Aishwarya-Umapathy Engagement: ನಟ ಅರ್ಜುನ್ ಪುತ್ರಿ ಐಶ್ವರ್ಯ ಮತ್ತು ಉಮಾಪತಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.
Arjun Sarja Daughter: ಅರ್ಜುನ್ ಅವರು ನಡೆಸಿಕೊಡುವ ‘ಸರ್ವೈವರ್’ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದ ರಾಮಯ್ಯ ಅವರ ಕಿರಿಯ ಮಗ ಉಮಾಪತಿ ಮತ್ತು ಅರ್ಜುನ್ ಅವರ ಪುತ್ರಿ ಐಶ್ವರ್ಯ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇತ್ತೀಚೆಗಷ್ಟೇ ತಂಬಿ ರಾಮಯ್ಯ ಅವರು ಮಗನ ಪ್ರೀತಿಗೆ ಹಸಿರು ನಿಶಾನೆ ನೀಡಿ ಮದುವೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಎರಡು ಕುಟುಂಬದವರು ಮಾತುಕಥೆ ನಡೆಸಿದ್ದರು.
ಅದೇ ವೇಳೆ ಇವರಿಬ್ಬರ ಮದುವೆ ನಿಶ್ಚಿತಾರ್ಥ ಶೀಘ್ರದಲ್ಲೇ ಅತ್ಯಂತ ಸರಳವಾಗಿ ನಡೆಯಲಿದೆ ಎಂದು ವರದಿಯಾಗಿತ್ತು. ಇದಕ್ಕಾಗಿ ಭರ್ಜರಿ ಸಿದ್ಧತೆಗಳೂ ನಡೆಯುತ್ತಿದ್ದವು. ಇದರ ಬೆನ್ನಲ್ಲೇ ನಿನ್ನೆ ಚೆನ್ನೈನಲ್ಲಿ ಅರ್ಜುನ್ ನಿರ್ಮಿಸಿರುವ ಆಂಜನೇಯ ದೇಗುಲದಲ್ಲಿ ಅವರಿಬ್ಬರ ನಿಶ್ಚಿತಾರ್ಥ ಅತ್ಯಂತ ಸರಳ ರೀತಿಯಲ್ಲಿ ನೆರವೇರಿದೆ.
ಇದೀಗ ನಿಶ್ಚಿತಾರ್ಥದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಎರಡು ಮನೆಗಳ ಕುಟುಂಬದ ಪ್ರಮುಖ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಇದ್ದಾರೆ. ನಿಶ್ಚಿತಾರ್ಥದಂತೆ ವಿವಾಹ ಸರಳವಾಗಿರದೇ ಅತ್ಯಂತ ಅದ್ಧೂರಿಯಾಗಿ ನಡೆಯಲಿದ್ದು, ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಇನ್ನು ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಈ ವಿಡಿಯೋದಲ್ಲಿ ಈರುಳ್ಳಿ ಗುಲಾಬಿ ಬಣ್ಣದ ರೇಷ್ಮೆ ಸೀರೆಯಲ್ಲಿ ಐಶ್ವರ್ಯಾ ಸೌಂದರ್ಯ ದೇವತೆಯಂತೆ ಮಿಂಚಿದ್ದಾರೆ. ಉಮಾಪತಿ ಐಶ್ ಗೆ ಮ್ಯಾಚಿಂಗ್ ಬಟ್ಟೆ ತೊಟ್ಟಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1