Tech: ದೇಶದ ಎರಡನೇ ದೊಡ್ಡ ಟೆಲಿಕಾಂ ಎನಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ಸಂಸ್ಥೆಯು ತನ್ನ ಚಂದಾದಾರರಿಗೆ ಹಲವು ಅನುಕೂಲಕರ ರೀಚಾರ್ಜ್ ಯೋಜನೆಗಳ ಆಯ್ಕೆ ನೀಡಿದೆ. ಹಾಗೆಯೇ ಅಧಿಕ ಡೇಟಾ ಹಾಗೂ ದೀರ್ಘ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೂ ಕೆಲವೊಂದು ಯೋಜನೆಗಳನ್ನು ನೀಡಿದೆ.
![](https://samagrasuddi.co.in/wp-content/uploads/2024/07/image-139.png)
ಇನ್ನು ಏರ್‌ಟೆಲ್ ಸಂಸ್ಥೆಯು ಇತ್ತೀಚಿಗೆ ಪ್ಲ್ಯಾನ್‌ಗಳನ್ನು ಪರಿಷ್ಕರಣೆ ಮಾಡಿದ್ದು, ಹೆಚ್ಚಿನ ಡೇಟಾ ಅಗತ್ಯ ಇರುವ ಬಳಕೆದಾರರಿಗಾಗಿ ಹೊಸದಾಗಿ ಡೇಟಾ ಬೂಸ್ಟರ್ ರೀಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಅನಿಯಮಿತ 5G ಡೇಟಾ (Unlimited 5G data) ಪ್ರಯೋಜನ ಪಡೆದಿವೆ.
ಹೌದು, ಭಾರ್ತಿ ಏರ್‌ಟೆಲ್ (Airtel) ಟೆಲಿಕಾಂ ಹೆಚ್ಚುವರಿ ಡೇಟಾ ಬಳಕೆಗಾಗಿ ಮೂರು ಡೇಟಾ ಬೂಸ್ಟರ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅವುಗಳು ಕ್ರಮವಾಗಿ ಏರ್‌ಟೆಲ್ 51 ರೂ ಪ್ಲ್ಯಾನ್, ಏರ್‌ಟೆಲ್ 101 ರೂ ಪ್ಲ್ಯಾನ್ ಹಾಗೂ ಏರ್‌ಟೆಲ್ 151 ರೂ. ಪ್ಲ್ಯಾನ್ ಆಗಿವೆ. ಈ ಯೋಜನೆಗಳು ಹೆಚ್ಚುವರಿ ಡೇಟಾ ಪ್ರಯೋಜನ ನೀಡುತ್ತವೆ. ಹಾಗಾದರೇ ಏರ್‌ಟೆಲ್ ಟೆಲಿಕಾಂನ ಡೇಟಾ ಬೂಸ್ಟರ್ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಏರ್‌ಟೆಲ್ ಹೊಸ ಡೇಟಾ ಬೂಸ್ಟರ್ ಪ್ಲ್ಯಾನ್‌ಗಳು
ಭಾರ್ತಿ ಏರ್‌ಟೆಲ್ ಸಂಸ್ಥೆಯು ನೂತನವಾಗಿ 51ರೂ ಪ್ಲ್ಯಾನ್, 101ರೂ ಪ್ಲ್ಯಾನ್ ಹಾಗೂ 151ರೂ. ಪ್ಲ್ಯಾನ್ ಪರಿಚಯಿಸಿದ್ದು, ಹೆಚ್ಚಿನ ಡೇಟಾ ಬಯಸುವ ಗ್ರಾಹಕರಿಗೆ ಖುಷಿ ನೀಡಿದೆ. ಇನ್ನು ಈ ಯೋಜನೆಗಳು ಡೇಟಾ ಪ್ರಯೋಜನ ಮಾತ್ರ ಪಡೆದಿದ್ದು, ಯಾವುದೇ ಹೆಚ್ಚುವರಿ ಸೌಲಭ್ಯಗಳನ್ನು ನೀಡುವುದಿಲ್ಲ.
ಏರ್‌ಟೆಲ್‌ನ 51ರೂ. ಡೇಟಾ ಬೂಸ್ಟರ್ ಪ್ಲ್ಯಾನ್ 3 GB ಡೇಟಾ ಪ್ರಯೋಜನ ಪಡೆದಿದ್ದು, ಇನ್ನು 101ರೂ ಪ್ಲ್ಯಾನ್ 6 GB ಡೇಟಾ ಸೌಲಭ್ಯ ಒದಗಿಸುತ್ತದೆ. ಹಾಗೆಯೇ 151ರೂ. ಪ್ಲ್ಯಾನ್ 9 GB ಡೇಟಾ ಪ್ರಯೋಜನವನ್ನು ನೀಡುತ್ತದೆ. ಇನ್ನು ಈ ರೀಚಾರ್ಜ್ ಪ್ಯಾಕ್‌ಗಳ ವ್ಯಾಲಿಡಿಟಿಯು ಗ್ರಾಹಕರ ಮೂಲ ಪ್ಲ್ಯಾನಿನ ವ್ಯಾಲಿಡಿಟಿಯೇ ಆಗಿರುತ್ತದೆ.
ಏರ್‌ಟೆಲ್‌ನ ಇತರೆ ಜನಪ್ರಿಯ ಪ್ಲ್ಯಾನ್‌ಗಳ ಸೌಲಭ್ಯಗಳು
ಏರ್‌ಟೆಲ್ ಸಂಸ್ಥೆಯ 799ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ 77 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದ್ದು, ಪ್ರತಿದಿನ 1.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಏರ್‌ಟೆಲ್ 5G ಡೇಟಾ, ಹೆಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್ ಸೇವೆಗಳು ಲಭ್ಯ.
ಏರ್‌ಟೆಲ್ ಟೆಲಿಕಾಂನ 579ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ 56 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದ್ದು, ಪ್ರತಿದಿನ 1.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಏರ್‌ಟೆಲ್ 5G ಡೇಟಾ, ಹೆಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್ ಸೇವೆಗಳು ಲಭ್ಯ.
ಏರ್‌ಟೆಲ್‌ನ 3599ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದ್ದು, ಪ್ರತಿದಿನ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಏರ್‌ಟೆಲ್ 5G ಡೇಟಾ, ಹೆಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್ ಸೇವೆಗಳು ಲಭ್ಯ.