IPL 2023: ಅಂಕಿ ಅಂಶಗಳ ಪ್ರಕಾರ CSK ತಂಡವೇ ಬಲಿಷ್ಠ, ಆದರೆ RCB…

IPL 2023 RCB vs CSK: ಐಪಿಎಲ್​ನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸೋಮವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.ಉಭಯ ತಂಡಗಳ ಅಭಿಮಾನಿಗಳಿಗೆ ಪ್ರತಿಷ್ಠಿತ ವಿಷಯವಾಗಿರುವ ಈ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಚಾರಗಳು ಈಗಾಗಲೇ ಶುರುವಾಗಿದೆ. ಇಲ್ಲಿ ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠವಾಗಿದ್ದರೂ ಅಂಕಿ ಅಂಶಗಳು ಹೇಳೋದೇ ಬೇರೆ.ಅಂದರೆ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳು ಐಪಿಎಲ್​ನಲ್ಲಿ ಒಟ್ಟು 30 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಆರ್​ಸಿಬಿ ಗೆದ್ದಿರುವುದು ಕೇವಲ 10 ಬಾರಿ ಮಾತ್ರ. ಇನ್ನು ಒಂದು ಪಂದ್ಯವು ರದ್ದಾಗಿತ್ತು. ಅಂದರೆ 30 ಪಂದ್ಯಗಳಲ್ಲಿ 19 ಬಾರಿ ಜಯ ಸಾಧಿಸಿರುವ ಸಿಎಸ್​ಕೆ ತಂಡವು ಮೇಲುಗೈ ಹೊಂದಿದೆ. ಇದಾಗ್ಯೂ ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡವು ಚೆನ್ನೈ ವಿರುದ್ಧ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತ್ತು. ಐಪಿಎಲ್ 2022 ರಲ್ಲಿ ಮೊದಲ ಪಂದ್ಯದಲ್ಲಿ ಸಿಎಸ್​ಕೆ 23 ರನ್​ಗಳಿಂದ ಜಯಗಳಿಸಿದರೆ, 2ನೇ ಪಂದ್ಯದಲ್ಲಿ 13 ರನ್​ಗಳಿಂದ ಗೆದ್ದು ಆರ್​ಸಿಬಿ ಸೇಡು ತೀರಿಸಿಕೊಂಡಿತ್ತು.ಈ ಬಾರಿ ಕೂಡ ಆರ್​ಸಿಬಿ ಗೆಲ್ಲುವ ವಿಶ್ವಾಸದಲ್ಲಿದೆ. ಏಕೆಂದರೆ ಈ ಸಲ ಪಂದ್ಯ ನಡೆಯುತ್ತಿರುವುದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಇಲ್ಲಿ ಆಡಲಾಗಿರುವ 3 ಪಂದ್ಯಗಳಲ್ಲೂ ಆರ್​ಸಿಬಿ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಚಿನ್ನಸ್ವಾಮಿ ಪಿಚ್​ನಲ್ಲಿ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ, 2ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್​ನಿಂದ ವಿರೋಚಿತ ಸೋಲೋಪ್ಪಿಕೊಂಡಿತು. ಇನ್ನು 3ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್​ಗಳ ಭರ್ಜರಿ ಜಯ ಸಾಧಿಸಿತು.ಇದೀಗ ಡೆಲ್ಲಿ ವಿರುದ್ಧದ ಗೆಲುವಿನ ಲಯದಲ್ಲಿರುವ ಆರ್​ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಅತ್ತ ಸಿಎಸ್​ಕೆ ತಂಡವು ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಪರಾಜಯಗೊಂಡಿದ್ದು, ಹೀಗಾಗಿ ಈ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳುವ ತವಕದಲ್ಲಿದೆ.ಒಟ್ಟಿನಲ್ಲಿ ಅಂಕಿ ಅಂಶಗಳ ಪ್ರಕಾರ ಸಿಎಸ್​ಕೆ ತಂಡವು ಮೇಲುಗೈ ಹೊಂದಿದ್ದರೂ, ಪ್ರಸ್ತುತ ಆರ್​ಸಿಬಿ ತಂಡದ ಫಾರ್ಮ್​ ಗಮನಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಬಲಿಷ್ಠ ಎನ್ನಬಹುದು.

source https://tv9kannada.com/photo-gallery/cricket-photos/ipl-2023-rcb-vs-csk-head-to-head-in-ipl-kannada-news-zp-au50-557310.html

Views: 0

Leave a Reply

Your email address will not be published. Required fields are marked *