ಅಕ್ಷಯ ತೃತೀಯವನ್ನು ಈ ಬಾರಿ ಮೇ 10ರಂದು ಆಚರಿಸಲಾಗುತ್ತಿದ್ದು, ಈ ದಿನ ಮನೆಮನೆಯಲ್ಲಿ ಸಮೃದ್ಧಿ (Akshaya Tritiya 2024) ತುಂಬ ಬೇಕಾದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳಿವೆ. ಅವುಗಳು ಯಾವುದು ಗೊತ್ತೇ? ಈ ಲೇಖನ ಓದಿ.
ಸಮೃದ್ಧಿಯ ಸಂಕೇತ ಅಕ್ಷಯ ತೃತೀಯವನ್ನು (Akshaya Tritiya 2024) ಮಂಗಳಕರ ದಿನವೆಂದು ಕರೆಯಲಾಗುತ್ತದೆ. ಈ ದಿನ ಏನೇ ಖರೀದಿ ಮಾಡಿದರೂ ಅದು ದ್ವಿಗುಣವಾಗುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ಮೇ 10ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನ ಮಾಡಬೇಕಾದ (dos) ಮತ್ತು ಮಾಡಬಾರದ (dont) ಕೆಲವು ಸಂಗತಿಗಳಿವೆ. ಈ ಬಗ್ಗೆ ತಿಳಿದುಕೊಂಡು ಅನುಸರಿಸಿದರೆ ಮನೆಮನೆಯಲ್ಲೂ ಸುಖ ಶಾಂತಿ ಸಮೃದ್ಧಿಯನ್ನು ತುಂಬಿಸಿಕೊಳ್ಳಬಹುದು.
ಅಕ್ತಿ ಅಥವಾ ಅಖಾ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯವನ್ನು ಹಿಂದೂಗಳು ಮತ್ತು ಜೈನರು ಆಚರಿಸುತ್ತಾರೆ. ಇದು ‘ಅಂತ್ಯವಿಲ್ಲದ ಸಮೃದ್ಧಿಯ ಮೂರನೇ ದಿನ’ ಎಂದು ನಂಬಲಾಗುತ್ತದೆ.
ಈ ದಿನವನ್ನು ತಮ್ಮನ್ನು ತೊರೆದ ಪ್ರೀತಿಪಾತ್ರರನ್ನು ನೆನಪಿಸಲಾಗುತ್ತದೆ. ಉಪವಾಸ, ದಾನ ಮತ್ತು ಪರಸ್ಪರ ಸಹಾಯ ಮಾಡುವ ಮೂಲಕ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಹೊಸ ಉದ್ಯಮ, ಮದುವೆಗಳು, ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಅಕ್ಷಯ ತೃತೀಯವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.
ಅಕ್ಷಯ ತೃತೀಯದ ಮಹತ್ವ
ಅಕ್ಷಯ ತೃತೀಯವು ಕೆಲವು ಪ್ರದೇಶದ ಮಹಿಳೆಯರಿಗೆ ತಮ್ಮ ಜೀವನದಲ್ಲಿ ಅಥವಾ ಭವಿಷ್ಯದಲ್ಲಿ ಮದುವೆಯಾಗುವ ಪುರುಷರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವ ಹಬ್ಬವಾಗಿದೆ.
ಈ ದಿನ ದ್ರೌಪದಿಗೆ ಅಕ್ಷಯ ಪಾತ್ರೆ ಎಂಬ ಮಾಂತ್ರಿಕ ಬಟ್ಟಲನ್ನು ಕೃಷ್ಣ ನೀಡಿದ ಎನ್ನುವ ಕಥೆ ಇದೆ. ಅವಳು ತನ್ನ ಪತಿಯರೊಂದಿಗೆ ವನವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಅವರ ಮನೆಗೆ ಅತಿಥಿಯಾಗಿ ಕೋಪಕ್ಕೆ ಹೆಸರುವಾಸಿಯಾದ ದೂರ್ವಾಸ ಋಷಿ ತಮ್ಮ ಶಿಷ್ಯರೊಂದಿಗೆ ಆಗಮಿಸುತ್ತಾರೆ. ಆಗ ದ್ರೌಪದಿಯ ಬಳಿ ಅವರಿಗೆ ನೀಡಲು ಏನೂ ಇರುವುದಿಲ್ಲ. ಕೃಷ್ಣ ಅಲ್ಲಿಗೆ ಬಂದು ಅವರ ಬಟ್ಟಲಿನಲ್ಲಿದ್ದ ಒಂದು ಅಗುಳು ಅನ್ನವನ್ನು ತಿಂದು ಋಷಿ ಮುನಿಗಳೆಲ್ಲ ಸಂತೃಪ್ತರಾಗುವಂತೆ ಮಾಡಿದ. ಅಲ್ಲದೇ ಋಷಿಯು ಪಾಂಡವರನ್ನು ಶಪಿಸದಂತೆ ತಡೆದ. ಈ ದಿನವು ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಜನ್ಮದಿನವೆಂದೂ ನಂಬಲಾಗಿದೆ. ಈ ಬಾರಿ ಅಕ್ಷಯ ತೃತೀಯವನ್ನು ಮೇ 10ರಂದು ಆಚರಿಸಲಾಗುತ್ತಿದ್ದು, ಮನೆಯಲ್ಲಿ ಸಮೃದ್ಧಿ ತುಂಬ ಬೇಕಾದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳಿವೆ.
ಏನು ಮಾಡಬಹುದು?
ಚಿನ್ನವನ್ನು ಖರೀದಿಸಿ
ಅಕ್ಷಯ ತೃತೀಯದ ಪವಿತ್ರ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸಬಹುದು. ಯಾಕೆಂದರೆ ಅದು ನಿಮ್ಮನ್ನು ಶ್ರೀಮಂತಗೊಳಿಸುತ್ತದೆ ಅಥವಾ ನಿಮ್ಮ ಬಳಿ ಇರುವ ಹಣವನ್ನು ದುಪ್ಪಟ್ಟು ಮಾಡಲು ಸಹಾಯ ಮಾಡುತ್ತದೆ.
ಹೊಸ ವ್ಯವಹಾರ ಪ್ರಾರಂಭ
ಅಕ್ಷಯ ತೃತೀಯ ಹೊಸ ಉದ್ಯಮವನ್ನು ಪ್ರಾರಂಭಿಸಲು ಒಳ್ಳೆಯ ದಿನ ಎಂದು ನಂಬಲಾಗಿದೆ. ಉದಾಹರಣೆಗೆ ಹೊಸ ವ್ಯಾಪಾರವನ್ನು ಪ್ರಾರಂಭಿಸುವುದು ಅಥವಾ ಕಾರು ಖರೀದಿಸುವುದನ್ನು ಈ ದಿನ ಮಾಡಬಹುದು.
ಹೂಡಿಕೆ
ಅಕ್ಷಯ ತೃತೀಯದಂದು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಮಂಗಳಕರ ದಿನವಾಗಿದೆ. ಯಾಕೆಂದರೆ ಇದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
ಆಧ್ಯಾತ್ಮಿಕ ಚಟುವಟಿಕೆ
ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಪ್ರಾರ್ಥನೆ, ಧ್ಯಾನ ಮತ್ತು ಯಜ್ಞದಂತಹ ಆಧ್ಯಾತ್ಮಿಕ ಚಟುವಟಿಕೆಗಳನ್ನು ಮಾಡಬೇಕು.
ಸಾತ್ವಿಕ ಆಹಾರ
ಈ ದಿನ ವಿಷ್ಣುವನ್ನು ಪೂಜಿಸುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೆ ಶುದ್ಧ ಸಾತ್ವಿಕ ಆಹಾರವನ್ನೇ ದೇವರಿಗೆ ಅರ್ಪಿಸಿ.
ಏನು ಮಾಡಬಾರದು?
ಕತ್ತಲೆ ದೂರ ಮಾಡಿ
ಅಕ್ಷಯ ತೃತೀಯದಂದು ಮನೆಯ ಕೋಣೆಯನ್ನು ಕತ್ತಲೆ ಮಾಡಬೇಡಿ. ಈ ಅದೃಷ್ಟದ ದಿನದಂದು ಅದೃಷ್ಟದ ಬೆಳಕು ನಿಮ್ಮ ಮನೆಯ ಪ್ರತಿಯೊಂದು ಕೋಣೆಯನ್ನು ಬೆಳಗಿಸಲಿ ಮತ್ತು ಯಾವುದೇ ಕೋಣೆ ಕತ್ತಲೆಯಾಗದಂತೆ ನೋಡಿಕೊಳ್ಳಿ.
ಒಟ್ಟಿಗೆ ಪೂಜಿಸಿ
ಗಣೇಶ ಮತ್ತು ಲಕ್ಷ್ಮಿ ದೇವರನ್ನು ಪ್ರತ್ಯೇಕವಾಗಿ ಪೂಜಿಸಬೇಡಿ. ಈ ದಿನ ಈ ಎರಡೂ ದೇವರನ್ನು ಒಟ್ಟಿಗೆ ಪ್ರಾರ್ಥಿಸುವುದು ಹೆಚ್ಚು ಸಮೃದ್ಧಿಯನ್ನು ತರುತ್ತದೆ.
ಬರಿಗೈಯಲ್ಲಿ ಬರಬೇಡಿ
ಅಕ್ಷಯ ತೃತೀಯದಂದು ಶಾಪಿಂಗ್ ಮಾಡಲು ಹೋದಾಗ ಏನನ್ನಾದರೂ ಖರೀದಿಸಿ. ಚಿನ್ನ ಅಥವಾ ಬೆಳ್ಳಿ ಅಲ್ಲದಿದ್ದರೂ, ಲೋಹದ ಆಭರಣವನ್ನು ಪಡೆಯುವುದು ನಿಮ್ಮ ಮನೆಗೆ ಸಂಪತ್ತನ್ನು ತರುತ್ತದೆ.
ಪವಿತ್ರ ದಾರ
ಅಕ್ಷಯ ತೃತೀಯದಂದು ಹೆಚ್ಚು ಹೊತ್ತು ಪವಿತ್ರ ದಾರವನ್ನು ಧರಿಸುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯವಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1