ಚಿತ್ರದುರ್ಗ ನ. 29
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
‘ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 5 ವರ್ಷ ಮುಂದುವರಿಯಬೇಕು’ ಯಾವುದೇ ಕಾರಣಕ್ಕೂ ಸಹಾ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಬಾರದು ಎಂದು ಪಕ್ಷದ ಹೈಕಮಾಂಡಿಗೆ ಅಹಿಂದ ಚಳುವಳಿಯ ಮಖಂಡರು ಆಗ್ರಹಿಸಿದ್ದಾರೆ.
ಈ ಬಗ್ಗೆ ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಹಿಂದ ಚಳುವಳಿಯ ಚಿತ್ರದುರ್ಗದ ಅಹಿಂದ ಚಳುವಳಿಯ ಮುಖ್ಯ ಸಂಚಾಲಕ ಸುರೇಶ್ ಬಾಬು ಸಾಮಾಜಿಕ ನ್ಯಾಯದ ಹರಿಕಾರರಾಗಿರುವ ಸಿದ್ದರಾಮಯ್ಯ ಅವರನ್ನು ಅರ್ಧದಲ್ಲೇ ಸಿ.ಎಂಹುದ್ದೆಯಿಂದ ಇಳಿಸಬಾರದು. ಕಳೆದ ಅವಧಿಯಲ್ಲಿ ಅವರು ಬಹಳ ಮುನ್ನೋಟದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಿದ್ದರು. ಆದರೆ ಅದನ್ನು ನಿಷ್ಕ್ರಿಯಗೊಳಿ ಸಲಾಯಿತು. ಈಗ ಮತ್ತೊಮ್ಮೆ ಸಮೀಕ್ಷೆ ನಡೆಸಲಾಗಿದ್ದು ಅದನ್ನು ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಅವರೇ ಸಿ.ಎಂ ಆಗಿ ಮುಂದುವರಿಯಬೇಕು’ ಎಂದು ಒತ್ತಾಯಿಸಿದರು.
‘ಸಮಾಜದ ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಹಂಚಿಕೆಯಾಗಬೇಕಾದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಜನಾದೇಶ ಕೂಡ ಅವರ ಪರವಾಗಿಯೇ ಇದೆ. ಚುನಾವಣೆಯಲ್ಲಿ ಮುಂದಿನ ಮುಖ್ಯಮಂತ್ರಿಮ ಸಿದ್ದರಾಮಯ್ಯ ಎಂದು ಹೇಳುವುದರ ಮೂಲಕ ಮತವನ್ನು ಪಡೆಯಲಾಯಿತು, ಈ ಅರ್ಧದಲ್ಲಿ ಅಧಿಕಾರದಿಂದ ಕೆಳಗೆ ಇಳಿಸುವ ಪ್ರಯತ್ನ ಸರಿಯಲ್ಲ ಅವರು ಐದು ವರ್ಷ ಪೂರ್ಣ ಮಾಡಬೇಕು ಇದಕ್ಕೆ ಪಕ್ಷದ ಹೈಕಮಾಂಡ್ ಅನುಮತಿಯನ್ನು ನೀಡಬೇಕಿದೆ ಯಾರ ಒತ್ತಡಕ್ಕೂ ಮಣಿಯದೆ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕಿದೆ ಎಂದು ಆಗ್ರಹಿಸಿ ಅಗತ್ಯ ಬಿದ್ದರೆ ದೆಹಲಿಗೆ ನಿಯೋಗವನ್ನು ತೆಗೆದುಕೊಂಡು ಹೋಗಿ ಪಕ್ಷದ ಹೈಕಮಾಂಡಿಗೆ ಮನವಿ ಮಾಡಲಾಗುವುದೆಂದು ತಿಳಿಸಿದರು.
ಅಲೆಮಾರಿ ಸಮುದಾಯದ ಅಧ್ಯಕ್ಷ ಲಕ್ಷ್ಮೀಕಾಂತ ಮಾತನಾಡಿ ಸಿದ್ದರಾಮಯ್ಯರವರು ಹಿಂದಿನ ಬಾರಿ ಐದು ವರ್ಷ ಆಧಿಕಾರವನ್ನು ನಡೆಸಿದರು ಈ ಸಮಯದಲ್ಲಿ ಯಾವುದೇ ಕಪ್ಪು ಚುಕ್ಕೆ ಇರಲಿಲ್ಲ ಈ ಬಾರಿಯೂ ಸಹಾ ಕಳೆದ ಎರಡುವರೆ ವರ್ಷದಿಂದ ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿದ್ದಾರೆ ಈಗಲೂ ಸಹಾ ಯಾವುದೇ ಕಪ್ಪು ಚುಕ್ಕೆ ಇಲ್ಲ ಈ ಸಮಯದಲ್ಲಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವುದು ಸರಿಯಲ್ಲ ವರನ್ನು ಈ ಅವಧಿ ಮುಗಿಯುವವರೆಗೂ ಮುಂದುವರೆಸಬೇಕಿದೆ ರಾಜ್ಯದಲ್ಲಿ 25 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಅದರಲ್ಲಿ ಹಿಂದುಳಿದ ವರ್ಗದ 5 ಜನ ಮಾತ್ರ ಸಿಎಂ ಆಗಿದ್ದಾರೆ. ಅದರಲ್ಲಿ ದಲಿತರು ಸಿಎಂ ಆಗಿಲ್ಲ. ಸಿದ್ದರಾಮಯ್ಯ ಮತ್ತು ಅರಸು ಅವರು ಮಾತ್ರ 5 ವರ್ಷ ಪೂರೈಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬೇಡ್ಕರ್ ಬುದ್ಧ ಬಸವ, ಕುವೆಂಪು, ಲೋಹಿಯಾ ಅವರ ವಿಚಾರಧಾರೆಗಳನ್ನು ಅನುಸರಿಸಿ ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡುತ್ತಿದ್ದಾರೆ ಅಂದು ಬಸವಣ್ಣ, ಇಂದು ಸಿದ್ದರಾಮಯ್ಯ ಅವರು ದಕ್ಷ ಹಾಗೂ ಸಮರ್ಥ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಷಫೀವುಲ್ಲಾ ಮಾತನಾಡಿ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಮಾದರಿ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಅವರು ಬಡವರ ನಾಯಕ,ಜಾತಿ ನಾಯಕ ಅಲ್ಲ.ಎಲ್ಲಾ ವರ್ಗಗಳ ನಾಯಕ.ಅಂದು ದೇವರಾಜು ಅರಸು, ಇಂದು ಸಿದ್ದರಾಮಯ್ಯ ಅವರು ರಾಷ್ಟ್ರ ಕಂಡ ಪ್ರಾಮಾಣಿಕ ನಾಯಕ. ಅಂಬೇಡ್ಕರ್ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಅವರ ಪರವಾದ ಅಲೆ ಇದೆ ಎಂದರು.
ಗೋಷ್ಟಿಯಲ್ಲಿ ತಿಪ್ಪೇಸ್ವಾಮಿ, ನಾಗರಾಜ್, ಮದುಸೂಧನ್, ಪರ್ವಿನ್, ಭಾಗವಹಿಸಿದ್ದರು.
Views: 21