ವೈದ್ಯಕೀಯ–ದಂತ ಕೋರ್ಸ್‌ಗಳ ಸ್ಟ್ರೇ ವೇಕೆನ್ಸಿ ಸುತ್ತು: ಆಪ್ಷನ್ ದಾಖಲಿಸಲು ಡಿ.15ರವರೆಗೆ ಆಯ್ಕೆ ದಾಖಲಿಸಲು ಅವಕಾಶ.

ಬೆಂಗಳೂರು:

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಡಿ.15ರಂದು ಬೆಳಿಗ್ಗೆ 11 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

ಆನ್ ಲೈನ್ ಮೂಲಕ ವೈದ್ಯಕೀಯ ಕೋರ್ಸ್ ಶುಲ್ಕ ಪಾವತಿಸುವುದಕ್ಕೂ ಬ್ಯಾಂಕ್ ಅಕೌಂಟ್ ನಂಬರ್ (ವೆಬ್ ಸೈಟ್ ನೋಡಿ) ನೀಡಿದ್ದು, ಅದರ ನಂತರ ಪಾವತಿ ವಿವರ ಹಾಗೂ ಸಿಇಟಿ ಸಂಖ್ಯೆಯನ್ನು keavikasana@gmail.comಗೆ ಇ-ಮೇಲ್ ಮಾಡುವುದು ಅಥವಾ ಪ್ರಾಧಿಕಾರದ ಕಚೇರಿಗೆ ಖುದ್ದು ತಲುಪಿಸಬೇಕು. ಅದರ ಬಳಿಕವೇ ಆಪ್ಷನ್ ದಾಖಲಿಗೆ ಅವಕಾಶ ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಡಿ.15ರಂದು ಸಂಜೆ 4ಗಂಟೆ ನಂತರ ಪ್ರಕಟಿಸಲಾಗುತ್ತದೆ. 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡಿರುವ ಕೆಲವರು ಇನ್ನೂ ಕಾಲೇಜಿಗೆ ವರದಿ ಮಾಡಿಕೊಂಡಿಲ್ಲ. ಅಂತಹವರ ಪಟ್ಟಿಯನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರವೇಶ ಪಡೆಯುವುದು ಕಡ್ಡಾಯವಾಗಿದ್ದು, ಅಂತಹವರಿಗೆ ಡಿ.14ರವರೆಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಒಂದು ವೇಳೆ ನಿಗದಿತ ಅವಧಿಯಲ್ಲಿ ವರದಿ ಮಾಡಿಕೊಳ್ಳದಿದ್ದರೆ ಡಿ.15ರಂದು ಬೆಳಿಗ್ಗೆ 9ಗಂಟೆಗೆ ಪ್ರಾಧಿಕಾರಕ್ಕೆ ಖುದ್ದು ಬಂದು ಕಾರಣ ತಿಳಿಸಬೇಕು. ನಂತರ ಅವರಿಂದ ತೆರವಾಗುವ ಸೀಟುಗಳನ್ನು ಸ್ಟ್ರೇ ವೇಕೆನ್ಸಿ ಸುತ್ತಿಗೆ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *