ನಿಮ್ಮ ನೆತ್ತಿಯ ಆರೋಗ್ಯದ ಜೊತೆಗೆ ತಲೆ ಕೂದಲಿನ ಸೊಂಪಾದ ಬೆಳವಣಿಗೆಯನ್ನು ಅಭಿವೃದ್ಧಿ ಪಡಿಸುವ ಗುಣ ಸೋಂಪು ಕಾಳುಗಳಲ್ಲಿ ಕಾಣಿಸುತ್ತದೆ. ಇದನ್ನು ಉಪಯೋಗಿಸುವುದು ಹೇಗೆ ಎಂದು ಗೊತ್ತಿರಬೇಕು ಅಷ್ಟೇ!

ಊಟ ಆದ ಮೇಲೆ ಜೀರ್ಣ ಶಕ್ತಿ ಹೆಚ್ಚಿಸಿಕೊಳ್ಳಲು ಸೇವಿಸುವ ಒಂದು ಟೇಬಲ್ ಚಮಚ ಸೋಂಪು ಕಾಳುಗಳು ತಲೆ ಕೂದಲಿನ ಆರೋಗ್ಯಕ್ಕೂ ಕೂಡ ಒಳ್ಳೆಯದು ಎಂದು ಹೇಳುತ್ತಾರೆ.
ಯಾರಿಗೆ ಈಗಾಗಲೇ ಹೆಚ್ಚು ತಲೆ ಕೂದಲು ಉದುರುವುದು, ಡ್ಯಾಂಡ್ರಫ್, ತಲೆ ಕೂದಲು ಅರ್ಧಕ್ಕೆ ಮುರಿದುಕೊಳ್ಳುವುದು ಇತ್ಯಾದಿ ಸಮಸ್ಯೆಗಳು ಇರುತ್ತವೆ ಅಂತಹವರು ಸೋಂಪು ಕಾಳುಗಳಿಂದ ತಲೆ ಕೂದಲಿಗೆ ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು. ಇದು ನಿಮಗೆ ಆಶ್ಚರ್ಯ ಎನಿಸುತ್ತಿದ್ದರೂ ಸತ್ಯ. ಸೋಂಪು ಕಾಳುಗಳಲ್ಲಿ ತಲೆ ಕೂದಲಿನ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ಗುಣಗಳಿವೆ. ಬನ್ನಿ ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ…..
ತಲೆ ಕೂದಲಿನ ಬೇರುಗಳಿಗೆ ಒಳ್ಳೆಯದು

- ತಲೆ ಕೂದಲು ಉದುರುವಿಕೆ ಸಮಸ್ಯೆಯನ್ನು ನಾವೆಲ್ಲರೂ ಕಾಣುತ್ತೇವೆ. ಕೆಲವರಿಗೆ ಹೆಚ್ಚಾಗಿರುತ್ತದೆ ಮತ್ತು ಇನ್ನು ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಉದುರುತ್ತಿರುತ್ತದೆ.
- ಆದರೆ ಸೋಂಪು ಕಾಳುಗಳನ್ನು ಬಳಸುವುದರಿಂದ ಅದರಲ್ಲಿರುವ ಪೌಷ್ಟಿಕ ಸತ್ವಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ತಲೆ ಕೂದಲಿನ ಬೇರುಗಳನ್ನು ಸದೃಢಪಡಿಸುತ್ತವೆ ಮತ್ತು ತಲೆ ಕೂದಲಿನ ಕಿರು ಚೀಲಗಳಿಗೆ ಅತ್ಯುತ್ತಮ ಪ್ರಯೋಜನಗಳನ್ನು ಒದಗಿಸುತ್ತವೆ.
- ತಲೆ ಕೂದಲು ಉದುರುವಿಕೆ ನಿವಾರಣೆಗೆ ನೀವು ಸ್ವಲ್ಪ ಸೋಂಪು ಕಾಳುಗಳನ್ನು ಒಂದು ಪ್ಯಾನ್ ನಲ್ಲಿ ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಸ್ವಲ್ಪ ಹೊತ್ತು ಕುದಿಸಿ.
- ಆನಂತರ ಇದನ್ನು ಸೋಸಿಕೊಂಡು ನಿಮ್ಮ ತಲೆ ಕೂದಲನ್ನು ಇದೇ ನೀರಿನಲ್ಲಿ ನೆನೆಸಿ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ನಿಮಗೆ ನಿರೀಕ್ಷಿತ ಫಲಿತಾಂಶಗಳು ಸಿಗುತ್ತವೆ.
ನೆತ್ತಿಯ ಭಾಗಕ್ಕೆ ತೇವಾಂಶ ಒದಗಿಸುತ್ತದೆ

- ನಿಮ್ಮ ನೆತ್ತಿಯ ಭಾಗ ಒಂದು ವೇಳೆ ಒಣಗಿದ್ದರೆ, ಅದರಿಂದ ಉರಿಯುತ ಮತ್ತು ನೆತ್ತಿಯ ಕೆರೆತ ಕಂಡುಬರುತ್ತದೆ. ಹೀಗಾಗಿ ನಿಮ್ಮ ನೆತ್ತಿಯ ಭಾಗ ತೇವಾಂಶದಿಂದ ಕೂಡಿರಬೇಕು.
- ಸೋಂಪು ಕಾಳುಗಳು ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದು, ನಿಮ್ಮ ನೆತ್ತಿಯ ಭಾಗದ ಪಿಎಚ್ ಮಟ್ಟವನ್ನು ಸಮತೋಲನ ಪಡಿಸು ವುದು ಮಾತ್ರ ವಲ್ಲದೆ ತೇವಾಂಶವನ್ನು ಸಹ ಒದಗಿಸು ತ್ತದೆ.
- ಇದಕ್ಕಾಗಿ ನೀವು ಸೋಂಪು ಕಾಳುಗಳನ್ನು ಪೌಡರ್ ಮಾಡಿ ಕೊಂಡು ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಅದನ್ನು ನಿಮ್ಮ ತಲೆ ಕೂದಲಿಗೆ ಮತ್ತು ನೆತ್ತಿಯ ಭಾಗಕ್ಕೆ ಅನ್ವಯಿಸಿ. ಸುಮಾರು 15 ರಿಂದ 20 ನಿಮಿಷಗಳು ಇದನ್ನು ಹಾಗೆ ಬಿಟ್ಟು ಆನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ.
ಪೌಷ್ಟಿಕಾಂಶಗಳು ಹೆಚ್ಚಾಗಿವೆ

- ಸೋಂಪು ಕಾಳುಗಳಲ್ಲಿ ನಿಮ್ಮ ತಲೆ ಕೂದಲಿಗೆ ಅವಶ್ಯವಾದ ವಿಟಮಿನ್ ಅಂಶಗಳು, ಖನಿಜಾಂಶಗಳು, ನಾರಿನ ಪ್ರಮಾಣ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಸಿಗಲಿದ್ದು, ತಲೆ ಕೂದಲಿನ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.
- ನಿಮ್ಮ ತಲೆ ಕೂದಲಿನ ಬೇರುಗಳಿಗೆ ಪೌಷ್ಟಿಕಾಂಶಗಳನ್ನು ಒದಗಿಸುವುದ ರಿಂದ ತಲೆ ಕೂದಲು ಉದುರುವಿಕೆ ಸಹ ಕಡಿಮೆ ಆಗುತ್ತದೆ. ಮನೆಯಲ್ಲಿ ನೀವು ಸೋಂಪು ಕಾಳುಗಳ ಆಯಿಲ್ ತಯಾರು ಮಾಡಿಕೊಂಡು ಅದನ್ನು ನಿಮ್ಮ ತಲೆಗೆ ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಹಚ್ಚಿ.
ಆಂಟಿ ಆಕ್ಸಿಡೆಂಟ್ ಗಳು ಇದರಲ್ಲಿವೆ

ಸೋಂಪು ಕಾಳುಗಳಲ್ಲಿ ವಿಟಮಿನ್ ಸಿ ಪ್ರಮಾಣ ಹೇರಳವಾಗಿ ಕಂಡು ಬರುತ್ತದೆ. ಇದು ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಕೆಲಸ ಮಾಡಲಿದ್ದು ಫ್ರೀ ರಾಡಿಕಲ್ ಅಂಶಗಳು ಉಂಟು ಮಾಡುವ ಅಸಮತೋಲನ ಮತ್ತು ಹಾನಿಯನ್ನು ದೂರ ಮಾಡುತ್ತದೆ. ಇದರಿಂದ ತಲೆ ಕೂದಲು ಉದು ರುವುದು, ಅರ್ಧಕ್ಕೆ ಮುರಿದುಕೊಳ್ಳುವುದು ಮತ್ತು ಒಣ ಕೂದಲಿನ ಸಮಸ್ಯೆ ದೂರವಾಗುತ್ತದೆ.
ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳು

- ಸೋಂಪು ಕಾಳುಗಳಲ್ಲಿ ನಮ್ಮ ತಲೆ ಕೂದಲಿನ ಆರೋಗ್ಯವನ್ನು ಕಾಪಾಡುವ ಔಷಧೀಯ ಲಕ್ಷಣಗಳು ಸಾಕಷ್ಟಿವೆ. ಅದರಲ್ಲಿ ಆಂಟಿ ಮೈಕ್ರೋಬಿಯಲ್ ಗುಣ ಲಕ್ಷಣಗಳು ಕೂಡ ಒಂದು.
- ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಸೋಂಪು ಕಾಳುಗಳನ್ನು ಸೇರಿಸಿ ಸೇವಿಸುವುದರಿಂದ ನಿಮಗೆ ಸಿಗುವ ಬೇರೆ ಬಗೆಯ ಪೌಷ್ಟಿ ಕಾಂಶಗಳ ಜೊತೆಗೆ ತಲೆ ಕೂದಲು ಆರೋಗ್ಯವಾಗಿ ಮತ್ತು ಹೊಳಪಿ ನಿಂದ ಕೂಡಿರುವಂತೆ ಸಹಾಯವಾಗುವ ಲಕ್ಷಣಗಳು ಕೂಡ ಸಿಗುತ್ತವೆ.
- ಇದಕ್ಕೆ ಪ್ರಮುಖ ಕಾರಣ ಎಂದರೆ ಸೋಂಪು ಕಾಳು ಗಳಲ್ಲಿ ನೆತ್ತಿಯ ಭಾಗದ ತೇವಾಂಶವನ್ನು ಕಾಪಾಡುವ ಗುಣವಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1