ಭಾರತದ ಎದುರು ಮತ್ತೊಮ್ಮೆ ಮಂಡಿಯೂರಿದ ಪಾಕ್! ಟೀಂ ಇಂಡಿಯಾಗೆ ರೋಚಕ ಗೆಲುವು!

ಅಮೆರಿಕಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ 19ನೇ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭಾರತ ಸಾಧರಣ ಮೊತ್ತ ಕಲೆ ಹಾಕಿತ್ತು. ಕೇವಲ 119ರನ್‌‌ಗೆ ಟೀಂ ಇಂಡಿಯಾ ಆಲೌಟ್ ಆಯ್ತು. ಈ ಗುರಿಯನ್ನು ಬೆನ್ನತ್ತಿದ್ದ ಪಾಕಿಸ್ತಾನ ಮತ್ತೊಮ್ಮೆ ಸೋಲು ಕಂಡಿದೆ. ಟೀಂ ಇಂಡಿಯಾ ಬೌಲರ್ಸ್‌ಗಳ ಅಬ್ಬರಕ್ಕೆ ಪಾಕ್‌ ಪತರುಗುಟ್ಟಿದೆ. ಕಡಿಮೆ ಟಾರ್ಗೆಟ್‌ ಇದ್ದರೂ ಗುರಿ ಮುಟ್ಟಲಾಗದೇ ಮತ್ತೊಮ್ಮೆ ಟೀಂ ಇಂಡಿಯಾ ಎದುರು ಮಂಡಿಯೂರಿದೆ. ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 113 ರನ್‌ಗಳಿಸಲಷ್ಟೇ ಸಾಧ್ಯವಾಯ್ತು.

ಭಾರತದ ಎದುರು ಮಂಡಿಯೂರಿದ ಪಾಕ್!

ಟೀಂ ಇಂಡಿಯಾ ಬೌಲರ್ಸ್‌ಗಳ ಅಬ್ಬರಕ್ಕೆ ಪಾಕ್‌ ಪುಡಿ ಪುಡಿಯಾಗಿದೆ. 120 ರನ್‌ಗಳನ್ನು ಯಾರು ಬೇಕಾದ್ರೂ ಚೇಸ್‌ ಮಾಡ್ತಾರೆ. ಅಂಥದ್ರಲ್ಲಿ ಪಾಕಿಸ್ತಾನ ಸುಲಭವಾಗಿ ಪಾಕ್‌ ಗೆಲ್ಲುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಪಾಕ್‌ ಹೀನಾಯವಾಗಿ ಸೋಲುಂಡಿದೆ. ಬುಮ್ರಾ, ಸಿರಾಜ್‌, ಪಾಂಡ್ಯ, ಅಕ್ಷರ್‌ ಪಟೇಲ್‌ ಬೌಲಿಂಗ್‌ಗೆ ಪಾಕ್‌ ಬ್ಯಾಟರ್ಸ್‌ ಪೆವಿಲಿಯನ್ ಪರೇಡ್‌ ನಡೆಸಿದ್ರು.

ಬುಮ್ರಾ ಮ್ಯಾಜಿಕ್‌ಗೆ ಪತರುಗುಟ್ಟಿದ ಪಾಕ್‌!

ಐದನೇ ಓವರ್‌ನಲ್ಲಿ ಬುಮ್ರಾ , ಬಾಬರ್ ಅಜಮ್ ವಿಕೆಟ್ ಪಡೆದರು. ಆರು ಓವರ್‌ಗಳಲ್ಲಿ ಪಾಕಿಸ್ತಾನ ಒಂದು ವಿಕೆಟ್ ಕಳೆದುಕೊಂಡು 35 ರನ್ ಗಳಿಸಿತ್ತು. 11ನೇ ಓವರ್‌ನಲ್ಲಿ ಪಾಕಿಸ್ತಾನ ಎರಡನೇ ವಿಕೆಟ್ ಕಳೆದುಕೊಂಡಿತು. ಅಕ್ಷರ್ ಪಟೇಲ್, ಉಸ್ಮಾನ್ ಖಾನ್ ಅವರನ್ನು ಎಲ್​ಬಿಡಬ್ಲ್ಯೂ ಮಾಡಿದರು. ಇನ್ನೂ ಫಖರ್ ಜಮಾನ್ ಕ್ಯಾಚ್ ನೀಡಿ ಔಟಾದರು. 15ನೇ ಓವರ್‌ನ ಮೊದಲ ಎಸೆತದಲ್ಲಿ ರಿಜ್ವಾನ್ ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. 44 ಎಸೆತಗಳಲ್ಲಿ 31 ರನ್ ಗಳಿಸಿ ರಿಜ್ವಾನ್ ಔಟಾದರು.

ಕಡಿಮೆ ರನ್‌‌ಗೆ ಆಲೌಟ್‌ ಆದ ಟೀಂ ಇಂಡಿಯಾ!

ಪಾಕಿಸ್ತಾನ ಪರ ಮ್ಯಾಜಿಕ್‌ ಬೌಲಿಂಗ್‌ ಪ್ರದರ್ಶನ ಮಾಡಿದ ನಸೀಮ್ ಶಾ ಟೀಮ್‌ ಇಂಡಿಯಾ ಬ್ಯಾಟರ್‌ಗಳನ್ನು ರನ್‌ ಹೊಡೆಯದಂತೆ ಕಟ್ಟಿ ಹಾಕಿದರು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ರಿಷಬ್‌ ಪಂತ್ ಕುಸಿದ ಭಾರತಕ್ಕೆ ನೆರವಾದರು. ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಟೀಮ್‌ ಇಂಡಿಯಾ ಪರ ನಾಯಕ ರೋಹತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಿದರು. ಆದರೆ ಈ ಜೋಡಿ ಉತ್ತಮ ಅಡಿಪಾಯ ಹಾಕುವಲ್ಲಿ ಎಡುವಿತು.

ಮತ್ತೆ ಕೈ ಕೊಟ್ಟ ಕೊಹ್ಲಿ-ರೋಹಿತ್‌!

ವಿರಾಟ್‌ ಕೊಹ್ಲಿ ಕೇವಲ 4 ರನ್ ಗಳಿಸಿ ಔಟ್‌ ಆದರೆ, ರೋಹಿತ್‌ ಶರ್ಮಾ ‌13 ರನ್‌ಗಳಿಸಿ ವಿಕೆಟ್‌ ಕಳೆದುಕೊಂಡರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಷಬ್‌ ಪಂತ್‌ ಮತ್ತು ಅಕ್ಸರ್‌ ಪಟೇಲ್‌ ನಿಧಾನವಾಗಿ ರನ್‌ ಕಲೆ ಹಾಕಿದರು. ಅಕ್ಸರ್‌ ಪಟೇಲ್‌ 20 ರನ್‌ಗಳಿಗೆ ವಿಕೆಟ್‌ ಕಳೆದುಕೊಂಡರು. ಬಳಿಕ ಬಂದ ಯಾವುದೇ ಟೀಮ್‌ ಇಂಡಿಯಾ ಬ್ಯಾಟರ್‌ಗಳು ಪಾಕಿಸ್ತಾನ ಬೌಲಿಂಗ್‌ ದಾಳಿಯನ್ನು ಸಮರ್ಥ‌ ಎದುರಿಸುವಲ್ಲಿ ವಿಫಲವಾದರು.

ಸೂರ್ಯಕುಮಾರ್ ಯಾದವ್ (7), ಶಿವಂ ದುಬೆ(3) ಹಾರ್ದಿಕ್ ಪಾಂಡ್ಯ (7) ರವೀಂದ್ರ ಜಡೇಜಾ (0) ಮತ್ತು ಜಸ್ಪ್ರೀತ್ ಬುಮ್ರಾ ಶೂನ್ಯಕ್ಕೆ ಔಟ್‌ ಆದರು.

Source : https://kannada.news18.com/news/sports/t20-world-cup-2024-ind-vs-pak-live-updates-team-india-beats-pakistan-by-6-runs-vdd-1734428.html

Leave a Reply

Your email address will not be published. Required fields are marked *