IND vs AFG 1st T20I: ಅಫ್ಘಾನಿಸ್ತಾನ ವಿರುದ್ಧದ ಮೊದಲ T20 ಪಂದ್ಯದಲ್ಲಿ 40 ಎಸೆತಗಳಲ್ಲಿ 60 ರನ್ ಗಳಿಸಿದ ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಹೇಳಿಕೆ ನೀಡಿದ್ದಾರೆ. ಶಿವಂ ದುಬೆ ಅವರ ಆಕ್ರಮಣಕಾರಿ ಅರ್ಧಶತಕದಿಂದ ಭಾರತ ಗುರುವಾರ ಆರು ವಿಕೆಟ್’ಗಳ ಜಯ ಸಾಧಿಸಿತು.
ಶಿವಂ ದುಬೆ ‘ಜಿಯೋ ಸಿನಿಮಾ’ ಜೊತೆ ಮಾತನಾಡಿದ್ದು, “ನಾನು ಬ್ಯಾಟಿಂಗ್’ಗೆ ಬಂದಾಗ, ಎಂಎಸ್ ಧೋನಿಯಿಂದ ಪಂದ್ಯವನ್ನು ಮುಗಿಸುವ ಬಗ್ಗೆ ನಾನು ಕಲಿತದ್ದನ್ನು ಕಾರ್ಯಗತಗೊಳಿಸಲು ಬಯಸಿದ್ದೆ. ಬೇರೆ ಬೇರೆ ಸನ್ನಿವೇಶಗಳಲ್ಲಿ ಹೇಗೆ ಆಡಬೇಕು ಅಂತ ಹೇಳಿಕೊಟ್ಟು ಎರಡು-ಮೂರು ಟಿಪ್ಸ್ ಕೊಟ್ಟರು. ಅವರಿಂದಾಗಿ ನನ್ನ ಆತ್ಮವಿಶ್ವಾಸ ಹೆಚ್ಚಿದೆ” ಎಂದು ಹೇಳಿದರು.
ಶಿವಂ ದುಬೆ ಕಳೆದ ವರ್ಷ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್’ನಲ್ಲಿ ಭಾರತದ ಪರ ಆಡಿದ್ದರು.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ ಶಿವಂ ದುಬೆ ಮಹೇಂದ್ರ ಸಿಂಗ್ ಧೋನಿ ಅವರ ಅಪ್ಪಟ ಶಿಷ್ಯ. “ಇಬ್ಬರೂ ನನಗೆ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡುತ್ತಾರೆ. ಇನ್ನೂ ಮಾಡಲು ಸಾಕಷ್ಟು ಶ್ರಮವಿದೆ. ನಾನು ಚೆನ್ನಾಗಿ ಆಡಬೇಕೆಂದು ನನಗೆ ತಿಳಿದಿದೆ. ಇದು ನನ್ನೊಳಗೆ ಸಕಾರಾತ್ಮಕತೆಯನ್ನು ತರುತ್ತದೆ. ಈ ಎಲ್ಲಾ ಕ್ರೆಡಿಟ್ ಅವರಿಗೆ ಸಲ್ಲುತ್ತೆ” ಎಂದು ಹೇಳಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1