ವಿರಾಟ್ ಬಯೋಪಿಕ್‌ನಲ್ಲಿ ತೆಲುಗು ನಟ ರಾಮ್..! ಕಿಂಗ್‌ ಕೊಹ್ಲಿ ಕುರಿತು ನಟನ ಇಂಟ್ರಸ್ಟಿಂಗ್‌ ಹೇಳಿಕೆ ವೈರಲ್‌

Ram Pothineni on Virat Kohli biopic : ಪ್ರಸಿದ್ಧ ಧ್ವನಿ ಕಲಾವಿದ ಸಂಕೇತ್ ಮ್ಹಾತ್ರೆ ಅವರು ರಾಮ್ ಪೋತಿನೇನಿ ಅವರನ್ನು ಸಂದರ್ಶನ ನಡೆಸಿದರು. ಈ ವೇಳೆ ರಾಮ್‌ ಟೀಂ ಇಂಡಿಯಾ ಮಾಜಿ ನಾಯಕ ಕಿಂಗ್‌ ವಿರಾಟ್‌ ಕೊಹ್ಲಿ ಬಯೋಪಿಕ್‌ ಕುರಿತು ಇಂಟ್ರಸ್ಟಿಂಗ್‌ ವಿಚಾರಗಳನ್ನು ಹಂಚಿಕೊಂಡರು.

Skanda movie : ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಸ್ಕಂದ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದು, ಚಿತ್ರತಂಡ ಸಿನಿಮಾ ಪ್ರಮೋಷನ್ ಶುರು ಮಾಡಿದೆ. ನಟ ರಾಮ್ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಅವರ ಬಯೋಪಿಕ್ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮಾಸ್ ಡೈರೆಕ್ಟರ್ ಬೋಯಪಾಟಿ ಶ್ರೀನು- ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಕಾಂಬಿನೇಷನ್ ಚಿತ್ರ ಸ್ಕಂದ. ಈ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ ಮತ್ತು ಸಾಯಿ ಮಂಜ್ರೇಕರ್ ನಾಯಕಿಯರಾಗಿ ನಟಿಸಿದ್ದಾರೆ. ಹೈ-ವೋಲ್ಟೇಜ್ ಆಕ್ಷನ್ ಮತ್ತು ಮಾಸ್ ಎಂಟರ್‌ಟೈನರ್ ಚಿತ್ರ ಇದೆ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣದಲಿದೆ. ‘ಅಖಂಡ’ದಂತಹ ಬಹುದೊಡ್ಡ ಬ್ಲಾಕ್ ಬಸ್ಟರ್ ಹಿಟ್ ನಂತರ ಬೋಯಪಾಟಿ ನಿರ್ದೇಶನದ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು, ಟೀಸರ್ ಮತ್ತು ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. 

ಇತ್ತೀಚಿಗೆ ಪ್ರಸಿದ್ಧ ಧ್ವನಿ ಕಲಾವಿದ ಸಂಕೇತ್ ಮ್ಹಾತ್ರೆ ಅವರು ರಾಮ್ ಅವರನ್ನು ಸಂದರ್ಶನ ನಡೆಸಿದರು. ಈ ವೇಳೆ ಸಂಕೇತ್‌ “ನೀವು ವಿರಾಟ್ ಕೊಹ್ಲಿಯಂತೆ ಕಾಣುತ್ತೀರಿ ಎಂದು ಅನೇಕ ನೆಟಿಜನ್‌ಗಳು ಹೇಳುತ್ತಾರೆ, ಅವರ ಜೀವನಚರಿತ್ರೆಯಲ್ಲಿ ನಟಿಸಲು ನಿಮಗೆ ಅವಕಾಶ ಸಿಕ್ಕರೆ ಮಾಡುತ್ತೀರಾ?” ಎಂದು ಪ್ರಶ್ನೆ ಮಾಡಿದರು. ಇದಕ್ಕೆ ರಾಮ್‌ ‘ಕೊಹ್ಲಿ ಬಯೋಪಿಕ್‌ನಲ್ಲಿ ಅವಕಾಶ ಸಿಕ್ಕರೆ ಖಂಡಿತಾ ಮಾಡುತ್ತೇನೆ. ಅದಕ್ಕಾಗಿ ಕ್ರಿಕೆಟ್ ಕೂಡ ಕಲಿಯುತ್ತೇನೆ” ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು. 

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Source : https://zeenews.india.com/kannada/entertainment/skanda-actor-ram-pothineni-reaction-on-virat-kohli-biopic-160607

Leave a Reply

Your email address will not be published. Required fields are marked *