IPL 2023: ಫೈನಲ್ ಪಂದ್ಯದಲ್ಲಿ ಧೋನಿ ಖಾತೆಗೆ ಸೇರಲಿದೆ ಮತ್ತೊಂದು ವಿಶ್ವ ದಾಖಲೆ..!

ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್  2023 ರ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸಿಎಸ್‌ಕೆ ವಿರುದ್ಧ ಸೋಲನುಭವಿಸಿದ್ದ ಗುಜರಾತ್ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಮತ್ತೊಮ್ಮೆ ಫೈನಲ್​ಗೆ ಲಗ್ಗೆ ಇಟ್ಟಿದೆ. ಎರಡೂ ತಂಡಗಳು ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿವೆ. ಇದೇ ಪಂದ್ಯದಲ್ಲಿ ಚೆನ್ನೈ ನಾಯಕ ಧೋನಿ ಕೂಡ ಅಪರೂಪದ ದಾಖಲೆಯೊಂದನ್ನು ಬರೆಯಲಿದ್ದಾರೆ.ಧೋನಿ ಇದುವರೆಗೆ ಐಪಿಎಲ್‌ನ ಪ್ರತಿ ಸೀಸನ್‌ನಲ್ಲಿ ಆಡಿದ್ದಾರೆ. 2008 ರಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಲು ಪ್ರಾರಂಭಿಸಿದ್ದ ಧೋನಿ 2015 ರವರೆಗೆ ಈ ಕೆಲಸವನ್ನು ನಿರಂತರವಾಗಿ ಮಾಡಿದ್ದರು ಆ ನಂತರ 2016 ಮತ್ತು 2017ರ ಐಪಿಎಲ್​ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ ತಂಡವನ್ನು ಮುನ್ನಡೆಸಿದ್ದರು. ನಂತರ 2018 ರಲ್ಲಿ ಮತ್ತೆ ಚೆನ್ನೈ ತಂಡಕ್ಕೆ ಮರಳಿದ್ದ ಧೋನಿ 2022 ರ ಸೀಸನ್ ಆರಂಭದ ಮೊದಲು ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದು ಜಡೇಜಾಗೆ ನಾಯಕತ್ವ ಹಸ್ತಾಂತರಿಸಿದ್ದರು. ಆದರೆ ರವೀಂದ್ರ ಜಡೇಜಾ ಲೀಗ್​ನ ಮಧ್ಯದಲ್ಲೇ ತಂಡವನ್ನು ತೊರೆದಿದ್ದರಿಂದ ಮತ್ತೆ ಧೋನಿ ತಂಡದ ನಾಯಕತ್ವವಹಿಸಿಕೊಳ್ಳಬೇಕಾಯಿತು.ಇದರೊಂದಿಗೆ ಐಪಿಎಲ್​ನಲ್ಲಿ ಸುದೀರ್ಘ ಪಯಣ ಮುಂದುವರೆಸಿರುವ ಧೋನಿ ಗುಜರಾತ್ ವಿರುದ್ಧದ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿದರೆ, ಐಪಿಎಲ್​ನಲ್ಲಿ 250 ಪಂದ್ಯಗಳನ್ನು ಪೂರೈಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.ಇನ್ನು ಧೋನಿ ಅವರ ನಂತರ ರೋಹಿತ್ ಶರ್ಮಾ 243 ಪಂದ್ಯಗಳನ್ನು ಆಡಿದ್ದು ಎರಡನೇ ಸ್ಥಾನದಲ್ಲಿದ್ದರೆ, ದಿನೇಶ್ ಕಾರ್ತಿಕ್ (242), ವಿರಾಟ್ ಕೊಹ್ಲಿ (237) ಮತ್ತು ರವೀಂದ್ರ ಜಡೇಜಾ (225) ಕ್ರಮವಾಗಿ ಪಟ್ಟಿಯಲ್ಲಿ ಧೋನಿಯ ಹಿಂದಿದ್ದಾರೆ.

source https://tv9kannada.com/photo-gallery/cricket-photos/ipl-2023-ms-dhoni-set-to-become-first-player-to-play-250-ipl-matches-psr-588491.html

Leave a Reply

Your email address will not be published. Required fields are marked *