Amitabh unfollows Aishwarya Rai on Instagram: ಅಮಿತಾಬ್ ಬಚ್ಚನ್ ಹೆಸರು ನಟನೆಯ ಹೊರತಾಗಿ ಬೇರೆ ಕಾರಣಕ್ಕೆ ಸುದ್ದಿಯಾಗುತ್ತಿದೆ. ಅಮಿತಾಬ್ ಬಚ್ಚನ್ ತಮ್ಮ ಸೊಸೆ ಮತ್ತು ಬಿ-ಟೌನ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನ್ ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ.
- ಹಿಂದಿ ಚಿತ್ರರಂಗದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
- ಅಮಿತಾಬ್ ಹೆಸರು ನಟನೆಯ ಹೊರತಾಗಿ ಬೇರೆ ಕಾರಣಕ್ಕೆ ಸುದ್ದಿಯಾಗುತ್ತಿದೆ
- ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ

Amitabh Bacchan-Aishwarya Rai: ಹಿಂದಿ ಚಿತ್ರರಂಗದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಅದ್ಭುತ ನಟನೆಗೆ ಸರಿಸಾಟಿ ಯಾರೂ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇವರ ನಟನೆಯ ಹೊರತಾಗಿ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದೆ.
ಸದ್ಯ ಅಮಿತಾಬ್ ಬಚ್ಚನ್ ಹೆಸರು ನಟನೆಯ ಹೊರತಾಗಿ ಬೇರೆ ಕಾರಣಕ್ಕೆ ಸುದ್ದಿಯಾಗುತ್ತಿದೆ. ಅಮಿತಾಬ್ ಬಚ್ಚನ್ ತಮ್ಮ ಸೊಸೆ ಮತ್ತು ಬಿ-ಟೌನ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನ್ ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ.
ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಬಿಗ್ ಬಿ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ 36.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇದಲ್ಲದೇ ಅಮಿತಾಬ್ 74 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ 74 ಮಂದಿಯಲ್ಲಿ ಅಭಿಷೇಕ್ ಬಚ್ಚನ್ ಸೇರಿದಂತೆ ಇಂಡಸ್ಟ್ರಿಯ ಕೆಲ ಗಣ್ಯರು ಇದ್ದಾರೆ.
ಆದರೆ ಅವರ ಸೊಸೆ ಹಾಗೂ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಹೆಸರು ಈ ಪಟ್ಟಿಯಲ್ಲಿಲ್ಲ. ಅಮಿತಾಭ್ ಬಚ್ಚನ್ ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ ಅನ್ನು ಅನ್ ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಕೆಲವರು ಊಹಿಸುತ್ತಿದ್ದಾರೆ.
ಆದರೆ, ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇತ್ತೀಚೆಗೆ ಬೇರೆ ಬೇರೆ ವದಂತಿಗಳು ಕೂಡ ಬೆಳಕಿಗೆ ಬಂದಿದ್ದು, ಇದರಲ್ಲಿ ಅಮಿತಾಬ್ ಮತ್ತು ಅಭಿಷೇಕ್ ನಡುವಿನ ಸಂಬಂಧದಲ್ಲಿ ಬಿರುಕುಗಳ ಬಗ್ಗೆ ಊಹಾಪೋಹಗಳು ಇದ್ದವು. ಆದರೆ, ಬಿಗ್ ಬಿ ಐಶ್ವರ್ಯಾ ರೈ ಅವರನ್ನು ಏಕೆ ಅನ್ ಫಾಲೋ ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.
ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಅವರ ಮೊದಲ ಚಿತ್ರ ‘ದಿ ಆರ್ಚೀಸ್’ ಪ್ರಥಮ ಪ್ರದರ್ಶನ ನಡೆಯಿತು. ಈ ಸಮಯದಲ್ಲಿ, ಅಮಿತಾಬ್ ಬಚ್ಚನ್ ಅವರ ಇಡೀ ಕುಟುಂಬವು ಒಟ್ಟಾಗಿ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಜಯಾ ಬಚ್ಚನ್, ಐಶ್ವರ್ಯಾ ರೈ, ಆರಾಧ್ಯ ಬಚ್ಚನ್, ಅಜಿತಾಭ್ ಬಚ್ಚನ್, ನಿಖಿಲ್ ನಂದಾ ಮತ್ತು ಶ್ವೇತಾ ಬಚ್ಚನ್ ಕೂಡ ಆಗಮಿಸಿದ್ದರು.
ಇದಲ್ಲದೆ, ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಐಶ್ವರ್ಯಾ ತಮ್ಮ ವೆಡ್ಡಿಂಗ್ ರಿಂಗ್’ನ್ನು ಧರಿಸಿರಲಿಲ್ಲ. ಇದೇ ಕಾರಣದಿಂದ ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿತ್ತು.
ಇದಕ್ಕೂ ಮುನ್ನ ಅಂದರೆ 2010ರಲ್ಲಿ ನಡೆದ ಸಂದರ್ಶನದಲ್ಲಿ ಐಶ್, “ಅಭಿಷೇಕ್ ಜೊತೆ ನಾನು ದಿನಾ ಜಗಳವಾಡುತ್ತೇನೆ. ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿದೆ. ಆದರೆ ಇವೆಲ್ಲವೂ ಬೇಗ ಇತ್ಯರ್ಥವಾಗುತ್ತದೆ. ನಮ್ಮ ಸಂಬಂಧದಲ್ಲಿ ಏರಿಳಿತಗಳಿವೆ” ಎಂದು ಹೇಳಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1