ಸೆಲೆಬ್ರೆಟಿಗಳು ಏನು ಮಾಡಿದರು ಸುದ್ದಿಯಾಗಿತ್ತೆ. ಸದಾ ಕಾರಿನಲ್ಲೆ ಓಡಾಡುವ ಅನುಷ್ಕಾ ಶರ್ಮಾ, ಇವತ್ತು ಬೈಕ್ ಹತ್ತಿದ್ದೇ ಸಮಸ್ಯೆ ಆಯ್ತು. ವೈರಲ್ ಆಗುವುದರ ಜೊತೆಗೆ ಪೊಲೀಸರಿಂದ ನೋಟೀಸ್ ಕೂಎ ಬಂತು. ಅದರ ಜೊತೆಗೆ ಅವರ ಬಾಡಿಗಾರ್ಡ್ ಗೆ ದಂಡವನ್ನು ಹಾಕಿದ್ದಾರೆ. ಅದಕ್ಕೆಲ್ಲ ಕಾರಣ ಅನುಷ್ಕಾ ಶರ್ಮಾ ಮತ್ತು ಬಾಡಿಗಾರ್ಡ್ ಮಾಡಿಕೊಂಡ ಯಡವಟ್ಟು.
ಮುಂಬೈ ನಗರದಲ್ಲಿ ಟ್ರಾಫಿಕ್ ಜಾಸ್ತಿ ಅಂತ ನಟಿ ಅನುಷ್ಕಾ ಶರ್ಮಾ ಬೈಕ್ ಹತ್ತಿ ಹೊರಟಿದ್ದಾರೆ. ಆದರೆ ಇಲ್ಲಿ ಬಾಡಿಗಾರ್ಡ್ ಆಗಲಿ, ಅನುಷ್ಕಾ ಶರ್ಮಾ ಆಗಲಿ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ದಂಡ ಬಿದ್ದಿದೆ.
ಈ ದೃಶ್ಯ ಕಂಡ ಸ್ಥಳೀಯರು ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಬಾಡಿಗಾರ್ಡ್ ಗೆ ದಂಡ ಹಾಕಿದ್ದಾರೆ. ಹತ್ತು ಸಾವಿರ ದಂಡ ಹಾಕಿದ್ದಾರೆ. ಅನುಷ್ಕಾ ಶರ್ಮಾ ಅವರಿಗೆ ಇದಕ್ಕೆ ಉತ್ತರಿಸುವಂತೆ ನೋಟೀಸ್ ನೀಡಿದ್ದಾರೆ.
The post ರಸ್ತೆ ಬ್ಲಾಕ್ ಅಂತ ಬೈಕ್ ಹತ್ತಿದ ಅನುಷ್ಕಾ ಶರ್ಮಾಗೆ ಬಂತು ನೋಟೀಸ್.. ಬಾಡಿಗಾರ್ಡ್ ಗೆ ಬಿತ್ತು ದಂಡ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/TBCQbjR
via IFTTT