ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 30 ಕಳೆದ ಕೆಲವು ದಿನಗಳಿಂದ ದಾವಣಗೆರೆಯಲ್ಲಿ ಕೆಲವು ಮುಖಂಡರು ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರನ್ನು ಕೊಡಬಾರದೆಂದು ಹೋರಾಟ ಮಾಡುತ್ತಿದ್ದಾರೆ.ಯಾರು ಸಹ ತಿನ್ನುವ ಅನ್ನಕ್ಕೆ, ಕುಡಿಯುವ ನೀರಿಗೆ ಅಡ್ಡಿಪಡಿಸುವುದು ಅಕ್ಷಮ್ಯ ಅಪರಾಧ ಅದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನವು ಅನ್ನಕ್ಕೆ, ನೀರಿಗೆ ಬೇಲಿ ಹಾಕಿಲ್ಲ.. ನಾನು ವಿನಂತಿ ಮಾಡುತ್ತೇನೆ ಯಾವುದೇ ಕಾರಣಕ್ಕೂ ಈಗಾಗಲೇ ಪೂರ್ಣಗೊಂಡಿರುವ ಯೋಜನೆಯನ್ನು ನಿಲ್ಲಿಸಬಾರದು.ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ 800 ಕೋಟಿ ರೂ ವೆಚ್ಚದಲ್ಲಿ ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದ ಯೋಜನೆ.ಈ ಯೋಜನೆಯನ್ನು ಉದ್ಘಾಟನೆ ಮಾಡಿ ನೀರು ಒದಗಿಸಬೇಕು ಆದರೆ ಇದಕ್ಕೆ ಅಡ್ಡಿಪಡಿಸುವುದು ಎಷ್ಟು ಸೂಕ್ತ.ಸುಪ್ರೀಂ ಕೋರ್ಟ್ ಕುಡಿಯುವ ನೀರು ಒದಗಿಸುವ ಬಗ್ಗೆ ಹಲವು ಆದೇಶವನ್ನು ಮಾಡಿದೆ.. ಇದಕ್ಕೆ ಏರಿಯಾ ಮಿತಿಯಿಲ್ಲ ಎಂದರು.
ಕೃಷ್ಣಾ ನದಿಯಿಂದ ಮಹಾರಾಷ್ಟ್ರಕ್ಕೆ ಕುಡಿಯುವ ನೀರನ್ನು ಕೊಟ್ಟಿದ್ದೇವೆ.. ಹಾಗೆಯೇ ನಮ್ಮಲ್ಲಿ ಕೃಷ್ಣಾ ಭೀಮ ನದಿ ಒಣಗಿದಾಗ ಮಹಾರಾಷ್ಟ್ರದಿಂದ ಕುಡಿಯುವ ನೀರು ಕೊಡುತ್ತಾರೆ.ಚಿತ್ರದುರ್ಗ – ದಾವಣಗೆರೆ ಜಗಳ ಪಾಕಿಸ್ತಾನ ಹಿಂದುಸ್ತಾನ ಜಗಳವಲ್ಲಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು ಟ್ರಯಲ್ ರನ್ ಮಾಡುತ್ತಿದ್ದಾರೆ.. ಟ್ರಯಲ್ ರಂದು ಮಾಡಿ ನೀರು ಹರಿಸಬೇಕು.. ಮಾನ್ಯ ಮುಖ್ಯಮಂತ್ರಿ ಸ್ವತಃ ಯೋಜನೆಯನ್ನು ಲೋಕಾರ್ಪಣೆ ಮಾಡಬೇಕೆಂದು ಆಗ್ರಹಿಸುತ್ತೇನೆ
ಆರ್ ಎಸ್ ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಂವಿಧಾನ ಪೀಠಿಕೆಯಲ್ಲಿ ಸಮಾಜವಾದ, ಜಾತ್ಯಾತೀತ ಪದ ವಿಚಾರ..1975ರಲ್ಲಿ ಪ್ರಧಾನಿ ಇಂದಿರಾ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು.. ಸಂವಿಧಾನ ಅಮಾನತ್ತಿನಲ್ಲಿಟ್ಟು ಅನೇಕರನ್ನು ಜೈಲಲ್ಲಿಟ್ಟಿz.ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ಧರಾಮಯ್ಯ ಕ್ಷಮೆ ಕೇಳಬೇಕು.ಅಂಬೇಡ್ಕರ್ ಅವರೇ ತಿರಸ್ಕರಿಸಿದ್ದನ್ನು ತುರ್ತು ಪರಿಸ್ಥಿತಿ ಕಾಲದಲ್ಲಿ ಸೇರಿಸಿದ್ದಾರೆ..ಹೊಸಬಾಳೆ ಅವರು ದೇಶದ ಜನತೆಗೆ ಚರ್ಚೆಗೆ ಬಿಟ್ಟಿದ್ದಾರೆ.. ಕಾಂಗ್ರೆಸ್ ಅಂಬೇಡ್ಕರ್, ಸಂವಿಧಾನಕ್ಕೆ ಗೌರವ ನೀಡಿಲ್ಲ..ಸಂವಿಧಾನ ಅಮಾನತ್ತಿನಲ್ಲಿಟ್ಟು ವಿಕಾರಗೊಳಿಸಿದ ಕಾಂಗ್ರೆಸ್ ಪಕ್ಷ.. ಕ್ಷಮೆ ಕೇಳಬೇಕು ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಖಂಜಾಚಿ ಮಾಧುರಿ ಗೀರೀಶ್, ವಕ್ತಾರ ನಾಗರಾಜ್ ಬೇದ್ರೇ, ಹೊಸದುರ್ಗ ಪುರಸಭೆಯ ಉಪಾಧ್ಯಕ್ಷರಾಧ ಗೀರಿಜ, ರಾಜೇಶ್ವರಿ ಆನಂದ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿ.ಪಂ.ಮಾಜಿ ಸದಸ್ಯ ಗುರುಸ್ವಾಮಿ ಭಾಗವಹಿಸಿದ್ದರು.
ಪತ್ರಿಕಾಗೋಷ್ಟಿಯ ನಂತರ ಸಂಸದ ಗೋವಿಂದ ಕಾರಜೋಳರವರು ಮಾಧ್ಯಮ ದವರೊಂದಿಗೆ ಮಾತನಾಡಿ
ಡಿಸೆಂಬರ್ ವೇಳೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳಾಗಿ ಸಿಎಂ ಸ್ಥಾನಕ್ಕಾಗಿ ರಣಹದ್ದಿನಂತೆ ಕಚ್ಚಾಡುತ್ತಿದ್ದಾರೆ. ದಲಿತ ಸಿಎಂಗಾಗಿ ಪರಮೇಶ್ವರ್, ಖರ್ಗೆ, ಮಹಾದೇವಪ್ಪ, ಮುನಿಯಪ್ಪ ಗುಂಪಿನ ಪೈಪೋಟಿವೀರಶೈವ ಲಿಂಗಾಯತ ಸಿಎಂಗಾಗಿ ಶಾಮನೂರು, ಬಿ ಆರ್ ಪಾಟೀಲ್, ಶಿವಗಂಗಾ ಬಸವರಾಜ್ ಹೋರಾಟ.ಸಿದ್ಧರಾಮಯ್ಯ ಮುಂದುವರಿಕೆ ಬಗ್ಗೆ ಅನೇಕ ಹಿಂದುಳಿದ ಗುಂಪಿನವರು ( ಕೆ ಎನ್ ರಾಜಣ್ಣ, ಯತೀಂದ್ರ) ಹೇಳಿದ್ದಾರೆ ಮೂರು ಗುಂಪಿನ ಬಡಿದಾಟದಲ್ಲಿ ಡಿಕೆಶಿ ಕಳೆದು ಹೋಗಿದ್ದಾರೆ.
ಅನುದಾನ ಸಿಕ್ಕಿಲ್ಲವೆಂದು 42ಶಾಸಕರಿಂದ ಹೈಕಮಾಂಡ್‍ಗೆ ದೂರು ನೀಡಿದ್ದಾರೆ.ಸುರ್ಜೆವಾಲಾ ಅಹವಾಲು ಕೇಳಿ ಕೇಂದ್ರಕ್ಕೆ ವರದಿ ನೀಡಲಿದ್ದಾರೆಸಿದ್ಧರಾಮಯ್ಯಗೆ ಆಡಳಿತದಲ್ಲಿ ಮೊದಲಿದ್ದ ಹಿಡಿತ ಈಗಿಲ್ಲ ಕಾಂಗ್ರೆಸ್ ಹೈಕಮಾಂಡ್ ನಿತ್ಯ ಕಪ್ಪು ಕಾಣಿಕೆಗೆ ಕಿರುಕುಳ ನೀಡುತ್ತಿದೆ.ಸೋನಿಯಾ, ರಾಹುಲ್, ಪ್ರಿಯಾಂಕಾರಿಂದ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಕಿರುಕುಳ ನಿಯಂತ್ರಿಸುವ ಶಕ್ತಿ ಮಲ್ಲಿಕಾರ್ಜುನ ಖರ್ಗೆ ಅವರಿಗಿಲ್ಲಕಾಂಗ್ರೆಸ್ ಪಕ್ಷ ಈಗ ದಾರಿ ತಪ್ಪಿದ ಮಗನಂತೆ ಆಗಿದೆ ಹಾಲು ಕುಡಿದು ಸಾಯುವವರಿಗೆ ವಿಷ ಹಾಕಿ ಕೆಟ್ಟ ಹೆಸರು ಪಡೆಯಲ್ಲ ನಾವು ಎಂದರು
Views: 4