ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಿತ್ತೂರು ರಾಣಿ ಚನ್ನಮ್ಮ ಜಿಲ್ಲಾ ಮಹಿಳಾ ಘಟಕದಿಂದ ಗೌರಿ ಹಬ್ಬದ ಅಂಗವಾಗಿ ಬಾಗಿನ ಅರ್ಪಣೆ.

ಚಿತ್ರದುರ್ಗ ಆ. 26

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ನಗರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಿತ್ತೂರು ರಾಣಿ ಚನ್ನಮ್ಮ ಜಿಲ್ಲಾ ಮಹಿಳಾ ಘಟಕದವತಿಯಿಂದ ಗೌರಿ ಹಬ್ಬದ ಅಂಗವಾಗಿ ಇಂದು ನಗರದ ಜೆಸಿಆರ್ ಗಣಪತಿ ದೇವಾಲಯದಲ್ಲಿ ಮಹಿಳೆಯರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.


ಗೌರಿ ಹಬ್ಬದಲ್ಲಿ ಮಹಿಳೆಯರಿಗೆ ಬಾಗಿನ ನೀಡುವುದು ನಮ್ಮ ಸಂಪ್ರಾದಾಯವಾಗಿದೆ ಇದನ್ನು ಪಂಚಮಸಾಲಿ ಮಹಿಳಾ ಘಟಕ ಇದನ್ನು ಕಳೆದ ಹಲವಾರು ವರ್ಷದಿಂದ ನಡೆಸಿಕೊಂಡು ಬಂದಿದೆ, ಈ ಬಾರಿ ಜೆಸಿಆರ್ ಗಣಪತಿ ದೇವಾಲಯದಲ್ಲಿ ಮಹಿಳೆಯರಿಗೆ ಅಕ್ಕಿ,ಬೆಲ್ಲ,ಬೇಳೆ, ಹರಿಷಿಣ, ಕುಂಕುಮ, ಬಾಗಿನ ಸಾಮಾನುಗಳನ್ನು ಇಟ್ಟು ಅದನ್ನು ಮುತ್ತೈದೆ ಮಹಿಳೆಯರಿಗೆ ನೀಡುವುದರ ಮೂಲಕ ಗೌರಿ ಹಬ್ಬವನ್ನು ಆಚರಣೆ ಮಾಡಲಾಯಿತು.

ಈ ಸಮಯದಲ್ಲಿ ಪಕ್ಕದಲ್ಲಿ ಗೌರಿಯನ್ನು ಪ್ರತಿಷ್ಠಾಪನೆ ಮಾಡುವುದರ ಮೂಲಕ ಆಗಮಿಸಿದ ಎಲ್ಲರಿಗೂ ಸಹಾ ಮಂಗಳರಾತಿಯನ್ನು ಮಾಡಿ ಪ್ರಸಾದವನ್ನು ನೀಡಲಾಯಿತು. 


ಈ ಸಂದರ್ಭದಲ್ಲಿ ಪಂಚಮಸಾಲಿ ಮಹಿಳಾಮ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಆಶಾ ಕಲ್ಲಪ್ಪ, ಶ್ರೀಮತಿ ಉಷಾ ಮಂಜುನಾಥ್, ಶ್ರೀಮತಿ ಶೈಲ ಕಲ್ಲೇಶ್, ಶ್ರೀಮತಿ ಶಶಿಕಲಾ ಶರಣಯ್ಯ, ಕುಮಾರಿ ಕಲಾವತಿ, ನೀಲಮ್ಮ, ತೇಜಸ್ವಿನಿ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಸಮಯದಲ್ಲಿ ಸುಮಾರು 50ಕ್ಕೂ ಹೆಚ್ಚು ಮುತ್ತೈದೆ ಮಹಿಳೆಯರಿಗೆ ಬಾಗಿನವನ್ನು ನೀಡಲಾಯಿತು. 

Views: 27

Leave a Reply

Your email address will not be published. Required fields are marked *