ವೈದ್ಯಕೀಯ ಲೋಕದ ಅಚ್ಚರಿ, ವ್ಯಕ್ತಿಯೊಬ್ಬರಿಗೆ ಕೃತಕ ಹೃದಯ ಅಳವಡಿಕೆ!

ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ಗುರುಣ್ಣಾ ಎಂಬುವರಿಗೆ ಕೃತಕ ಹೃದಯ ಅಳವಡಿಸಲಾಗಿದೆ. ಖ್ಯಾತ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಅಶ್ವಿನಿ ಪಸರದ್ ಮತ್ತು ಅವರ ತಂಡ ಕೃತಕ ಹೃದಯ ಅಳವಡಿಸಿ ನಡೆಸಿ ಸಾಧನೆ ಮಾಡಿದ್ದಾರೆ.

ಬೆಂಗಳೂರು, ಮಾರ್ಚ್​​ 31: ಕಳೆದ 10 ವರ್ಷಗಳಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ಶೇ23 ರಷ್ಟು ಹೆಚ್ಚಳವಾಗಿವೆ. ಅದರಲ್ಲಂತು ಕೊರೊನಾ ನಂತರ ಹೃದಯಾಘಾತ ಪ್ರಕರಣಗಳು ಇನ್ನಷ್ಟು ಹೆಚ್ಚಾಗಿವೆ. ಒತ್ತಡ, ಜೀವನಶೈಲಿ ಬದಲಾವಣೆ, ವಾಯುಮಾಲಿನ್ಯದಿಂದ 22 ಲಕ್ಷಕ್ಕೂ ಅಧಿಕ ಜನರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂತಹ ಆಘಾತಕಾರಿ ವಿಚಾರದ ಮಧ್ಯೆ ವೈದ್ಯಕೀಯ ಲೋಕದಲ್ಲಿ ಅಚ್ಚರಿಯ ಬೆಳವಣಿಗೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ವ್ಯಕ್ತಿಯೊಬ್ಬರಿಗೆ ಕೃತಕ ಅಳವಡಿಸಲಾಗಿದೆ. ಕೃತಕ ಹೃದಯ (‌ಥರ್ಡ್ ಜನರೇಶನ್​​ ಎಲ್​ಬಿ) (Artificial Heart Third Generation LB) ಯನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

ಅಂಗಾಂಗ ದಾನಕ್ಕೆ ಮಾತ್ರ ಜನ ಮುಂದಾಗುತ್ತಿಲ್ಲ. ಹೃದಯ ಕಸಿಗೆ ಎರಡು ವರ್ಷಗಳ ವೈಟಿಂಗ್ ಪಿರಿಯಡ್ ಇದ್ದು, ಇದಕ್ಕಾಗಿ 3rd ಜನರೇಶನ್ ಹೃದಯ ಪರಿಚಯಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ಗುರುಣ್ಣಾ ಎಂಬುವರ ಹೃದಯ ದುರ್ಬಲವಾಗಿರುವ ಕಾರಣ ಇವರಿಗೆ 3rd ಜನರೇಶನ್ ಎಲ್​ಬಿ ಕೃತಕ ಹೃದಯವನ್ನು ಅಳವಡಿಸಲಾಗಿದೆ.

ಏನಿದು ಥರ್ಡ್ ಜನರೇಶನ್​​ ಎಲ್​ಬಿ

ಈ ಥರ್ಢ್​ ಎಲ್​ಬಿ ಕೃತಕ ಮೆಷಿನ್ ಮೂಲಕ ಹೃದಯಕ್ಕೆ ಬ್ಲೆಡ್ ಪಂಪ್ ಮಾಡುತ್ತದೆ. ಬ್ಯಾಗ್​ನಲ್ಲಿರುವ ಬ್ಯಾಟರಿಗಳು, ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್​ಗಳು ಗಾಳಿಯನ್ನು ಪಂಪ್ ಮಾಡುತ್ತದೆ. ಇದು ಕೃತಕ ಹೃದಯ ಕೋಣೆಗಳಿಗೆ ಶಕ್ತಿ ನೀಡುತ್ತದೆ.‌ ಇದರಿಂದ ರೋಗಿ ಜೀವನ ಪೂರ್ತಿ ಬದುಕು ಸಾಗಿಸಲು ಸಾಧ್ಯವಾಗುತ್ತದೆ.

ಖ್ಯಾತ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಅಶ್ವಿನಿ ಪಸರದ್ ಮತ್ತು ಅವರ ತಂಡ ಕೃತಕ ಹೃದಯ ಅಳವಡಿಸಿ ನಡೆಸಿ ಸಾಧನೆ ಮಾಡಿದ್ದಾರೆ. ಈ ಹಿಂದೆ ದೇಶದಲ್ಲಿ ಹಾಗೂ ರಾಜ್ಯದಲ್ಲಿಯೂ ಈ ರೀತಿ ಕೆಲವರಿಗೆ ಕೃತಕ ಹೃದಯ ಅಳವಡಿಕೆ ಮಾಡಲಾಗಿದೆ ಆದರೆ ಯಶಸ್ವಿಯಾಗಿರಲಿಲ್ಲ. ಹಾಗೂ ಅದೆಲ್ಲ ಸೆಕೆಂಡ್ ಜನರೇಶನ್ ಕೃತಕ ಹೃದಯ ಆಗಿರುವುದರಿಂದ ಹೆಚ್ಚು ದಿನ ಬಾಳಿಕೆ ಬರುತ್ತಿರಲಿಲ್ಲ. ಆದರೆ ಈಗ ಅಳವಡಿಕೆ ಮಾಡಿರುವ 3rd ಜನರೇಶನ್ ಹೃದಯ ಮಾತ್ರ ಲೈಫ್ ಟೈಮ್​ ಇದೆ. ಈ ಕೃತಕ ಹೃದಯದ ಜೀವಿತಾ ಅವಧಿ ಹೆಚ್ಚಾಗಿದೆ.

ಇನ್ನು ವಿಶೇಷ ಅಂದರೆ ಎಲ್ಲರ ಹೃದಯ ಲಬ್ ಡಬ್ ಅನ್ನುತ್ತದೆ. ಆದರೆ ಈ ಕೃತಕ ಹೃದಯ ಮೆಶಿನ್ ಸೌಂಡ್ ಮಾಡುತ್ತದೆ. ಕೃತಕ ಹೃದಯಕ್ಕೆ ಪ್ರತಿ ದಿನ ಚಾರ್ಜಿಂಗ್ ಮಾಡಬೇಕು. ತುಂಬಾ ರೇರ್ ಸರ್ಜರಿ ಆಗಿರುವ ಕಾರಣ ಕೃತಕ ಹೃದಯ ಅಳವಡಿಸಲು 1 ಕೋಟಿ 10 ಲಕ್ಷ ಖರ್ಚಾಗಿದೆ. ಸದ್ಯ 3rd ಜನರೇಶನ್ ಹಾರ್ಟ್ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ವೈದ್ಯಕೀಯ ಲೋಕದ ಚಮತ್ಕಾರವಾಗಿದೆ.

Source : https://tv9kannada.com/karnataka/bengaluru/bengaluru-news-artificial-heart-implantation-to-a-bagalkot-person-vkb-809055.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *