ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಆ.23: ನ್ಯಾಯಾಲಯದಲ್ಲೇ ವಿಚಾರಣಾಧಿನ ಆರೋಪಿಯು ಹುಚ್ಚಾಟವಾಡಿ, ಕೋರ್ಟ್ ನ ಕಿಟಕಿ ಗ್ಲಾಸ್ ಹೊಡೆದು ಹಾಕಿ ಕೂಗಾಟ ಮಾಡಿರುವ ಘಟನೆ ಶುಕ್ರವಾರ ಸಿಜೆಎಂ ನ್ಯಾಯಾಲಯದಲ್ಲಿ ನಡೆದಿದೆ.
ಸಮ್ಮು ಅಲಿಯಾಸ್ ಬಷೀರ್ ಎಂಬ ಆರೋಪಿಯೇ ನ್ಯಾಯಾಲದಲ್ಲಿ ಗಾಜು ಹೊಡೆದು ಹುಚ್ಚಾಟ ಆಡಿದ ಆರೋಪಿಯಾಗಿದ್ದಾನೆ.
ಚಿತ್ರದುರ್ಗದ ನಗರ ಠಾಣೆ ವ್ಯಾಪ್ತಿಯಲ್ಲಿನ ಬ್ಯಾಂಕ್ ಕಾಲೋನಿಯಲ್ಲಿ ನಡೆದ ಮನೆ ರಾಬರಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಮ್ಮು ಅಲಿಯಾಸ್ ಬಷೀರ್ ಕಳೆದ ಕೆಲ ವರ್ಷದ ಹಿಂದೆ ಬಂಧಿತನಾಗಿ ನ್ಯಾಯಲಯಕ್ಕೆ ವಿಚಾರಣೆಗೆ ಹಾಜರಾಗುತ್ತಿದ್ದರು, ಎಂದಿನಂತೆ ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದಾಗ, ನ್ಯಾಯಾಲಯದ ಹೊರಗಡೆ ಸಮ್ಮು ತನ್ನ ಸಹಚರನ ಮೊಬೈಲ್‌ನಿಂದ ಮಾತನಾಡುತ್ತಿದ್ದನು. ಪೊಲೀಸರು ಮಾತನಾಡುವುದನ್ನು ನಿಲ್ಲಿಸುವಂತೆ ಹಲವು ಭಾರೀ ಹೇಳಿದರೂ ಕೂಡ ಮಾತನಾಡುವುದನ್ನು ಮುಂದುವರೆಸಿದ್ದನು. ಆಗ ಏರು ಧನಿಯಲ್ಲಿ ಪೊಲೀಸರು ಗದರಿದ್ದಾರೆ. ಇದರಿಂದ ಆಕ್ರೋಶಗೊಂಡ ಸಮ್ಮು ಕೈ ಕೋಳ ಹಾಕಿದ್ದ ಕೈಯಿಂದಲೇ ನ್ಯಾಯಾಲದ ಕೊಠಡಿಯ ಕಿಟಕಿ ಗಾಜಿಗೆ ಜೋರಾಗಿ ಹೊಡೆದಿದ್ದಾನೆ. ಅಲ್ಲದೆ, ಚೂರಾಗಿದ್ದ ಗಾಜನ್ನು ಹಿಡಿದು, ಅಕ್ಕ,ಪಕ್ಕದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಪೊಲೀಸರು ಸಮ್ಮುನನ್ನು ಹಿಡಿದು ಪೊಲೀಸ್ ವಾಹನಕ್ಕೆ ಕರೆದೊಯ್ದರು.