ಕೊರಚ ಜನಾಂಗವನ್ನು ಅಲೆಮಾರಿ ಅಭಿವೃದ್ಧಿ ಕೋಶದ ನಿಗಮದಲ್ಲೇ ಉಳಿಸುವಂತೆ ಅಖಿಲ ಕರ್ನಾಟಕ ಕೊರಚ ಮಹಾಸಂಘ (ರಿ.)ದ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 20 : ಕುಳುವ ಸಂಘಟನೆಯನ್ನು ನಿಷೇದಿಸಿ ಸಂಘಟನೆಯ ಮುಖಂಡರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ಕೊರಚ
ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಹಾಗೂ ಕೊರಚ ಜನಾಂಗದ ಸಮಾಜವನ್ನು ಅಲೆಮಾರಿ ಅಭಿವೃದ್ಧಿ ಕೋಶದ ನಿಗಮದಲ್ಲೇ
ಉಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಅಖಿಲ ಕರ್ನಾಟಕ ಕೊರಚ
ಮಹಾಸಂಘ (ರಿ.) ಅಖಿಲ ಕರ್ನಾಟಕ ಕೊರಚ ಮಹಾಸಂಘ (ಆರ್.) ಮನವಿಯನ್ನು ಸಲ್ಲಿಸಿದೆ.

ಈ ಬಗ್ಗೆ ಮನವಿಯನ್ನು ಸಲ್ಲಿಸಿರುವ ಅಖಿಲ ಕರ್ನಾಟಕ ಕೊರಚ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್,
ಕೊರಚ, ಕೊರಮ ಬೇರೆ ಬೇರೆ ಜಾತಿಗಳಾಗಿರುತ್ತವೆ. ಸಂವಿಧಾನದ ಜಾತಿಯ ಪಟ್ಟಿಯಲ್ಲಿ ಕ್ರಮಸಂಖ್ಯೆ-53 ರಲ್ಲಿ ಕೊರಚ
ಜಾತಿಯನ್ನು ಸೇರಿಸಿದ್ದು, ಕ್ರಮಸಂಖ್ಯೆ:54 ರಲ್ಲಿ ಕೊರಮ ಜಾತಿಯನ್ನು ಸೇರಿಸಿರುತ್ತಾರೆ. ಕೊರಚ ಜನಾಂಗದ ಜನಗಣತಿಯು ಕೇವಲ
ರಾಜ್ಯದಲ್ಲಿ 53 ರಿಂದ 55 ಸಾವಿರ ಜನಸಂಖ್ಯೆ ಇರುತ್ತದೆ. ಈ ನಮ್ಮ ಸಮಾಜದ ಜನಾಂಗವು ಆರ್ಥಿಕವಾಗಿ, ಶೈಕ್ಷಣಿಕವಾಗಿ,
ರಾಜಕೀಯವಾಗಿ ಇತರೆ ಸರ್ಕಾರದ ಸೌಲಭ್ಯವನ್ನು ಪಡೆಯುವುದರಲ್ಲಿ ಅತಿ ಹಿಂದುಳಿದು ಈ ಜಾತಿಯು ಅವನತಿಯ
ಅಂಚಿನಲ್ಲಿರುತ್ತದೆ. ಆದರೆ ಕೊರಮ ಜನಾಂಗವು ರಾಜ್ಯದಲ್ಲಿ 2.5 ಲಕ್ಷದಿಂದ 3.00 ಲಕ್ಷ ಜನಸಂಖ್ಯೆಯನ್ನು ಹೊಂದಿರುತ್ತದೆ.

ಕೊರಮ ಜನಾಂಗವು ಮುಂದುವರೆದ ಜನಾಂಗವಾಗಿರುತ್ತದೆ. ಇತ್ತೀಚಿಗೆ ಕೆಲವರು ಕುಳುವ ಸಮಾಜ ಎನ್ನುವ ಸಂಘವನ್ನು ಅವರ
ಉದ್ದೇಶಕ್ಕಾಗಿ ಹುಟ್ಟಿಹಾಕಿಕೊಂಡಿರುತ್ತಾರೆ. ಆದರೆ ಕುಳುವ ಎನ್ನುವ ಜಾತಿಯು ಇರುವುದಿಲ್ಲ ಮತ್ತು ಕುಳುವ ಭಾಷೆಯು ಸಹ
ಇರುವುದಿಲ್ಲ. ಆದರೆ ಕೊರಚರ ಭಾಷೆಯನ್ನು ಕುಡು ಭಾಷೆ ಎಂದು ಕರೆಯುತ್ತಾರೆ. ಈ ಭಾಷೆಯು ಅನಾದಿಕಾಲದಿಂದಲೂ
ಜಾರಿಯಲ್ಲಿರುತ್ತದೆ. ಈ ಭಾಷೆಯನ್ನು ಕೊರಚ ಜನಾಂಗದವರು ಮಾತ್ರ ಈಗಲೂ ಮಾತನಾಡುತ್ತಾರೆ. ಇತ್ತೀಚಿಗೆ ಕೆಲವರು ಕೊರಚ,
ಕೊರಮ ಜಾತಿಗಳ ಜೊತೆಗೆ ಜಾತಿಯ ಹೆಸರು ಇಲ್ಲದ ಕುಳುವ ಜಾತಿಗಳ ಹೆಸರನ್ನು ಬಳಸಿಕೊಂಡು ನಿಗಮ ಮಂಡಳಿಯನ್ನು
ಮಾಡಲು ತಮ್ಮ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿರುತ್ತಾರೆ. ಆದರೆ ಅವರ ಉದ್ದೇಶ ಏನೆಂದರೆ ಕೊರಚ ಸಮಾಜವನ್ನು
ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸರ್ಕಾರದಿಂದ ದೊರಕುವ ಯಾವುದೇ ಸೌಲಭ್ಯವನ್ನು ಪಡೆಯದಂತೆ
ತುಳಿಯುವ ಉದ್ದೇಶದಿಂದ ಮನವಿಯನ್ನು ಸಲ್ಲಿಸಿರುತ್ತಾರೆ. ಇಂತಹ ಮನವಿಗಳನ್ನು ತಾವು ಪುರಸ್ಕರಿಸಬಾರದೆಂದು ತಮ್ಮಲ್ಲಿ
ಕೇಳಿಕೊಳ್ಳುತ್ತೇವೆ. ಗೌರವಾನ್ವಿತರಾದ ತಾವುಗಳು ಕೊರಚ ಮತ್ತು ಕೊರಮ ಜಾತಿಗಳು ಬೇರೆ ಬೇರೆ ಎಂದು ತಿಳಿಯತಕ್ಕದ್ದು.
ಕೊರಚ ಜಾತಿಯು ಸಮಾಜದಲ್ಲಿ ಕಟ್ಟಕಡೆಯ ಅಲೆಮಾರಿ ಸಮುದಾಯವಾಗಿದ್ದು, ಇಂತಹ ಸಮಾಜವನ್ನು ತಾವುಗಳು ಗುರುತಿಸಿ
ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮುಂದುವರೆಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು.

ನಮ್ಮ ಜನಾಂಗವನ್ನು ಯಾವುದೇ ನಿಗಮ ಮಂಡಳಿಗೆ ಸೇರಿಸದಂತೆ ನಮ್ಮನ್ನು ಅಲೆಮಾರಿ ಅಭಿವೃದ್ಧಿ ಕೋಶದ ನಿಗಮದಲ್ಲಿಯೇ
ಉಳಿಸಿ ನಮಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅವಕಾಶಮಾಡಿ ಕೊಡಬೇಕೆಂದು ಮುಂದುವರೆದಂತೆ ಕುಳುವ
ಸಂವಿಧಾನವಲ್ಲದ ಸಂಘಟನೆ ಮಾಡಿಕೊಂಡು ಸರ್ಕಾರಿ ಸೌಲಭ್ಯಗಳನ್ನು ಲೂಟಿಮಾಡುತ್ತಿರುವುದು ಕಂಡು ಬಂದಿರುತ್ತದೆ. 2025-
26ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ಕೊರಚ ಮತ್ತು ಕೊರಮ ಸಮುದಾಯಗಳಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ನಿಗಮ
ನೀಡಲು ಮನವಿಯನ್ನು ಸಲ್ಲಿಸಿರುತ್ತಾರೆ. ಈ ಮನವಿಯನ್ನು ಅಖಿಲ ಕರ್ನಾಟಕ ಮಹಾಸಂಘವು ತಿರಸ್ಕರಿಸುತ್ತಿದೆ. ಈ ವಿಷಯದ ಬಗ್ಗೆ
ಹಲವಾರು ಬಾರಿ ಹೋರಾಟವನ್ನು ಮಾಡಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ. ಆದ್ದರಿಂದ ಕುಳುವ ಸಂಘಟನೆಯನ್ನು ನಿಷೇದಿಸಿ ಸಂಘಟನೆಯ ಮುಖಂಡರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ನಮ್ಮ ಕೊರಚ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಯಿತು.

ಅಖಿಲ ಕರ್ನಾಟಕ ಕೊರಚ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಜಿಲ್ಲಾಧ್ಯಕ್ಷ ತಿಮ್ಮಣ್ಣ, ನಿರ್ದೆಶಕರಾದ
ಉಮೇಶ್, ಮಂಜಪ್ಪ, ಮಾರೇಶ್, ಆನಂದ ಪೂಜಾರಿ, ಹನುಮಂತ, ಸಿದ್ದಾರ್ಥ ಹೇಮಲತಾ ಭಾಗವಹಿಸಿದ್ದರು

Leave a Reply

Your email address will not be published. Required fields are marked *