Aditya L1 project director Nigar Shaji: 55 ವರ್ಷದ ವಿಜ್ಞಾನಿ ನಿಗರ್ ಶಾಜಿ ಅವರು ಭಾರತೀಯ ರಿಮೋಟ್ ಸೆನ್ಸಿಂಗ್, ಸಂವಹನ ಮತ್ತು ಅಂತರಗ್ರಹ ಉಪಗ್ರಹ ಕಾರ್ಯಕ್ರಮಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

Aditya L1 project director Nigar Shaji: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಕನಸಿನ ಯೋಜನೆಯಾದ ಸೂರ್ಯ ಮಿಷನ್ ‘ಆದಿತ್ಯ ಎಲ್ 1’ ಅನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇಸ್ರೋ ವಿಜ್ಞಾನಿಗಳು ಮಿಷನ್’ಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಇನ್ನು. ವಿಶೇಷವೆಂದರೆ ಸೂರ್ಯ ಮಿಷನ್ ಕಮಾಂಡ್ ಮಹಿಳಾ ವಿಜ್ಞಾನಿಯ ಕೈಯಲ್ಲಿದೆ.
ಇವರ ಹೆಸರು ನಿಗರ್ ಶಾಜಿ . ತಮಿಳುನಾಡು ಮೂಲದ ನಿಗರ್ ಶಾಜಿ ಸುಮಾರು 35 ವರ್ಷಗಳಿಂದ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 55 ವರ್ಷದ ವಿಜ್ಞಾನಿ ನಿಗರ್ ಶಾಜಿ ಅವರು ಭಾರತೀಯ ರಿಮೋಟ್ ಸೆನ್ಸಿಂಗ್, ಸಂವಹನ ಮತ್ತು ಅಂತರಗ್ರಹ ಉಪಗ್ರಹ ಕಾರ್ಯಕ್ರಮಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ನಿಗರ್ ಶಾಜಿ ಯಾರು?
ನಿಗರ್ ಶಾಜಿ ಚೆನ್ನೈನಿಂದ 55 ಕಿಲೋಮೀಟರ್ ದೂರದಲ್ಲಿರುವ ತೆಂಕಶಿ ನಿವಾಸಿ. ಚಂದ್ರಯಾನದ ಮೂರು ಮಿಷನ್’ಗಳಿಗೆ ಪ್ರಮುಖ ಕೊಡುಗೆ ನೀಡಿದ ತಮಿಳುನಾಡಿನ ವಿಜ್ಞಾನಿಗಳ ಪಟ್ಟಿಯಲ್ಲಿ ನಿಗರ್ ಶಾಜಿ ಕೂಡ ಸೇರಿದ್ದಾರೆ.
ನಿಗರ್ ಶಾಜಿ ಅವರು ರಿಸೋರ್ಸ್ ಸ್ಯಾಟ್-2A ಯ ಸಹಾಯಕ ಯೋಜನಾ ನಿರ್ದೇಶಕರಾಗಿದ್ದಾರೆ. ಇದು ರಾಷ್ಟ್ರೀಯ ಸಂಪನ್ಮೂಲ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹವಾಗಿದೆ. ಅವರು ಇಮೇಜ್ ಕಂಪ್ರೆಷನ್, ಸಿಸ್ಟಮ್ ಎಂಜಿನಿಯರಿಂಗ್ ಮತ್ತು ಇತರ ವಿಷಯಗಳ ಕುರಿತು ಅನೇಕ ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ.
ನಿಗರ್ ಶಾಜಿ ಶಿಕ್ಷಣ:
ನಿಗರ್ ಶಾಜಿ ಮಧುರೈನ ಕಾಮರಾಜ್ ವಿಶ್ವವಿದ್ಯಾಲಯದಿಂದ ಬಿಇ ಪದವಿ ಪಡೆದರು. ಆ ನಂತರ ರಾಂಚಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದವರು. ಇದೀಗ ಬೆಂಗಳೂರಿನ ಇಸ್ರೋದ ಉಪಗ್ರಹ ಟೆಲಿಮೆಟ್ರಿ ಕೇಂದ್ರದ ಮುಖ್ಯಸ್ಥರೂ ಆಗಿದ್ದಾರೆ. ಗಮನಾರ್ಹವಾಗಿ, ಸೂರ್ಯ ಮಿಷನ್ ಆದಿತ್ಯ L1 ನಲ್ಲಿ ನಿಗರ್ ಶಾಜಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಇನ್ನು ISRO ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್’ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುವ ವ್ಯಕ್ತಿಯು, ವರ್ಷಕ್ಕೆ ₹ 3.9 ಲಕ್ಷ ಸಂಬಳ ಪಡೆಯುತ್ತಾರೆ. ಅಗ್ರ 1% ಜನರು ವರ್ಷಕ್ಕೆ ₹19.57 ಲಕ್ಷಕ್ಕಿಂತ ಹೆಚ್ಚು ಗಳಿಸುತ್ತಾರೆ ಎಂದು ಕೆಲ ಮೂಲಗಳು ಹೇಳುತ್ತವೆ, ಇನ್ನು ನಿಗರ್ ಶಾಜಿ ಸಂಬಳದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii