಶಾಂತ್, ಅಪ್ಪು ಮತ್ತು ವೆಂಕಿ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *