
‘ಆದಿಪುರುಷ್’ ಬಳಿಕ ಬಾಲಿವುಡ್ ಅಂಗಳದಲ್ಲಿ ಮತ್ತೆ ರಾಮಾಯಣ ಕಾವ್ಯ ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಬಹಳ ದೊಡ್ಡಮಟ್ಟದಲ್ಲಿ ನಿತೇಶ್ ತಿವಾರಿ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ನಟಿಸುವ ಬಗ್ಗೆ ಚರ್ಚೆ ಆಗುತ್ತಲೇ ಇದೆ.ಅಧಿಕೃತವಾಗಿ ನಿತೇಶ್ ತಿವಾರಿ ‘ರಾಮಾಯಣ’ ಚಿತ್ರವನ್ನು ಘೋಷಣೆ ಮಾಡಿಲ್ಲ.
ಆದರೂ ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಬಿಟೌನ್‌ನಲ್ಲಿ ವೈರಲ್ ಆಗುತ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾದೇವಿಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಯಾರೊಬ್ಬರು ಈ ಬಗ್ಗೆ ಮಾತನಾಡುತ್ತಿಲ್ಲ. ಇನ್ನು ವಿಭಿಷಣ, ಹನುಮಂತ ಹೀಗೆ ಒಂದೊಂದು ಪಾತ್ರಕ್ಕೆ ಒಬ್ಬೊಬ್ಬರ ಹೆಸರುಗಳು ಕೇಳಿಬರ್ತಿದೆ. ರಾಮಾಯಣದಲ್ಲಿ ಇಡೀ ಕಥೆಗೆ ತಿರುವುದು ರಾವಣನ ಸಹೋದರಿ ಶೂರ್ಪನಖಿ. ಹಾಗಾಗಿ ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಚರ್ಚೆ ಈಗ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಇಡೀ ಕಥೆಯಲ್ಲಿ ಶೂರ್ಪನಖಿ ಪಾತ್ರ ಚಿಕ್ಕದು. ಆದರೆ ಆ ಪಾತ್ರಕ್ಕೆ ಬಹಳ ಮಹತ್ವ ಇದೆ. ಸದ್ಯ ಈ ಪಾತ್ರಕ್ಕಾಗಿ ರಕುಲ್ ಪ್ರೀತ್‌ಸಿಂಗ್ ಜೊತೆ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.”ಕೆಜಿಎಫ್ ಕನ್ನಡ ಸಿನಿಮಾ ಅಲ್ಲವೇ ಅಲ್ಲ”; ಯಶ್ ಸಿನಿಮಾ ಬಗ್ಗೆ ವಾಟಾಳ್ ನಾಗರಾಜ್ ಕುಟುಕಿದ್ದೇಕೆ?ಕನ್ನಡದ ‘ಗಿಲ್ಲಿ’ ಚಿತ್ರದಲ್ಲಿ ನಟಿಸುವ ಮೂಲಕ ಈ ದೆಹಲಿ ಬೆಡಗಿ ಚಿತ್ರರಂಗಕ್ಕೆ ಬಂದರು. ಬಳಿಕ ತೆಲುಗು, ತಮಿಳಿ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಇತ್ತೀಚೆಗೆ ಆಕೆಯ ಕ್ರೇಜ್ ಕಮ್ಮಿ ಆಗಿದೆ. ನಟ ಜಾಕಿ ಬಗ್ನಾನಿ ಜೊತೆ ಡೇಟಿಂಗ್ ನಡೆಸುತ್ತಿರುವುದಾಗಿ ರಕುಲ್ ಹೇಳಿಕೊಂಡಿದ್ದಾರೆ.3 ಭಾಗಗಳಾಗಿ ರಾಮಾಯಣ ಚಿತ್ರವನ್ನು ತೆರೆಗೆ ತರುತ್ತಾರೆ ಎನ್ನಲಾಗ್ತಿದೆ. ಮುಂದಿನ ವರ್ಷ ದೀಪಾವಳಿಗೆ ಪಾರ್ಟ್-1 ರಿಲೀಸ್ ಆಗುವ ನಿರೀಕ್ಷೆಯಿದೆ. ಇನ್ನು ಕೈಕೆಯಿ ಪಾತ್ರಕ್ಕೆ ಲಾರಾ ದತ್ತಾ, ವಿಭಿಷಣ ಪಾತ್ರಕ್ಕೆ ವಿಜಯ್ ಸೇತುಪತಿ ಜೊತೆ ಚರ್ಚೆ ನಡೆಸಿರುವುದಾಗಿ ಹೇಳಲಾಗಿತ್ತು. ಪಿಂಕ್ ವಿಲ್ಲಾ ವರದಿಯ ಪ್ರಕಾರ ಶೂರ್ಪನಖಿ ಪಾತ್ರಕ್ಕಾಗಿ ಈಗಾಗಲೇ ರಕುಲ್ ಲುಕ್ ಟೆಸ್ಟ್ ಸಹ ನಡೆದಿದೆ ಎನ್ನಲಾಗ್ತಿದೆ. ಕಳೆದ ವರ್ಷ ಬಂದಿದ್ದ ‘ಆದಿಪುರುಷ್’ ಸಿನಿಮಾ ಭಾರೀ ವಿವಾದ ಸೃಷ್ಟಿಸಿತ್ತು. ಟೀಕೆಗೆ ಗುರಿಯಾಗಿ ಟ್ರೋಲ್ ಆಗಿತ್ತು. ಅದೇ ಕಾರಣಕ್ಕೆ ಬಹಳ ಲೆಕ್ಕಾಚಾರವಾಗಿ ಈ ಬಾರಿ ನಿತೇಶ್ ತಿವಾರಿ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಡಮಟ್ಟದಲ್ಲಿ ಮಹಾಕಾವ್ಯವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲಿ ರಾವಣನ ಪಾತ್ರ ಮಾಡ್ತಾರೆ ಎನ್ನುವುದು ಸ್ಯಾಂಡಲ್‌ವುಡ್‌ನಲ್ಲೂ ಭಾರೀ ನಿರೀಕ್ಷೆ ಮೂಡಿಸಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಬರೀ ಅಂತೆಕಂತೆ ಸಂತೆಯಾಗಿದೆ. ನಾನು ಯಾವುದೇ ಚಿತ್ರರಂಗಕ್ಕೆ ಹೋಗಲ್ಲ ಎನ್ನುವ ಅರ್ಥದಲ್ಲಿ ಈ ಹಿಂದೆ ಯಶ್ ಮಾತನಾಡಿದ್ದರು. ಹಾಗಾಗಿ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ರಾವಣ ಪಾತ್ರ ಮಾಡ್ತಾರಾ? ಇಲ್ವಾ? ಎನ್ನುವ ಅನುಮಾನ ಮೂಡಿದೆ.ಸಂಕ್ರಾಂತಿ ಸಂಭ್ರಮದಲ್ಲಿ ರಕುಲ್ ಪ್ರೀತ್ ಸಿಂಗ್ ಸನಟನೆಯ ತಮಿಳು ಸಿನಿಮಾ ‘ಅಯಾಲಾನ್’ ತೆರೆಗೆ ಬಂದಿತ್ತು. ಇನ್ನುಳಿದಂತೆ ‘ಮೇರಿ ಪತ್ನಿಕಾ ರೀಮೆಕ್’ ಹಾಗೂ ‘ಇಂಡಿಯನ್-2’ ಸಿನಿಮಾಗಳಲ್ಲಿ ‘ಗಿಲ್ಲಿ’ ಚೆಲುವೆ ಬಣ್ಣ ಹಚ್ಚಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1