Amazon Great Republic Day Sale 2025: ಅಮೆಜಾನ್ ಸ್ಫೋಟಕ ಮಾರಾಟ ಆರಂಭ: ಸ್ಮಾರ್ಟ್​​ಫೋನ್ ಬೇಕಿದ್ರೆ ಇಂದೇ ಖರೀದಿಸಿ.

ಅಮೆಜಾನ್ ಜನವರಿ 13 ರ ಮಧ್ಯಾಹ್ನದಿಂದ ಸಾಮಾನ್ಯ ಜನರಿಗೆ ಮಾರಾಟದ ಆರಂಭಿಕ ಸಮಯವನ್ನು ನಿಗದಿಪಡಿಸಿದೆ. ಅದೇ ಸಮಯದಲ್ಲಿ, ಪ್ರೈಮ್ ಸದಸ್ಯರಿಗೆ ಮಾರಾಟವು 13 ರ ಮಧ್ಯರಾತ್ರಿಯಿಂದ ಪ್ರಾರಂಭವಾಗಿದೆ. ಮಾರಾಟಕ್ಕಾಗಿ ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ಪುಟವನ್ನು ರಚಿಸಿದೆ, ಇದರಿಂದ ಯಾವ ವಸ್ತುಗಳ ಮೇಲೆ ರಿಯಾಯಿತಿ ಲಭ್ಯವಿದೆ ಎಂಬುದನ್ನು ನೋಡಬಹುದು.

ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ ಇದೀಗ ಮತ್ತೊಮ್ಮೆ ಹೊಸ ಮಾರಾಟವನ್ನು ಶುರುಮಾಡಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಕಂಪನಿಯು ಗ್ರೇಟ್ ರಿಪಬ್ಲಿಕ್ ಡೇ 2025 ಮಾರಾಟವನ್ನು ಶುರುಮಾಡಿದೆ. ಇಂದಿನಿಂದ ಈ ಸೇಲ್ ಲೈವ್ ಆಗಿದೆ. ಈ ಸೇಲ್‌ನಲ್ಲಿ ನೀವು ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ಪಡೆಯುತ್ತೀರಿ. ಅಮೆಜಾನ್ ಈ ಮಾರಾಟವನ್ನು ಎರಡು ಸಮಯಗಳಲ್ಲಿ ಪ್ರಾರಂಭಿಸಿದೆ. ಒಂದು ಸಾಮಾನ್ಯ ಜನರಿಗೆ ಮತ್ತು ಇನ್ನೊಂದು ಅಮೆಜಾನ್ ಸದಸ್ಯರಿಗೆ ತೆರೆದಿದೆ.

ಅಮೆಜಾನ್ ಜನವರಿ 13 ರ ಮಧ್ಯಾಹ್ನದಿಂದ ಸಾಮಾನ್ಯ ಜನರಿಗೆ ಮಾರಾಟದ ಆರಂಭಿಕ ಸಮಯವನ್ನು ನಿಗದಿಪಡಿಸಿದೆ. ಅದೇ ಸಮಯದಲ್ಲಿ, ಪ್ರೈಮ್ ಸದಸ್ಯರಿಗೆ ಮಾರಾಟವು 13 ರ ಮಧ್ಯರಾತ್ರಿಯಿಂದ ಪ್ರಾರಂಭವಾಗಿದೆ. ಮಾರಾಟಕ್ಕಾಗಿ ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ಪುಟವನ್ನು ರಚಿಸಿದೆ, ಇದರಿಂದ ಯಾವ ವಸ್ತುಗಳ ಮೇಲೆ ರಿಯಾಯಿತಿ ಲಭ್ಯವಿದೆ ಎಂಬುದನ್ನು ನೋಡಬಹುದು. ಆದಾಗ್ಯೂ, ಮಾರಾಟವು ಎಷ್ಟು ದಿನಗಳ ವರೆಗೆ ಇರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸ್ಮಾರ್ಟ್​ಫೋನ್ಸ್ ಮೇಲೆ ರಿಯಾಯಿತಿಗಳು:

ನೀವು ಹೊಸ ವರ್ಷದಲ್ಲಿ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಖರೀದಿಸಲು ಯೋಜಿಸುತ್ತಿದ್ದರೆ ಇದು ನಿಮಗೆ ಉತ್ತಮ ಅವಕಾಶ ಎಂದು ಹೇಳಬಹುದು. ಇಲ್ಲಿ ನೀವು ಅತಿ ಕಡಿಮೆ ಬೆಲೆಗೆ ಮೊಬೈಲ್ ಫೋನುಗಳನ್ನು ಪಡೆಯಬಹುದು.

ಆ್ಯಪಲ್ ಐಫೋನ್ 15 ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2025 ಮಾರಾಟದಲ್ಲಿ, ನೀವು 69,900 ರೂ. ಬೆಲೆಯ ಬದಲಿಗೆ ಕೇವಲ 55,499 ರೂ. ಗಳಲ್ಲಿ ಪಡೆಯುತ್ತೀರಿ.

ಒನ್​ಪ್ಲಸ್ 13- ಮಾರಾಟದ ಸಮಯದಲ್ಲಿ ನೀವು ಈ ಸ್ಮಾರ್ಟ್​​ಫೋನ್ ಅನ್ನು ರೂ. 64,999 ಗೆ ಪಡೆಯುತ್ತೀರಿ, ಇದರ ಮೂಲಬೆಲೆ ರೂ. 72,999 ಆಗಿದೆ.

ಒನ್​ಪ್ಲಸ್ 13R- ಕಂಪನಿಯು ಒನ್​ಪ್ಲಸ್ 13R ನಲ್ಲಿ ಬಂಪರ್ ರಿಯಾಯಿತಿಯನ್ನು ಘೋಷಿಸಿದೆ. ಒನ್​ಪ್ಲಸ್​ನ ಬಹು ಬೇಡಿಕೆಯ ಫೋನ್ ಅನ್ನು ಅಮೆಜಾನ್​ನ ಗ್ರೇಟ್ ರಿಪಬ್ಲಿಕ್ ಸೇಲ್ 2025 ರ ಸಮಯದಲ್ಲಿ 39,999 ರೂ. ಗಳಿಗೆ ಖರೀದಿಸಬಹುದು.

ಸ್ಯಾಮ್‌ಸಂಗ್ S23 ಅಲ್ಟ್ರಾ 5G ಫೋನ್‌ನಲ್ಲಿ ನೀವು ಬಂಪರ್ ರಿಯಾಯಿತಿಯನ್ನು ಪಡೆಯುತ್ತೀರಿ, ನೀವು ರೂ. 1,49,999 ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಕೇವಲ ರೂ. 69,999 ಕ್ಕೆ ಖರೀದಿಸಬಹುದು.

ಸ್ಮಾರ್ಟ್‌ಫೋನ್‌ಗಳ ಹೊರತಾಗಿ, ನೀವು ಲ್ಯಾಪ್‌ಟಾಪ್‌ಗಳು, ಇಯರ್‌ಫೋನ್‌ಗಳು, ನೆಕ್ ಬ್ಯಾಂಡ್‌ಗಳನ್ನು ಸಹ ಈ ಮಾರಾಟದಲ್ಲಿ ಅಗ್ಗವಾಗಿ ಖರೀದಿಸಬಹುದು.

ಅಮೆಜಾನ್​ನ ಈ ಮಾರಾಟದಲ್ಲಿ, ನೀವು ಐಫೋನ್ 16 ನಲ್ಲಿ ಉತ್ತಮ ಡೀಲ್ ಅನ್ನು ಪಡೆಯುತ್ತೀರಿ. ನೀವು ಈ ಫೋನ್ ಅನ್ನು ಕೇವಲ 74,900 ರೂ. ಗಳಲ್ಲಿ ರಿಯಾಯಿತಿಯೊಂದಿಗೆ ಖರೀದಿಸಬಹುದು. EMI ನಲ್ಲಿ ತೆಗೆದುಕೊಳ್ಳಲು ಬಯಸಿದರೆ, ಮಾಸಿಕ EMI ಕೇವಲ 3,631 ರೂ. ಆಗಿರುತ್ತದೆ. ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ನೀವು ರೂ. 1000 ವರೆಗೆ ರಿಯಾಯಿತಿ ಪಡೆಯಬಹುದು.

ಹಾಗೆಯೆ ಮೊಬೈಲ್ ಬಿಡಿಭಾಗಗಳ ಮೇಲೆ ನೀವು ಶೇಕಡಾ 80 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ನೀವು ಲ್ಯಾಪ್‌ಟಾಪ್‌ಗಳ ಮೇಲೆ ಶೇಕಡಾ 40 ರಷ್ಟು, ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇಕಡಾ 75 ರಷ್ಟು ಮತ್ತು ಫ್ಯಾಷನ್ ಮತ್ತು ಸೌಂದರ್ಯ ಉತ್ಪನ್ನಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಪಡೆಯಬಹುದು.

Source : https://tv9kannada.com/technology/amazon-great-republic-day-sale-2025-now-live-get-big-discounts-on-smartphones-and-gadgets-vb-963253.html

Leave a Reply

Your email address will not be published. Required fields are marked *