ಅಗ್ನಿಶಾಮಕದಳದ 3 ತಂಡಗಳಿಂದ ಮತ್ತೊಂದು ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಭಾನುವಾರ ರಾತ್ರಿ 9 ಗಂಟೆವರೆಗೆ ಶೋಧಕಾರ್ಯ ನಡೆಸಲಾಗಿತ್ತು. ರಾತ್ರಿಯಾಗಿದ್ದರಿಂದ ಶೋಧಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ತುಮಕೂರು: ಸಿದ್ದಗಂಗಾ ಮಠದಲ್ಲಿರುವ ಗೋ ಕಟ್ಟೆಗೆ ಬಿದ್ದು ನಾಲ್ವರು ಸಾವನ್ನಪ್ಪಿದ ಪ್ರಕರಣ ಸಂಬಂಧ ಮತ್ತೊಂದು ಮತೃದೇಹ ಪತ್ತೆಯಾಗಿದೆ. ಕೈಕಾಲು ತೊಳೆಯಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ನಾಲ್ವರು ಭಾನುವಾರ ನೀರುಪಾಲಾಗಿದ್ದರು. ಈ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದವು.
ನಾಪತ್ತೆಯಾಗಿದ್ದ ಇನ್ನುಳಿದ ಮೃತದೇಹಗಳಲ್ಲಿ ಒಂದು ಮೃತದೇಹವು ಇಂದು(ಆಗಸ್ಟ್ 14) ಪತ್ತೆಯಾಗಿದೆ. ಸೋಮವಾರ ಬೆಳ್ಳಂಬೆಳಗ್ಗೆ ವಿದ್ಯಾರ್ಥಿ ಶಂಕರ್ ಮೃತದೇಹವು ಸಿಕ್ಕಿದೆ. ಸದ್ಯ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ನೀರಿನಲ್ಲಿ ಹೂತುಕೊಂಡಿರುವ ಮತ್ತೊಂದು ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಬೆಳಗ್ಗೆ 6 ಗಂಟೆಯಿಂದಲೇ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಮಹದೇವಪ್ಪನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.
ಅಗ್ನಿಶಾಮಕದಳದ 3 ತಂಡಗಳಿಂದ ಮತ್ತೊಂದು ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಭಾನುವಾರ ರಾತ್ರಿ 9 ಗಂಟೆವರೆಗೆ ಶೋಧಕಾರ್ಯ ನಡೆಸಲಾಗಿತ್ತು. ರಾತ್ರಿಯಾಗಿದ್ದರಿಂದ ಶೋಧಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಲಕ್ಷ್ಮೀ, ಹರ್ಷಿತ್ ಮತ್ತು ಶಂಕರ್ ಮೃತದೇಹಗಳು ಪತ್ತೆಯಾಗಿವೆ.
ಮಹದೇವಪ್ಪ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ತುಮಕೂರಿನ ಕ್ಯಾತಸಂದ್ರ ಬಳಿಯಿರುವ ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಗೋಕಟ್ಟೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದ 11 ವರ್ಷದ ಶಂಕರ್ ಮತ್ತು ರಕ್ಷಿತ್ ಮುಳುಗಿದ್ದರು. ಈ ವೇಳೆ ಜೊತೆಯಲ್ಲಿದ್ದ ಲಕ್ಷ್ಮಿ ಎಂಬುವರು ರಕ್ಷಿಸಲು ಹೋಗಿ ಮುಳುಗಿದ್ದರು.
ಇದನ್ನು ಕಂಡ ಸ್ಥಳೀಯ ವ್ಯಕ್ತಿ ಮಹಾದೇವಪ್ಪ ಎಂಬುವರು ಸಹ ರಕ್ಷಿಸಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ವಿದ್ಯಾರ್ಥಿಗಳಾದ ಶಂಕರ್ ಹಾಗೂ ರಕ್ಷಿತ್ ರಾಮನಗರ ನಿವಾಸಿಗಳಾಗಿದ್ದು, ಲಕ್ಷ್ಮಿ ನೆಲಮಂಗಲ ಹಾಗೂ ಮಹಾದೇವಪ್ಪ ಯಾದಗಿರಿ ನಿವಾಸಿಯಾಗಿದ್ದಾರೆ.