ಭಾರತ ಧ್ವಜ ಇಳಿಸಿ ಖಲಿಸ್ತಾನಿ ಬಾವುಟ ಹಾರಿಸಲು ಯತ್ನ : ಲಂಡನ್ ನಲ್ಲಿ ನಡೆದ ಘಟನೆಗೆ ತೀವ್ರ ಖಂಡನೆ..!

ಭಾರತ ಧ್ವಜ ಇಳಿಸಿ ಖಲಿಸ್ತಾನಿ ಬಾವುಟ ಹಾರಿಸಲು ಯತ್ನ : ಲಂಡನ್ ನಲ್ಲಿ ನಡೆದ ಘಟನೆಗೆ ತೀವ್ರ ಖಂಡನೆ..!

ಲಂಡನ್: ಖಲಿಸ್ತಾನಿಗಳು ತೀವ್ರ ಉದ್ಧಟತನ ತೋರಿದ್ದಾರೆ. ಲಂಡನ್ ನಲ್ಲಿ ಭಾರತದ ರಾಯಬಾರಿ ಕಚೇರಿ ಮೇಲಿದ್ದ ನಮ್ಮ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ, ತಮ್ಮ ಖಲಿಸ್ತಾನಿ ಧ್ವಜವನ್ನು ಹಾರಿಸಲು ಯತ್ನಿಸಿದ್ದಾರೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಖಲಿಸ್ತಾನಿ ನಾಯಕ ಅಮೃತ್ ಪಾಲ್ ಸಿಂಗ್ ನನ್ನು ಬಂಧಿಸುವುದಕ್ಕೆ ಪಂಜಾಬ್ ನಲ್ಲಿ ನಡೆದ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಯಬಾರಿ ಕಚೇರಿ ಮುಂದೆ ಬಂದು ಖಲಿಸ್ತಾನಿಗಳು ಘೋಷಣೆ ಕೂಗಿದ್ದಾರೆ. ಬಳಿಕ ಭಾರತದ ಧ್ವಜವನ್ನು ಇಳಿಸಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ರೋಶಕ್ಕೆ ಗುರಿಯಾಗಿದೆ. ಖಲಿಸ್ತಾನಿ ಧ್ವಜ ಹಾರಿಸುವುದಕ್ಕೆ ಹೊರಟಾಗ ಸಿಬ್ಬಂದಿಗಳು ತಡೆದಿದ್ದಾರೆ. ಇನ್ನು ಇಂಗ್ಲೆಂಡ್ ರಾಯಬಾರಿಗೆ ಕೇಂದ್ರ ವಿದೇಶಾಂಗ ಇಲಾಖೆ ಸಮನ್ಸ್ ನೀಡಿದೆ. ಭಾರತದ ಕಚೇರಿಗೆ ಭದ್ರತೆ ನೀಡದ ಬಗ್ಗೆ ಪ್ರಶ್ನೆ ಕೇಳಿದೆ. ಇಂಗ್ಲೆಂಡ್ ಸರ್ಕಾರ ಘಟನೆಯಲ್ಲಿ ಭಾಗಿಯಾದವರನ್ನು ಗುರುತಿಸಿ, ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದೆ. ಜೊತೆಗೆ ಮತ್ಯಾವತ್ತು ಇಂಥಹ ಘಟನೆಗಳು ಮರುಕಳುಹಿಸದಂತೆ ಎಚ್ಚರವಹಿಸಲು ಸೂಚಿಸಿದೆ.

The post ಭಾರತ ಧ್ವಜ ಇಳಿಸಿ ಖಲಿಸ್ತಾನಿ ಬಾವುಟ ಹಾರಿಸಲು ಯತ್ನ : ಲಂಡನ್ ನಲ್ಲಿ ನಡೆದ ಘಟನೆಗೆ ತೀವ್ರ ಖಂಡನೆ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/Rq9KT87
via IFTTT

Leave a Reply

Your email address will not be published. Required fields are marked *