ಭಾರತಕ್ಕೆ ಹಾರುವ ಕಾರು ಬರುವ ಕಾಲ ಅತಿ ಸಮೀಪ; ಮೊದಲಿಗೆ ದೆಹಲಿ, ಬಳಿಕ ಬೆಂಗಳೂರಿನಲ್ಲಿ ಏರ್ ಟ್ಯಾಕ್ಸಿ ಸೇವೆ

Flying Taxi Service in India: ಭಾರತದ ಇಂಟರ್​​ಗ್ಲೋಬ್ ಎಂಟರ್​ಪ್ರೈಸಸ್ ಮತ್ತು ಅಮೆರಿಕದ ಆರ್ಚರ್ ಏವಿಯೇಶನ್ ಸಂಸ್ಥೆಗಳು ಜಂಟಿಯಾಗಿ ಭಾರತದಲ್ಲಿ ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಆರಂಭಿಸಲಿವೆ. ಅಮೆರಿಕನ್ ಕಂಪನಿ ಈ ವೈಮಾನಿಕ ವಾಹನಗಳನ್ನು ಸರಬರಾಜು ಮಾಡಲಿದೆ. ವರದಿಗಳ ಪ್ರಕಾರ 2026ರಲ್ಲಿ ಈ ಹಾರುವ ಕಾರುಗಳು ದೆಹಲಿಗೆ ಮೊದಲಿಗೆ ಶುರುವಾಗಲಿವೆ. ಅದೇ ಸಮಯದಲ್ಲಿ ಅಥವಾ ಅತಿ ಶೀಘ್ರದಲ್ಲಿ ಬೆಂಗಳೂರು, ಮುಂಬೈ ನಗರಗಳಲ್ಲೂ ಇವು ಹಾರಾಟ ಆರಂಭಿಸಬಹುದು ಎಂದು ಹೇಳಲಾಗಿದೆ.

ನವದೆಹಲಿ, ಏಪ್ರಿಲ್ 21: ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಫ್ಲೈಯಿಂಗ್ ಕಾರ್ ಅಥವಾ ಏರ್ ಟ್ಯಾಕ್ಸಿ ಸರ್ವಿಸ್ (Air taxi service ಇನ್ನೆರಡು ವರ್ಷದಲ್ಲಿ ಬಳಕೆಗೆ ಬರುವ ಸಾಧ್ಯತೆ ಇದೆ. ವಿಶ್ವದ ಮೊದಲ ಏರ್ ಟ್ಯಾಕ್ಸಿ ಸೇವೆ ದುಬೈನಲ್ಲಿ 2026ರಲ್ಲಿ ಬರಲಿದೆ. ಅದೇ ಸಮಯದಲ್ಲಿ ಭಾರತದಲ್ಲೂ ಏರ್ ಟ್ಯಾಕ್ಸಿ ಸೇವೆ ಶುರುವಾಗುವ ಸಾಧ್ಯತೆ ಇದೆ. ಇಂಡಿಗೋ ಸಂಸ್ಥೆಯ ಇಂಟರ್​ಗ್ಲೋಬ್ ಎಂಟರ್​ಪ್ರೈಸಸರ್ ಶೀಘ್ರದಲ್ಲಿ ಭಾರತದಲ್ಲಿ ಏರ್ ಟ್ಯಾಕ್ಸಿ ಸೇವೆ ಆರಂಭಿಸಬಹುದು ಎನ್ನಲಾಗಿದೆ. ವರದಿಗಳ ಪ್ರಕಾರ 2026ರಲ್ಲಿ ಇದು ಶುರುವಾಗಬಹುದು. ಆರಂಭದಲ್ಲಿ ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ಇದರ ಸೇವೆ ಬಳಕೆ ಆಗಲಿದೆ. ದೆಹಲಿಯ ಕನಾಟ್ ಪ್ಲೇಸ್​ನಿಂದ ಹರ್ಯಾಣದ ಗುರುಗ್ರಾಮ್ ಮಾರ್ಗದಲ್ಲಿ ಫ್ಲೈಯಿಂಗ್ ಕಾರಿನ ಸೇವೆ ನಡೆಯಬಹುದು.

ಅಮೆರಿಕ ಮೂಲದ ಆರ್ಚರ್ ಏವಿಯೇಶನ್ ಸಂಸ್ಥೆ ಜೊತೆ ಇಂಟರ್​ಗ್ಲೋಬ್ ಎಂಟರ್​​ಪ್ರೈಸಸ್ ಈ ಹೊಸ ಸಾಹಸಕ್ಕೆ ಕೈಜೋಡಿಸಿದೆ. ದೆಹಲಿ ಎನ್​ಸಿಆರ್​ನಲ್ಲಿ ಇದರ ಮೊದಲ ಸೇವೆ ಶುರುವಾಗಬಹುದಾದರೂ ಮುಂಬೈ ಮತ್ತು ಬೆಂಗಳೂರಿನಲ್ಲೂ ಇದೇ ಅವಧಿಯಲ್ಲಿ ಫ್ಲೈಯಿಂಗ್ ಟ್ಯಾಕ್ಸಿ ಹಾರಾಡಬಹುದು ಎನ್ನಲಾಗಿದೆ. ಆದರೆ ಕಂಪನಿ ಕಡೆಯಿಂದ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ದುಬೈನಲ್ಲಿ ಜೋಬಿ ಏವಿಯೇಶನ್ ಸಂಸ್ಥೆ 2026ರಲ್ಲಿ ಹಾರುವ ಕಾರನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಎಸ್4 ಎಂದು ಹೆಸರಿಸಲಾಗಿರುವ ಆ ಕಾರು ಗಂಟೆಗೆ 160ರಿಂದ 320 ಕಿಮೀ ವೇಗದಲ್ಲಿ ಹಾರಬಲ್ಲುದು. ಆದರೆ, ಭಾರತದಲ್ಲಿ ಫ್ಲೈಯಿಂಗ್ ಟ್ಯಾಕ್ಸಿ ಎಷ್ಟು ವೇಗದಲ್ಲಿ ಸಂಚರಿಸಬಲ್ಲುದು ಎಂಬ ಮಾಹಿತಿ ಗೊತ್ತಾಗಬೇಕಷ್ಟೇ. ಆದರೆ, ಬೆಂಗಳೂರಿನಂತಹ ಸಂಚಾರ ದಟ್ಟನೆಯ ನಗರಗಳಿಗೆ ಫ್ಲೈಯಿಂಗ್ ಟ್ಯಾಕ್ಸಿ ಬಹಳ ಉಪಯುಕ್ತ ಎನಿಸಲಿದೆ.

ವರದಿ ಪ್ರಕಾರ ಬೆಂಗಳೂರಿನಂಥ ನಗರದಲ್ಲಿ 30 ಕಿಮೀ ದೂರ ರಸ್ತೆ ಮೂಲಕ ಸಂಚರಿಸಬೇಕಾದರೆ 90 ನಿಮಿಷದಿಂದ 120 ನಿಮಿಷ ಆಗಬಹುದು. ಫ್ಲೈಯಿಂಗ್ ಟ್ಯಾಕ್ಸಿಯಲ್ಲಿ ಕೇವಲ 10 ನಿಮಿಷದೊಳಗೆ ಹೋಗಬಹುದು. ಒಂದು ಟ್ಯಾಕ್ಸಿಯಲ್ಲಿ ನಾಲ್ಕು ಜನರು ಪ್ರಯಾಣಿಸಬಹುದಾಗಿದ್ದು ಒಬ್ಬರಿಗೆ 1,500ರೂನಿಂದ 3,000 ರೂ ಆಗಬಹುದು ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಏರ್ ಟ್ಯಾಕ್ಸಿ ವಾಹನಗಳನ್ನು ಸರಬರಾಜು ಮಾಡುವ ಆರ್ಚರ್ ಏವಿಯೇಶನ್ ಸಂಸ್ಥೆ ತನ್ನ ಉತ್ಪನ್ನಕ್ಕೆ ಅಮೆರಿಕದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆಯುವ ಪ್ರಯತ್ನದಲ್ಲಿದೆ. ಅದಾದ ಬಳಿಕ ಏರ್ ಟ್ಯಾಕ್ಸಿಗಳ ತಯಾರಿಕೆ ಶುರುವಾಗಲಿದೆ.

ಆರ್ಚರ್ ಏವಿಯೇಶನ್ ಸಂಸ್ಥೆ ಇಂಟರ್​ಗ್ಲೋಬ್ ಎಂಟರ್​ಪ್ರೈಸಸ್​ಗೆ 200 ವೈಮಾನಿಕ ವಾಹನಗಳನ್ನು ಒದಗಿಸಲಿದೆ. ಈ ವಾಹನಗಳ ಬ್ಯಾಟರಿಯನ್ನು 30-40 ನಿಮಿಷಗಳಲ್ಲಿ ಪೂರ್ಣವಾಗಿ ರೀಚಾರ್ಜ್ ಮಾಡಬಹುದು ಎಂದು ಹೇಳಲಾಗಿದೆ.

Source : https://tv9kannada.com/automobile/indigo-to-start-flying-taxi-service-soon-in-bengaluru-delhi-mumbai-snvs-819495.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *