ಚಿತ್ರದುರ್ಗದಲ್ಲಿ ಅಂಬಾ ಭವಾನಿ ದೇವಿಯ ನವರಾತ್ರಿ ವಿಶೇಷ ಅಲಂಕಾರ.

ಚಿತ್ರದುರ್ಗ ಸೆ. 25

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ನಗರದ ಕೆಳಗೋಟೆಯಲ್ಲಿನ ಶ್ರೀ ಅಂಬಾ ಭವಾನಿ ದೇವಸ್ಥಾನ, ಶ್ರೀ ಮರಾಠ ವಿದ್ಯಾವರ್ಧಕ ಸಂಘ ಹಾಗೂ ಶ್ರೀ ಜೀಜಾಮಾತ ಮಹಿಳಾ ಮಂಡಳಿವತಿಯಿಂದ ಅಂಬ ಭವಾನಿ ದೇವಾಲಯದಲ್ಲಿ ಸೆ. 22 ರಿಂದ ಶ್ರೀ ಅಂಬಾಭವಾನಿ ದೇವಿಯ ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವದ ಅಂಗವಾಗಿ ಅಂಬಭವಾನಿ ಅಮ್ಮನವರಿಗೆ ಪ್ರತಿ ದಿನ ವಿಶೇಷವಾದ ಅಲಂಕಾರವನ್ನು ಮಾಡಲಾಗುತ್ತಿದೆ.

ಸೆ. 25ರ ಗುರುವಾರವಾದ ಇಂದು ಅಮ್ಮನವರಿಗೆ ಬಳೆಯ ಅಂಲಕಾರವನ್ನು ಮಾಡಲಾಗಿತ್ತು, ಅಮ್ಮನವರಿಗೆ ವಿಶೇಷವಾದ ಆಲಂಕಾರನ್ನು ಮಾಡಿ ಪೂಜೆಯನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಮಂಗಳರಾತಿ, ಪ್ರಸಾದವನ್ನು ವಿತರಣೆ ಮಾಡಲಾಯಿತು.

Views: 26

Leave a Reply

Your email address will not be published. Required fields are marked *