ಬೆಂಗಳೂರಿನ ಸ್ಕೂಟರ್ ಶೋರೂಮ್​ನಲ್ಲಿ ಅಗ್ನಿ ಅವಘಡ, ಸೇಲ್ಸ್​ ಗರ್ಲ್​ ಸಜೀವದಹನ.

ಬೆಂಗಳೂರು, (ನವೆಂಬರ್ 19): ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದೆ.  ರಾಜ್‌ಕುಮಾರ್ ರಸ್ತೆಯಲ್ಲಿರುವ ಮೈ ಇವಿ ಎಲೆಕ್ಟ್ರಿಕ್‌ ಸ್ಕೂಟರ್ ಶೋರೂಂನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಎಲೆಕ್ಟ್ರಿಕ್‌ ಸ್ಕೂಟರ್​ಗಳು ಹಾಗೂ ಶೋರಂ ಹೊತ್ತಿ ಉರಿಯುತ್ತಿದೆ. ಇನ್ನು ಶೋರೂಮ್​ನ ಒಳಗೆ ಸಿಲುಕಿಕೊಂಡಿದ್ದ ಓರ್ವ  ಯುವತಿ ಸುಟ್ಟು ಕರಕಲಾಗಿದ್ದು,   ಶೋರೂಮ್​ನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತಿದ್ದ ಪ್ರಿಯಾ (25) ಎನ್ನುವ ಯುವತಿ ಭೀಕರ ಅಗ್ನಿ ಜ್ವಾಲೆಯಲ್ಲಿ ಆಹುತಿಯಾಗಿದ್ದು, ಸದ್ಯ ಅಗ್ನಿಶಾಮ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಇಂದು (ನವೆಂಬರ್ 19) ಸಂಜೆ 5.30ರ ಸುಮಾರಿಗೆ ಸ್ಕೂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಶೋರೂಮ್​ಗೆ ಅಗ್ನಿ ಅವಘಡ ಸಂಭವಿಸಿದ್ದು, ನೋಡು ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಶೋಮ್​ಗೆ ಆವರಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ. ಭೀಕರ ಬೆಂಕಿಗೆ ಶೋರೂಮ್​ ಹಾಗೂ ಎಲೆಕ್ಟ್ರಿಕ್ ಸ್ಕೂಟರ್​ಗಳು ಸುಟ್ಟ ಭಸ್ಮವಾಗಿವೆ.

ನೋಡನೋಡ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನಗಳು ದೌಡಾಯಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದೆ. ಬೆಂಕಿಯ ಭೀಕರತೆ ಎಷ್ಟಿತ್ತು ಅಂದ್ರೆ, ಶೋರೂಮ್​ನ ಒಳಗಡೆ ಇದ್ದ 20 ವರ್ಷದ ಸೇಲ್ಸ್ ಗರ್ಲ್ ಪ್ರಿಯಾ ಹೊರ ಬರಲು ಆಗದೇ ಅಲ್ಲೇ ಸುಟ್ಟು ಕರಕಲಾಗಿದ್ದಾಳೆ. ಇನ್ನು ಶೋರೂಮ್​ನಲ್ಲಿದ್ದ 45ಕ್ಕೂ 45 ಸ್ಕೂಟರ್‌ಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ. ಇನ್ನು ಸ್ಥಳಕ್ಕೆ ರಾಜಾಜಿನಗರ ಠಾಣೆ ಪೊಲೀಸರು ಸಹ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Source : https://tv9kannada.com/karnataka/bengaluru/fire-breaks-out-in-electric-scooter-showroom-at-bengaluru-news-in-kannada-rbj-937343.html

Leave a Reply

Your email address will not be published. Required fields are marked *