ಕೃಷಿ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಯೋಜನೆಗಳ ಸುಲಭ ಸಾಲ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಬೇಕು: ಬಿ.ಟಿ. ಜಗದೀಶ್.

ಚಿತ್ರದುರ್ಗ ಸೆ. 27

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕೃಷಿ, ಹೈನುಗಾರಿಕೆ, ಮತ್ತು ಪಶುಸಂಗೋಪನೆ ಈ ಇಲಾಖೆಗಳಲ್ಲಿ ಸರ್ಕಾರದ ಯೋಜನೆಗಳ ಅನ್ವಯ ಕೃಷಿ ಜೊತೆಗೆ ಉಪ ಕಸುಬು, ಸ್ವಯಂ ಉದ್ಯೋಗ, ಗುಡಿ ಕೈಗಾರಿಕೆ ಸಂಭಂದಿತ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕ್ ಸಾಲ ಸೌಲಭ್ಯಗಳನ್ನು ನೀಡಲು ತಾರತಮ್ಯ ನೀತಿ ಅನುಸರಿಸಿ ಕೊಲೆಟ್ರಲ್ ಸೆಕ್ಯೂರಿಟಿ ಇಲ್ಲದೆ ಸಾಲ ನೀಡದೆ.

ಸ್ವಯಂ ಉದ್ಯೋಗಗಳ ಮುಖಂತರ ಬದುಕು ಕಟ್ಟಿಕೊಳ್ಳಲು ಹಿನ್ನಡೆಯಾಗುತ್ತಿದೆ ಈ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸಂಭಂದಿಸಿದ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸರಿಯಾಗಿ ಸೂಚನೆ ನೀಡಿ ಕ್ರಮ ಕೈಗೊಂಡು ಸರ್ಕಾರಿ ಯೋಜನೆಗಳು ಸುಲಭವಾಗಿ, ಸಮರ್ಪಕವಾಗಿ ಕೈಗೆಟುಕುವಂತೆ ಕ್ರಮ ಕೈಗೊಳ್ಳಲು ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಬಿ.ಟಿ. ಜಗದೀಶ್ ಸೂಚಿಸಿದರು.

ಚಿತ್ರದುರ್ಗ ನಗರದ ಜಂಟಿ ಕೃಷಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸ್ವಯಂ ಉದ್ಯೋಗ ಕೈಗೊಳ್ಳಲು ಬೇಕಾದ ಮಾಹಿತಿ ಮತ್ತು ತರಬೇತಿಗಳ ಗುಡಿ ಕೈಗಾರಿಕೆ ಕೈಗೊಳ್ಳಲು ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಪಡೆಯಲು ಜಿಲ್ಲಾ ಯೋಜನಾ ಸಂಪನ್ಮೂಲ ಅಧಕಾರಿ ಮೋಹನ್ ಇವರನ್ನು ಸಭೆಗೆ ಕರೆಸಿ ಸಭೆಗೆ ಮಾಹಿತಿ ಪಡೆದಿದ್ದಲ್ಲದೆ ಅವರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಲ್ಲಲ್ಲಿ ನಿರುದ್ಯೋಗಿ ಯುವಕ, ಯುವತಿಯರಿಗರ ಮಾಹಿತಿ ಕಾರ್ಯಗಾರಗಳನ್ನು ಆಯೋಜನೆ ಮಾಡಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಸಭೆಗೆ ಅಧ್ಯಕ್ಷರು ಸೂಚನೆ ನೀಡಿದರು ಜೊತೆಗೆ ಯೋಜನೆ ಉಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.

ಪಶುಸಂಗೋಪನೆ ಇಲಾಖೆಯಲ್ಲಿ ಕುರಿ,ಕೋಳಿ ಸಾಕಣಿಕೆಗಾಗಿ ವಾರದಲ್ಲಿ ಎರಡುದಿನ ತರಬೇತಿಯನ್ನು ಆಯೋಜಿಸಲಾಗುತ್ತಿದ್ದು ಇದರ ಬಗ್ಗೆ ಆಸಕ್ತರು ಇಲಾಖೆಯ ಅಧಿಕಾರಿ ಮುರುಗೇಶ್ ರವರನ್ನು ಸಂಪರ್ಕ ಮಾಡಿ ಮಾಹಿತಿ ಪಡೆದು ತರಬೇತಿ ಪಡೆದುಕೊಳ್ಳಲು ಅಧ್ಯಕ್ಷರು ಮನವಿ ಮಾಡಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ರಾಮಕೃಷ್ಣ ಸಭೆಯಲ್ಲಿ ತಾಲ್ಲೂಕಿನಲ್ಲಿ ಕೃಷಿ ಚಟ್ಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದ್ದು ಗೊಬ್ಬರ ವಿತರಣೆಯಲ್ಲಿ ಸಣ್ಣ ಪುಟ್ಟ ಗೊಂದಲಗಳು ಬಿಟ್ಟರೆ ಇಲಾಖೆಯಲ್ಲಿ ಗೊಬ್ಬರ ಬೀಜ ಎಲ್ಲಾ ಪರಿಕರಗಳ ದಾಸ್ತಾನು ಸಮರ್ಪಕವಾಗಿ ಇರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸದಸ್ಯರುಗಳು ಕೆಲವು ಅಧಿಕಾರಿಗಳ ಜೊತೆಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ರೇಷ್ಮೆ ಇಲಾಖೆಗಳು ರೈತರಿಗೆ ಸೇರಬೇಕಾದ ಸೇವೆ ಮತ್ತು ಸೌಲಭ್ಯಗಳು ಸಮರ್ಪಕವಾಗಿ ಕಾಲ ಕಾಲಕ್ಕೆ ವಿತರಣೆಯಾಗಿರವ ಬಗ್ಗೆ ಮತ್ತು ಫಲಾನುಭವಿಗಳ ಅಯ್ಕೆಯ ಬಗ್ಗೆ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿ ಚರ್ಚಿಸಿ ಮಾಹಿತಿ ಪಡೆದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಪಶುಸಂಗೋಪನೆ ಮತ್ತು ತಾಲ್ಲೊಕು ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ, ಪ್ರಾಣೇಶ್ ಕೆ , ಜಿಲ್ಲಾ ಪ್ರತಿನಿಧಿ ಆರ್. ಶಶಿಧರ್, ಖಜಾಂಚಿ ಶಂಭುನಾಥ್, ನಿರ್ದೇಶಕರುಗಳಾದ ರುಗಳಾದ ಉತ್ಸವಾಂಭ ಪರಮೇಶ್, ಮಹೇಶ್ವರಪ್ಪ, ಹನುಂತರೆಡ್ಡಿ ಪಾರ್ವತಮ್ಮ ಅಜ್ಜಪ್ಪ, ಮಂಜುಳಮ್ಮ ಲಕ್ಷಮಣಪ್ಪ ಹೊಸಳ್ಳಿ ಪರುಶುರಾಮ್, ನಾಗರಾಜು ಐನಳ್ಳಿ ಕುರುಬರಹಟ್ಟಿ, ಗಂಗಧರ್ ಕುರುಬರ ಹಳ್ಳಿ, ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Views: 117

Leave a Reply

Your email address will not be published. Required fields are marked *