Haveri News: ಈ ಬಾಲಕಿ ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ಜಾಣ ವಿದ್ಯಾರ್ಥಿನಿ ವರ್ಷಾ. ಹಿರೇಕೆರೂರ ಪಟ್ಟಣದ ಸರ್ಕಾರಿ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ ಬಾಲ ಪ್ರತಿಭೆ. ಈ ಪುಟಾಣಿಯ ತಂದೆ ಈರಣ್ಣ, ತಾಯಿ ಅಕ್ಷತಾ.
![](https://samagrasuddi.co.in/wp-content/uploads/2023/06/image-14.png)
Haveri Latest News: ನಿನ್ನೆ ನಡೆದಿದ್ದ ಘಟನೆಯನ್ನ ಬೆಳಗಾಗುವಷ್ಟರಲ್ಲಿ ಮರೆಯುವ ಕಾಲದಲ್ಲಿ ಇಲ್ಲೊಂದು ಪುಟ್ಟ ಪುಟಾಣಿ ಪ್ರತಿಭೆ ಎಲ್ಲರ ಉಬ್ಬೆರುವಂತೆ ಮಾಡುತ್ತದೆ. ದೇಶದ ಪ್ರಧಾನಿಗಳು, ರಾಜ್ಯಗಳ ಸಿಎಂಗಳು, ರಾಜ್ಯಗಳ ರಾಜಧಾನಿ, ನದಿಗಳ ಹೆಸರು ಸೇರಿದಂತೆ ಯಾವುದೇ ಪ್ರಶ್ನೆ ಕೇಳಿದರೂ ಥಟ್ಟನೆ ಉತ್ತರಿಸುವ ಮೂಲಕ ಎಂತಹವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತಿದ್ದಾಳೆ ಈ ಪುಟ್ಟ ಚೋರಿ.
ಹೌದು, ಈ ಬಾಲಕಿ ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ಜಾಣ ವಿದ್ಯಾರ್ಥಿನಿ ವರ್ಷಾ. ಹಿರೇಕೆರೂರ ಪಟ್ಟಣದ ಸರ್ಕಾರಿ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ ಬಾಲ ಪ್ರತಿಭೆ. ಈ ಪುಟಾಣಿಯ ತಂದೆ ಈರಣ್ಣ, ತಾಯಿ ಅಕ್ಷತಾ. ಇನ್ನು ಈ ದಂಪತಿಗಳು ಕಡುಬಡವರಾಗಿದ್ದು, ಪಟ್ಟಣದ ದುರ್ಗಾದೇವಿ ದೇವಸ್ಥಾನದ ಬಳಿ ಹೂವು, ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಷ್ಟು ಬಡತನವಿದ್ದರು ಈ ಪೋಷಕರು, ಬಾಲಕಿಯ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತ ಸಾಥ್ ನೀಡುತ್ತಿದ್ದಾರೆ.
ಪೋಷಕರು ತಮ್ಮ ಮಗುವಿಗೆ ಚಿಕ್ಕ ವಯಸ್ಸಿನಿಂದಲೂ ಹಾಕಿರುವ ಭದ್ರ ಬುನಾದಿಯಿಂದಾಗಿ ಶಾಲೆಯಲ್ಲಿ ಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ಮುಂದಿರುವ ಬಾಲಕಿ ವರ್ಷಾ, ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ರತ್ನ, ಭಾತರ ರಕ್ಷ ಪ್ರಶಸ್ತಿ ಪುರಸ್ಕೃತರು, ದೇಶದಲ್ಲಿರುವ ರಾಜ್ಯಗಳು, ಜಿಲ್ಲೆಗಳು, ತಾಲೂಕುಗಳು, ರಾಜಧಾನಿಗಳು, ನದಿಗಳು, ಈವರೆಗಿನ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳ ಬಗ್ಗೆ ಕೇಳಿದರೆ ಫಟಾ ಫಟ್ ಅಂತ ಉತ್ತರಿಸುತ್ತಾಳೆ.
ಪಠ್ಯ & ಪತ್ಯೇತರ ಯಾವ ಚಟುವಟಿಕೆ, ಸ್ಪರ್ಧೆ, ಪರೀಕ್ಷೆ ನೀಡಿದರೂ ತಕ್ಷಣ ಉತ್ತರಿಸುತ್ತಾಳೆ. ಇನ್ನು 1 ರಿಂದ 30 ರ ವರೆಗೆ ಮಗ್ಗಿ ಕಲಿತಿದ್ದು, ಗಣಿತದಲ್ಲೂ ಈ ಪುಟ್ಟ ಬಾಲಕಿ ಸೈ ಎನಿಸಿಕೊಳ್ಳುವ ಮೂಲಕ ಈಗ ಎಲ್ಲ ಗಮನ ಸೆಳೆಯುತ್ತಿದ್ದಾಳೆ.