Ajmer 92 Trailer : ಈ ವರ್ಷದ ಬಹು ನಿರೀಕ್ಷಿತ ಚಿತ್ರ ಹಾಗೂ ರಾಜಸ್ಥಾನದಲ್ಲಿರುವ ಪಟ್ಟಣದಲ್ಲಿ ಲೈಂಗಿಕವಾಗಿ ಶೋಷಣೆಗೆ ಮತ್ತು ಬ್ಲ್ಯಾಕ್‌ಮೇಲ್ ಗೆ ಒಳಗಾದ ಸುಮಾರು 250 ಹುಡುಗಿಯರ ನೋವಿನ ಕಥಾಹಂದರವನ್ನು ಒಳಗೊಂಡ ಅಜ್ಮೀರ್ 92 ರ ಟ್ರೈಲರ್ ಇಂದು ಬಿಡುಗಡೆಯಾಗಿದೆ.

Ajmer 92 : ಅಜ್ಮೀರ್ 92 ರ ಸಿನಿಮಾ ಟೈಟಲ್ ರಿವೀಲ್ ಆದಾಗಿನಿಂದಲೂ ವಿವಾದಗಳನ್ನು ಎದರಿಸುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾ ರೀತಿಯಲ್ಲಿ ಸಾಕಷ್ಟು ಟೀಕೆಗಳಿಗೆ ಒಳಗಾದ ಸಿನಿಮಾ ಇದೀಗ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಕೆಲವು ದಿನಗಳಹಿಂದೆ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಿದ್ದ ಅಜ್ಮೀರ್ 92 ಚಿತ್ರತಂಡ ಇಂದು (ಜುಲೈ 17) ಟ್ರೈಲರ್‌ನ್ನು ಬಿಡುಗಡೆ ಮಾಡಿದೆ. ಇನ್ನು ಈ ಟ್ರೈಲರ್‌ನಲ್ಲಿ 1987 ಮತ್ತು 1992ರ ನಡುವೆ ಪಟ್ಟಣದ ಪ್ರಬಲ ಮತ್ತು ಪ್ರಭಾವಿ ವ್ಯಕ್ತಿಗಳಿಂದ ಅತ್ಯಾಚಾರ, ಲೈಂಗಿಕ ಶೋಷಣೆ ಮತ್ತು ಬ್ಲ್ಯಾಕ್‌ಮೇಲ್ ಮಾಡಲಾದ ರಾಜಸ್ಥಾನದ ಅಜ್ಮೀರ್‌ನ ಸುಮಾರು 250 ಹುಡುಗಿಯರ ಸಾವು ನೋವಿನ ಕಥೆಯನ್ನು ಚಲನಚಿತ್ರ ಪ್ರೇಕ್ಷಕರ ಮುಂದಿಡಲಿದೆ ಎಂದು ಹೇಳಲಾಗಿದೆ.
ಪುಷ್ಪೇಂದ್ರ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಮನೋಜ್ ಜೋಶಿ, ಕರಣ್ ವರ್ಮಾ, ಸುಮಿತ್ ಸಿಂಗ್, ಬ್ರಿಜೇಂದ್ರ ಕಲಾ ಮತ್ತು ಜರೀನಾ ವಹಾಬ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ಉಮೇಶ್ ಕುಮಾರ್ ತಿವಾರಿ ನಿರ್ಮಿಸಿದ್ದಾರೆ ಮತ್ತು ಜುಲೈ 21 ರಂದು ತೆರೆಗೆ ಬರಲಿದೆ. ಜಮಿಯತ್ ಉಲಮಾ ಇ ಹಿಂದ್ ಸೇರಿದಂತೆ ಹಲವು ಇಸ್ಲಾಮಿಕ್ ಸಂಘಟನೆಗಳು ಇದನ್ನು ನಿಷೇಧಿಸುವಂತೆ ಕರೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಈ ಅಜ್ಮೀರ್-92 ಸಿನಿಮಾ ಮಹಿಳೆಯರಲ್ಲಿ ಸಬಲೀಕರಣದ ಭಾವನೆಯನ್ನು ಬೆಳಗಿಸಲು ಬಯಸುತ್ತದೆ, ಅವರ ಮೌನವನ್ನು ಮುರಿಯಲು ಮತ್ತು ಯಾವುದೇ ರೀತಿಯ ದೌರ್ಜನ್ಯದ ವಿರುದ್ಧ ಧೈರ್ಯದಿಂದ ಮಾತನಾಡಲು ಪ್ರೋತ್ಸಾಹಿಸುತ್ತದೆ. ಎಂದು ಚಿತ್ರತಂಡ ತಿಳಿಸಿದೆ.