ಪುತ್ತೂರಿನಲ್ಲಿ ʻಕಾಂತಾರʼ ಸಿನಿಮಾ ಹೊಗಳಿದ ಅಮಿತ್ ಶಾ : ನೆರೆದಿದ್ದವರ ಖುಷಿ ನೋಡಬೇಕಿತ್ತು..!

ಪುತ್ತೂರು: ಗುಜರಾತ್ ಚುನಾವಣೆಯ ಬಳಿಕ ಬಿಜೆಪಿ ನಾಯಕರಿಗೆ ಕರ್ನಾಟಕ ಚುನಾವಣೆ ಬಹಳ ಮುಖ್ಯವಾಗಿದೆ. ಹೇಗಾದರೂ ಮಾಡಿ ಕರ್ನಾಟಕವನ್ನು ಗೆಲ್ಲಲೇಬೇಕೆಂದುಕೊಂಡಿದ್ದಾರೆ. ಅದಕ್ಕಾಗಿ ಹೊಸ ಹೊಸ ಸ್ಟಾಟರ್ಜಿ ಬಳಕೆ ಮಾಡುತ್ತಿದ್ದಾರೆ. ಜೊತೆಗೆ ಗುಜರಾತ್ ಸ್ಟಾಟರ್ಜಿಯನ್ನು ಪ್ರಯೋಗ ಮಾಡುತ್ತಿದ್ದಾರೆ.

ಇದೀಗ ಬ್ಯಾಕ್ ಟು ಬ್ಯಾಕ್ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕೇಂದ್ರ ನಾಯಕರು ಜನರನ್ನು ಇಂಪ್ರೆಸ್ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಇತ್ತಿಚೆಗಷ್ಟೇ ಪ್ರಧಾನಿ ಮೋದಿ ಅವರು ಬಂದು ರಾಜ್ಯದಲ್ಲೆಡೆ ಸಂಚರಿಸಿ ಹೋಗಿದ್ದರು. ಒಂದಷ್ಟು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದರು. ಇದೀಗ ಅಮಿತ್ ಶಾ ಅವರ ಸರದಿ ಬಂದಿದೆ. ರಾಜ್ಯಕ್ಕೆ ಬಂದಿರುವ ಅಮಿತ್ ಶಾ, ಪುತ್ತೂರಿನ ಜನತೆಗೆ ಇಂಪ್ರೆಸ್ ಆಗುವಂತೆ ಮಾತನಾಡಿದ್ದಾರೆ.

ಸದ್ಯ ಚಿತ್ರರಂಗದಲ್ಲಿ ಕಾಂತಾರ ಸಿನಿಮಾದ ಅಬ್ಬರವೇ ಹೆಚ್ಚಾಗಿದೆ. 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಹಲವು ಹೊಸ ದಾಖಲೆಗಳನ್ನು ಮಾಡಿದೆ. ಕೇಂದ್ರ ಗೇಹ ಸಚಿವ ಅಮಿತ್ ಶಾ ಈಗ ಅದೇ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನಾನು ಕಾಂತಾರ ಸಿನಿಮಾ ನೋಡಿದೆ ಎಂದು ಅಮಿತ್ ಶಾ, ಪುತ್ತೂರಿನ ಕ್ಯಾಂಪ್ಕೋ ಸಂಸ್ಥೆಯ 50ನೇ ವಾರ್ಷಿಕೋತ್ಸವದಲ್ಲಿ ಹೇಳಿದ್ದೆ ತಡ ನೆರೆದಿದ್ದ ಜನ ಹುಚ್ಚೆದ್ದವರಂತೆ ಕುಣಿದು ಕುಪ್ಪಳಿಸಿದ್ದಾರೆ.

ಅಮಿತ್ ಶಾ ಅವರು, ನಾನು ಕಾಂತಾರ ಸಿನಿಮಾವನ್ನು ನೋಡಿದ್ದೇನೆ. ಕಾಂತಾರ ನೋಡಿದ ಮೇಲೆ ನನಗೆ ಗೊತ್ತಾಯ್ತು, ಕರಾವಳಿ ಸಂಸ್ಕೃತಿ ಎಂಥದ್ದು ಎಂಬುದು. ಮಂಗಳೂರು ಧಾರ್ಮಿಕ ಸಂಸ್ಕೃತಿಯಿಂದ ಸಮೃದ್ಧವಾಗಿದೆ. ಈ ಪುಣ್ಯ ಭೂಮಿಗೆ ನನ್ನ ನಮನಗಳು ಎಂದಿದ್ದಾರೆ.

The post ಪುತ್ತೂರಿನಲ್ಲಿ ʻಕಾಂತಾರʼ ಸಿನಿಮಾ ಹೊಗಳಿದ ಅಮಿತ್ ಶಾ : ನೆರೆದಿದ್ದವರ ಖುಷಿ ನೋಡಬೇಕಿತ್ತು..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/tpMxN18
via IFTTT

Leave a Reply

Your email address will not be published. Required fields are marked *