
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಜ.02: ಸಂಜು ವೆಡ್ಸ್ ಗೀತಾ-2 ಚಿತ್ರದ ಆಡಿಯೋವನ್ನು ಇಂದು ಚಿತ್ರದುರ್ಗದ ಬಿಗ್‍ಬಾಸ್ ಹೋಟಲ್‍ನಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಚಿತ್ರದ ನಟ ಶ್ರೀನಗರ ಕಿಟ್ಟಿ ಮಾತನಾಡಿ, ಕನ್ನಡ ಸಿನಿಮಾ ನೋಡಲು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಇನ್ನೂ
ತೆಲುಗು ಚಿತ್ರಗಳಿಗೆ ಚಿತ್ರಮಂದಿರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದ್ದು ಈ ಘಟನೆಯಿಂದ ಬಹಳ ನೊವ್ವಾಗುತ್ತದೆ. ಈ ಬಗ್ಗೆ
ಸರ್ಕಾರ ಕೂಡ ಗಮನ ಹರಿಸಬೇಕು. ಮೈಕ್ ಮುಂದೆ ಇದ್ದಾಗ ಮಾತ್ರ ಬಾಷಣ ಮಾಡದೇ ಬದುಕಿನಲ್ಲೂ ಕೂಡ
ಅಳವಡಿಸಿಕೊಳ್ಳಬೇಕು. ನಮಗೆ ನಮ್ಮ ಕನ್ನಡ ಸಿನಿಮಾಗಳನ್ನ ನೋಡಲು ಹೋರಾಟ ಮಾಡುವ ಪರಿಸ್ಥಿತಿ ಬಂದಿದ್ದು ಅದು ನಮ್ಮ
ದೌರ್ಬಾಗ್ಯವಾಗಿದೆ. ನಮ್ಮ ನೆಲದಲ್ಲಿ ನಮ್ಮ ಬಾಷೆಯ ಸಿನಿಮಾ ನೋಡಲು ನಾವು ಹೋರಾಟ ಮಾಡುವ ಪರಿಸ್ಥಿತಿ ಬಂದಿದ್ದು
ನೊವ್ವಾಗುತ್ತದೆ. ಪ್ರೀತಿಯಿಂದ ನಮ್ಮ ಬಾಷೆಗೆ ನಾವು ಗೌರವ ಕೊಡಬೇಕು ಇನ್ನೂ ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಕೂಡ
ಪ್ಯಾನ್‍ವಾರ್ ಇದ್ದು ತುಂಬಾ ಕಾಲದಿಂದಲೂ ನಡೆಯುತ್ತಾ ಬಂದಿದ್ದು ತಪ್ಪೇನಲ್ಲ ಆದರೆ ಒಳ್ಳೆಯ ಸಿನಿಮಾ ಬಂದಾಗ ನೋಡಿ ಹರಿಸಿ
ಹಾರೈಸಬೇಕು ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ
ರೇಷ್ಮೇ ಬೆಳೆಗಾರರ ಸಮಸ್ಯೆಗಳನ್ನು ಕುರಿತು ಚಿತ್ರದಲ್ಲಿ ತೋರಿಸಲಾಗಿದ್ದು, ಅವರಿಗೆ ರೇಷ್ಮೇ ಬೆಳೆಯಿಂದ ಯಾವ ರೀತಿಯ ಸಮಸ್ಯೆ
ಎದುರಾಗುವುದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ವಿವರಣೆ ನೀಡಿದ ಅವರು ಇನ್ನೂ ಸಂಜು ವೆಡ್ಸ್ ಗೀತಾ 2 ಚಿತ್ರ
ಇದೇ ತಿಂಗಳ 10 ರಂದು ಬಿಡುಗಡೆ ಆಗಲಿದ್ದು ಪ್ರೀತಿ ಹಾಗೂ ಪ್ರಾಮಾಣಿಕತೆಯಿಂದ ಚಿತ್ರ ಮಾಡಿದ್ದೇವೆ. ಅಭಿಮಾನಿಗಳ ಪ್ರೀತಿ
ವಿಶ್ವಾಸ ಚಿತ್ರದ ಮೇಲಿರಬೇಕು
ಚಿತ್ರದುರ್ಗದಲ್ಲಿ ಪ್ರಸನ್ನ ಥೇಯೇಟರ್‍ಗಳಲ್ಲಿ ಮ್ಯಾಕ್ಸ್, ಹಾಗೂ ವೆಂಕಟೇಶ್ವರ ಚಿತ್ರದಮಂದಿರದಲ್ಲಿ Ui ಚಿತ್ರ ಓಡುತ್ತಿದ್ದು, Ui ಚಿತ್ರದ
ನಿರ್ಮಾಪಕರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಅವರು, ಚಿತ್ರವನ್ನು ನೋಡಿ ಹಾರೈಸಬೇಕು ಎಂದು ಜನರಲ್ಲಿ ಮನವಿ
ಮಾಡಿದರು. ಈ ಸಂದರ್ಭದಲ್ಲಿ ಸಿನಿಮಾದ 2 ಹಾಡುಗಳನ್ನ ಸಹ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಜು ವೆಡ್ಸ್ ಗೀತಾ-2 ಚಿತ್ರದ ನಿರ್ಮಾಪಕ ಬಿ ಕಾಂತರಾಜ್, ನಿರ್ದೇಶಕರಾದ ಕುಮಾರ್, ಭಾರ್ಗವಿ ದ್ರಾವಿಡ್
ಅವರು ಹಾಜರಿದ್ದರು.