ಬಸ್ ಸೌಲಭ್ಯ ಕೊರತೆ ವಿರುದ್ಧ ABVP ಪ್ರತಿಭಟನೆ: ತಕ್ಷಣ ಪರಿಹಾರಕ್ಕೆ ಆಗ್ರಹ; ಹಿರಿಯೂರು ಡಿಪೋಗೆ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 13

ಹಿರಿಯೂರು ತಾಲೂಕಿನಲ್ಲಿ ಇರುವ ಬಸ್ ಸಮಸ್ಯೆಯನ್ನು ಪರಿಹಾರ ಮಾಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ಬಸ್ ನಿಲ್ದಾಣದಲ್ಲಿ ಪ್ರತಿಭಟನೆಯನ್ನು ನಡೆಸಿ, ಹಿರಿಯೂರು ಕ.ರಾ.ರ.ಸಾ.ನಿ, ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಹಿರಿಯೂರು ತಾಲೂಕಿನಲ್ಲಿ ಪ್ರತಿ ಹೋಬಳಿ ಗ್ರಾಮ ಪಂಚಾಯಿತಿ, ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತಾಲೂಕು ಕೇಂದ್ರಕ್ಕೆ ಆಗಮಿಸುತ್ತಾರೆ. ಪ್ರಮುಖವಾಗಿ ಧರ್ಮಪುರ ಹೋಬಳಿ, ಜವಗೊಂಡನಹಳ್ಳಿ, ಐಮಂಗಲ ಈ ಪ್ರದೇಶಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಎದುರಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಹಿರಿಯೂರು ನಗರದಲ್ಲಿ ವಾಣಿ ಕಾಲೇಜಿನ ಬಳಿ ಬಸ್ ನಿಲ್ಲಿಸುವುದಿಲ್ಲ ಹಾಗೂ ನಗರದ ಸರ್ವಿಸ್ ರೋಡಿನಲ್ಲಿ ನಿಲ್ಲಿಸದೆ ಹೈವೇ ಮಧ್ಯದಲ್ಲಿ ಗಾಡಿಯನ್ನು ನಿಲ್ಲಿಸುತ್ತಾರೆ. ಧರ್ಮಪುರದಿಂದ – ಶಿರಾ ಮಾರ್ಗವಾಗಿ ತುಮಕೂರು ಮತ್ತು ಬೆಂಗಳೂರಿನತ್ತ ಸಂಚರಿಸುವ ಮಾರ್ಗ ಹಿರಿಯೂರು ಚಿತ್ರದುರ್ಗಕ್ಕೆ ನಿತ್ಯ ಸಂಚರಿಸುವ ಮಾರ್ಗಗಳ ಸರಕಾರಿ ಬಸ್ ನಲ್ಲಿ ಸೀಟ್ ಸಿಗುವುದಿರಲಿ ಒಳಗಡೆ ಕಾಲಿಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಹಿರಿಯೂರಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2026-27ನೇ ಸಾಲಿನಲ್ಲಿ ಸುಮಾರು 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ನಗರದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿ ಇರುತ್ತದೆ ಸಂಸ್ಥೆಯಲ್ಲಿ ತರಗತಿಗಳು ಪ್ರತಿ ದಿನ ಬೆಳಗ್ಗೆ 9:30 ರಿಂದ ಪ್ರಾರಂಭವಾಗಿ ಸಂಜೆ 5:00 ಕ್ಕೆ ಮುಕ್ತಾಯವಾಗುತ್ತದೆ. ಹಿರಿಯೂರು ನಗರದಿಂದ ಸಂಸ್ಥೆಗೆ ಬಂದು ಹೋಗುವ ಸಲುವಾಗಿ ಬೆಳಗ್ಗೆ 8:45 ಕ್ಕೆ 9:00 ಗಂಟೆಗೆ 9:15ಕ್ಕೆ ಹಾಗೂ ಸಂಜೆ 4:15ಕ್ಕೆ 4:30 ಮತ್ತು 5:00 ಗಂಟೆಗೆ ಬಸ್‍ಗಳನ್ನು ಹಿರಿಯೂರು- ಚಿತ್ರದುರ್ಗ ಸರ್ವಿಸ್ ರಸ್ತೆಯ ಮೂಲಕ ಸಂಚರಿಸಿ ಕಾಲೇಜು ಮುಂಭಾಗ ನಿಲುಗಡೆ ಮಾಡಲು ಬಸ್ ಸೌಲಭ್ಯವನ್ನು ಕಲ್ಪಿಸಿ ವಿದ್ಯಾರ್ಥಿಗಳಿಗೆ ವ್ಯಾಸಾಂಗ ದೃಷ್ಟಿಯಿಂದ ಅನುಕೂಲ ಮಾಡಿಕೊಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಆಗ್ರಹಿಸಿತು.

ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ವೀರೇಶ್ ಯಾದವ್. ರಾಜ್ಯಕಾರಣಿ ಸದಸ್ಯ ಕುಬೇರ್ ಯಾದವ್ ,ಸುದೀಪ್, ಕನಕ ರಾಜ್ ಕೋಡಿಹಳ್ಳಿ , ಟಿ ,ತರುಣ್ ಕುಮಾರ್ ಚೇತನ್, ಅಕ್ಷಯ್ ಕುಮಾರ್, ರಮೇಶ್, ಓಬಳೇಶ್, ತಿಪ್ಪೇಸ್ವಾಮಿ, ರಂಗನಾಥ್, ಚಿದಾನಂದ, ಪುರುಷೂೀತ್ತಮ್, ಕಾವ್ಯ, ರಕ್ಷಿತಾ, ಭೂಮಿಕಾ, ಭವಾನಿ, ಕಾರ್ಯಕರ್ತರಗಳು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *