Ambedkar Jayanti 2024: ಸಂವಿಧಾನ ಶಿಲ್ಪಿಯ ಜನ್ಮದಿನದ ನೆನಪು; ಅಂಬೇಡ್ಕರ್‌ ಜಯಂತಿ ಆಚರಣೆಯ ಮಹತ್ವ.

ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್‌ ಅಂಬೇಡ್ಕರ್‌ ಅವರ ಜನ್ಮದಿನವಾದ ಏಪ್ರಿಲ್‌ 14 ಅನ್ನು ʼಅಂಬೇಡ್ಕರ್‌ ಜಯಂತಿʼ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ಸಮಾನತೆಯ ದಿನ ಎಂದೂ ಕರೆಯಲಾಗುತ್ತದೆ. ಡಾ. ಭೀಮರಾವ್‌ ಅಂಬೇಡ್ಕರ್‌ ಅವರ 134ನೇ ಹುಟ್ಟುಹಬ್ಬದ ಸಂದರ್ಭ ಅಂಬೇಡ್ಕರ್‌ ಜಯಂತಿ ಆಚರಣೆಯ ಉದ್ದೇಶ, ಮಹತ್ವ ಹಾಗೂ ಅಂಬೇಡ್ಕರ್‌ ಅವರ ಮಹತ್‌ಕಾರ್ಯಗಳ ಪರಿಚಯ ಇಲ್ಲಿದೆ.

ಪ್ರತಿವರ್ಷ ಏಪ್ರಿಲ್‌ 14 ರಂದು ಭಾರತ ದೇಶದಾದ್ಯಂತ ಅಂಬೇಡ್ಕರ್‌ ಜಯಂತಿ ಅಥವಾ ಭೀಮ್‌ ಜಯಂತಿಯನ್ನು ಆಚರಿಸಲಾಗುತ್ತದೆ. ಇದು ನಮ್ಮ ದೇಶದ ಸಂವಿಧಾನ ಶಿಲ್ಪಿ ಎಂದೇ ಖ್ಯಾತಿಯಾಗಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಜನ್ಮದಿನವಾಗಿದೆ. ವಿಶ್ವದರ್ಜೆಯ ವಕೀಲರು, ಸಮಾಜ ಸುಧಾಕರರೂ ಆಗಿದ್ದ ಅಂಬೇಡ್ಕರ್‌ ಅವರು ಭಾರತದ ದಲಿತ ಚಳವಳಿಗಳ ಹಿಂದಿನ ಮಹಾನ್‌ ಶಕ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ಶಿಕ್ಷಣ, ಸಮಾನತೆ, ಅರ್ಥಶಾಸ್ತ್ರಕ್ಕೆ ಇವರು ನೀಡಿದ ಕೊಡುಗೆಗಳು ಅಪಾರ. 

1891ರಲ್ಲಿ ಜನಿಸಿದ ಅಂಬೇಡ್ಕರ್‌ ಅವರು ಭಾರತ ಸಂವಿಧಾನದ ಪ್ರಧಾನ ಶಿಲ್ಪಿ ಮಾತ್ರವಲ್ಲ, ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕರೂ ಆಗಿದ್ದರು.

ಅವರು ಅಸ್ಪೃಶ್ಯರ ವಿರುದ್ಧದ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮಹಿಳೆಯರು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅದ್ದರಿಂದ ಅವರ ಜನ್ಮ ವಾರ್ಷಿಕೋತ್ಸವವನ್ನು ಸಮಾನತೆಯ ದಿನ ಎಂದೂ ಕರೆಯಲಾಗುತ್ತದೆ.

ಅಂಬೇಡ್ಕರ್‌ ಅವರು ಕಾನೂನಿನ ದೃಷ್ಟಿಯಲ್ಲಿ ಎಲ್ಲಾ ನಾಗರಿಕರು ಸಮಾನರು, ಎಲ್ಲರಿಗೂ ಸಮಾನ ನ್ಯಾಯ ದೊರಕಬೇಕು ಎಂಬುದನ್ನು ತಮ್ಮ ಜೀವಮಾನವಿಡಿ ಪ್ರತಿಪಾದಿಸಿದರು. ಈ ವರ್ಷ ಬಾಬ್‌ ಸಾಹೇಬ್‌ ಅಂಬೇಡ್ಕರ್‌ ಅವರ 134ನೇ ಜನ್ಮದಿನವಿದು.

ಅಂಬೇಡ್ಕರ್‌ ವೈಯಕ್ತಿಕ ಬದುಕು

ಅಂಬೇಡ್ಕರ್‌ ಏಪ್ರಿಲ್‌ 14, 1891 ರಲ್ಲಿ ಮಧ್ಯಪ್ರದೇಶದ ಮಾಹೋನಲ್ಲಿ ಜನಿಸುತ್ತಾರೆ. ಇವರ ತಂದೆ ರಾಮ್‌ಜಿ ಮಾಲೋಜಿ ಸಕ್ಪಾಲ್‌, ತಾಯಿ ಭೀಮಾಬಾಯಿ. ಅಂಬೇಡ್ಕರ್‌ ಅವರು 2 ಮದುವೆಯಾಗಿದ್ದರು. ಮೊದಲ ಮಡದಿ ರಮಾಬಾಯಿ ಅಂಬೇಡ್ಕರ್‌ ಹಾಗೂ ಎರಡನೇಯವರು ಡಾ. ಸವಿತಾ ಅಂಬೇಡ್ಕರ್‌. ಇವರ ಮಗ ಯಶವಂತ್‌ ಭೀಮರಾವ್‌ ಅಂಬೇಡ್ಕರ್‌.

ಅಂಬೇಡ್ಕರ್‌ ಜನ್ಮದಿನದಂದು ದೇಶದಾದ್ಯಂತ ಮೆರವಣಿಗೆಗಳು,  ಸಭೆಗಳು ಮತ್ತು ಅಂಬೇಡ್ಕರ್‌ ಪ್ರತಿಮೆಗಳಿಗೆ ಶೃದ್ಧಾಂಜಲಿ ಸಲ್ಲಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತವೆ.

ಈ ದಿನ ಮಹತ್ವವನ್ನು ಎತ್ತಿ ತೋರಿಸುವ ಪ್ರಮುಖಾಂಶಗಳಿವು

ಸಂವಿಧಾನ ಶಿಲ್ಪಿ: ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಎತ್ತಿ ಹಿಡಿಯುವ ಸಂವಿಧಾನವನ್ನು ರೂಪಿಸುವಲ್ಲಿ ಅವರ ಪ್ರಯತ್ನಗಳನ್ನು ಗುರುತಿಸಿ, ಭಾರತೀಯ ಸಂವಿಧಾನದ ಪ್ರಧಾನ ವಾಸ್ತುಶಿಲ್ಪಿಯಾಗಿ ಡಾ. ಅಂಬೇಡ್ಕರ್‌ ಅವರ ಪಾತ್ರವನ್ನು ಕೊಂಡಾಡಲಾಗುತ್ತದೆ.

ಸಮಾನತೆಯ ಕ್ರುಸೇಡರ್‌: ಭಾರತದಲ್ಲಿದ್ದ ಸಾಮಾಜಿಕ ತಾರತಮ್ಯದ ವಿರುದ್ಧ ಅವರ ನಿರಂತರ ಹೋರಾಟ ಮತ್ತು ತುಳಿತಕ್ಕೊಳಗಾದ ಜಾತಿಗಳ ಹಕ್ಕುಗಳಿಗಾಗಿ ಅವರ ಪ್ರತಿಪಾದನೆಯು ಭಾರತದಲ್ಲಿ ನೀತಿಗಳು ಹಾಗೂ ಸಾಮಾಜಿಕ ಸುಧಾರಣೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಶಿಕ್ಷಣದ ವಕೀಲ: ಶಿಕ್ಷಣವನ್ನು ಪರಿವರ್ತನೆಯ ಸಾಧನೆವಾಗಿ ತೆಗೆದುಕೊಂಡ ಮಹಾನ್‌ ವ್ಯಕ್ತಿ ಡಾ. ಅಂಬೇಡ್ಕರ್‌. ಸಾಮಾಜಿಕ ಹಾಗೂ ಆರ್ಥಿಕ ವಲಯಗಳಲ್ಲಿ ಬದಲಾವಣೆ ತರಲು ಶಿಕ್ಷಣ ಎಷ್ಟು ಮಹತ್ವದ್ದು ಎಂಬುದನ್ನು ಡಾ. ಅಂಬೇಡ್ಕರ್‌ ಪ್ರತಿಪಾದಿಸಿದ್ದರು.

ಸಮಾನತೆಯ ಪಾಲನೆ: ಸಮಾನತೆಯ ದಿನ ಎಂದು ಕರೆಯುವ ಈ ದಿನದಂದು ತಾರತಮ್ಯ ಮುಕ್ತ ಸಮಾಜಕ್ಕಾಗಿ ಡಾ. ಅಂಬೇಡ್ಕರ್‌ ಅವರ ದೃಷ್ಟಿಕೋನವನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಪ್ರಗತಿಗೆ ಸ್ಫೂರ್ತಿ: ಡಾ. ಅಂಬೇಡ್ಕರ್‌ ಅವರ ಪರಂಪರೆಯು ಸ್ಫೂರ್ತಿಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ಅಂತರ್ಗತ ಮತ್ತು ಸಮಾನ ಸಮಾಜವನ್ನು ರಚಿಸುವ ನಿರಂತರ ಪ್ರಯತ್ನಗಳು ಇದು ಪ್ರೇರೇಪಿಸುತ್ತದೆ.

Source: https://kannada.hindustantimes.com/lifestyle/ambedkar-jayanti-2024-the-significance-history-and-more-of-dr-ambedkars-birth-anniversary-ambedkars-life-history-rst-181712997469029.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *