ಕೇವಲ 20 ನೇ ವಯಸ್ಸಿನಲ್ಲಿ 7300 ಕೋಟಿ ರೂ ಒಡೆಯನಾದ ಆದಿತ್ ಪಲಿಚಾ

Business: ಹೆಚ್ಚಿನ ಜನರು ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲಕ್ಕೊಳಗಾದ ವಯಸ್ಸಿನಲ್ಲಿ ಆದಿತ್ ಪಲಿಚಾ ಎನ್ನುವ ಯುವಕನೊಬ್ಬ ಸ್ಟಾರ್ಟ್ ಅಪ್ ಆರಂಭಿಸುವ ಮೂಲಕ ಸಾವಿರಾರು ಕೋಟಿಯ ಒಡೆಯನಾಗಿದ್ದಾನೆ.

ಹೆಚ್ಚಿನ ಜನರು ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲಕ್ಕೊಳಗಾದ ವಯಸ್ಸಿನಲ್ಲಿ ಆದಿತ್ ಪಲಿಚಾ ಎನ್ನುವ ಯುವಕನೊಬ್ಬ ಸ್ಟಾರ್ಟ್ ಅಪ್ ಆರಂಭಿಸುವ ಮೂಲಕ ಸಾವಿರಾರು ಕೋಟಿಯ ಒಡೆಯನಾಗಿದ್ದಾನೆ.

ಹೌದು ಆದಿತ್ ಪಲಿಚಾ ಎನ್ನುವ ಯುವಕ ಕೇವಲ 17 ವರ್ಷದವರಾಗಿದ್ದಾಗ ಉದ್ಯಮಶೀಲತೆಯನ್ನು ಪ್ರಾರಂಭಿಸಿದರು. ಅವರು ಗೋಪೂಲ್ ಹೆಸರಿನ ಸ್ಟಾರ್ಟ್ಅಪ್ ಅನ್ನು ತೆರೆದಿದ್ದರು.ನಂತರ ಕೃತಕ ಬುದ್ದಿಮತ್ತೆ ಆಧಾರಿತ ಯೋಜನೆಯಾದ PryvaSee ಅನ್ನು ಸಹ ಸ್ಥಾಪಿಸಿದರು.ಇದರಲ್ಲಿಈಗ ಅವರು ಅಭೂತಪೂರ್ವ ಯಶಸ್ಸು ಕಂಡಿದ್ದು, ಈಗ ಅವರ ಮೌಲ್ಯಮಾಪನ ಶೂನ್ಯದಿಂದ ಆರಂಭವಾಗಿ ಬರೋಬ್ಬರಿ 7300 ಕೋಟಿ ರೂ ಗೆ ಏರಿಕೆಯಾಗಿದೆ.

ಅವರು ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಲು ಅಮೆರಿಕಾದ ಸ್ಟ್ಯಾನ್‌ಫೋರ್ಡ್‌ಗೆ ಹೋದರು, ತದನಂತರ Zepto ಸ್ಟಾರ್ಟ್ ಅಪ್  ಕಂಪನಿಗೆ ಏಪ್ರಿಲ್ 2021 ರಲ್ಲಿ ಚಾಲನೆ ನೀಡಿದರು. ಅಚ್ಚರಿ ಎನ್ನುವಂತೆ ಇದು ಪ್ರಾರಂಭವಾದ ಒಂದು ತಿಂಗಳೊಳಗೆ, ಕಂಪನಿಯು 200 ಮಿಲಿಯನ್ ಡಾಲರ್‌ಗಳ ಮೌಲ್ಯವನ್ನು ಗಳಿಸಿತು. ವಿಶೇಷವೆಂದರೆ ಇದು 10 ನಿಮಿಷಗಳಲ್ಲಿ ದಿನಸಿ ಉತ್ಪನ್ನಗಳನ್ನು ತಲುಪಿಸುತ್ತದೆ.ಈಗ ಈ ಪರಿಕಲ್ಪನೆಯು ಭಾರೀ ಯಶಸ್ಸನ್ನು ಗಳಿಸಿದೆ.

ಈ ಕಂಪನಿಯ ಪ್ರಾರಂಭದ ಐದು ತಿಂಗಳೊಳಗೆ,ಅವರು 570 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದು.ಕಳೆದ ವರ್ಷ, ಕಂಪನಿಯು 900 ಮಿಲಿಯನ್ ಡಾಲರ್ ಮೌಲ್ಯವನ್ನು ಗಳಿಸಿದೆ.ಕಂಪನಿಯು ಈಗ ದೆಹಲಿ,ಚೆನ್ನೈ,ಗುರ್ಗಾಂವ್,ಬೆಂಗಳೂರು ಮತ್ತು ಮುಂಬೈನಲ್ಲಿ ವಿತರಿಸುತ್ತದೆ.

Source: https://zeenews.india.com/kannada/business/aadit-palicha-built-rs-7300-crore-firm-in-just-1-year-129314

Leave a Reply

Your email address will not be published. Required fields are marked *