ಚಳ್ಳಕೆರೆ ಗಾಂಧಿನಗರ ಪಾರ್ಕ್ ಜಾಗದ ಅಕ್ರಮ ನಿರ್ಮಾಣ ತಡೆಗೆ ವಾಲ್ಮೀಕಿ ಮಹಿಳಾ ಸಂಘದ ಮನವಿ.

ಚಿತ್ರದುರ್ಗ ಆ. 16

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಳ್ಳಕೆರೆ ನಗರದ ಗಾಂಧಿನಗರದಲ್ಲಿ ಇರುವ ರಿ.ಸ.ನಂ:283ರಲ್ಲಿ ಪ್ಲೇಗೌಂಡ್ ಮತ್ತು ಪಾರ್ಕಿಗಾಗಿ ಬಿಟ್ಟಿರುವ ಖಾಲಿ ನಿವೇಶನದಲ್ಲಿ ಈಗ ಅಕ್ರಮವಾಗಿ ಕೆಲವು ವ್ಯಕ್ತಿಗಳು ಕಟ್ಟಡ ಕಟ್ಟುವುದಕ್ಕೆ ಮುಂದಾದವರನ್ನು ತಡೆಗಟುವಂತೆ ಆಗ್ರಹಿಸಿ ಶ್ರೀ ವಾಲ್ಮೀಕಿ ಮಹಿಳಾ ಮತ್ತು ಯುವ ಸಾರ್ವಜನಿಕ ಸಂಘದವತಿಯಿಂದ ಚಿತ್ರದುರ್ಗ ಜಿಲ್ಲಾ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಚಳ್ಳಕೆರೆ ನಗರದ ಗಾಂಧಿನಗರದಲ್ಲಿ ಇರುವ ರಿ.ಸ.ನಂ:283ರಲ್ಲಿ ಅಳತೆ 115×40ರ ವುಳ್ಳ ಖಾಲಿ ನಿವೇಶನ ಇದ್ದು, ಈ ನಿವೇಶನ ಸುಮಾರು ಹಿಂದಿನ ಪುರಸಭೆ ಮಾಜಿ ಅಧ್ಯಕ್ಷರಾದ ದಿವಂಗತ ತಿಪ್ಪನಾಯಕನವರ ಕಾಲದಿಂದಲ್ಲೂ ಖಾಲಿ ನಿವೇಶನವಾಗಿಯೇ ಇದೆ.

ಈ ನಿವೇಶನವನ್ನು ದಿವಂಗತ ತಿಪ್ಪನಾಯಕರವರು ಅಧ್ಯಕ್ಷರಾದ ಸಂದರ್ಭದಲ್ಲಿ ಹರಾಜಿಗೆ ಇಡಲಾಗಿತ್ತು. ಆದರೆ ಈ ನಿವೇಶನವನ್ನು ಹರಾಜು ಮಾಡುವುದಕ್ಕೆ ಬರುವುದಿಲ್ಲ. ಇದು ಪ್ಲೇಗೌಂಡ್ ಮತ್ತು ಉದ್ಯಾನವನಕ್ಕೆ (ಪಾರ್ಕಿಗಾಗಿ) ಬಿಟ್ಟಿರುವಂತ ಜಾಗ ಆಗಿರುವುದರಿಂದ ಹರಾಜು ರದ್ದಾಗಿರುತ್ತದೆ. ಈಗಿರುವಾಗ ಈ ನಿವೇಶನವನ್ನು ಹಿಂದಿನ ಆದಾಯ ತೆರಿಗೆ ಅಧಿಕಾರಿ ಕೆಲವರಿಗೆ ಹಂಗಾಮಿಯಾಗಿ ಹೆಸರಿಗೆ ಬರೆದು ಕೊಟ್ಟಾಗ ಅದನ್ನು ಹಿಂದಿನ ಪುರಸಭೆಯ ಕಮ್ಮಿಟಿ ಸದಸ್ಯರು ಮತ್ತು ಅಧಿಕಾರಿಗಳು ರದ್ದು ಮಾಡಿರುತ್ತಾರೆ.

ಇದಕ್ಕೆ ಸಾಕ್ಷಿಯಾಗಿ ಇದೇ ಮೆಲ್ಕಂಡ ಸರ್ವೆನಂಬರ್ ಅ.ನಂ:3626ರ ಖಾತೆದಾರರಾದ ಶ್ರೀಮತಿ:ಲಕ್ಷ್ಮಮ್ಮ ಇವರು ಕಟ್ಟಡ ಕಟ್ಟುವುದಕ್ಕೆ 1986ರಲ್ಲಿ ಲೈಸನ್ಸ್‍ಗಾಗಿ ಅರ್ಜಿ ಸಲ್ಲಿಸಿದಾಗ ಇವರ ಸೈಟ್ ರದ್ದು ಮಾಡಿದ ನಡುವಳಿ ಪತ್ರವನು ಸಹ ನಕಲು ಲಗತ್ತಿಸಲಾಗಿದೆ. ಸದರಿ ಖಾಲಿ ಜಾಗವನ್ನು ಈಗ ಕೆಲವರು ಅಕ್ರಮಿಸಿ ಕೊಳ್ಳಲು ಮುಂದಾಗುತ್ತಲೇ ಇದ್ದರು ಆಗ ಗಾಂಧಿನಗರದ ವಾಲ್ಮೀಕಿ ಮಹಿಳಾ ಮತ್ತು ಯುವ ಸಾರ್ವಜನಿಕರ ಸಂಘಟನೆಯಿಂದ ಸುಮಾರು35 ವರ್ಷಗಳಿಂದ ತಡೆದುಕೊಂಡು ಬಂದಿರುತ್ತಾರೆ, ಅನೇಕ ಬಾರಿ ಹಿಂದಿ ಪುರಸಭೆಯ ಮುಂದೆ ಹೋರಾಟ ನಡೆಸಿದ್ದು ಆ ಸಂದರ್ಭದಲ್ಲಿ ಹಿಂದಿನ ಪುರಸಭೆಯ ಮಾಜಿ ಅಧ್ಯಕ್ಷರಾದ ಲಕ್ಷ್ಮಿದೇವಿ ರವರ ಅಧಿಕಾರದಲ್ಲಿ ಸದಸ್ಯರ ಸಭೆ ಕರೆದು ಈ ಖಾಲಿ ಜಾಗವನ್ನು ವಾಲ್ಮೀಕಿ ಮಹಿಳಾ ಸಮುದಾಯ ಭವನಕ್ಕೆ ನೀಡಬಹುದು ಎಂದು ಸಭೆ ನಡವಳಿಕೆಗಳನ್ನು ಮಾಡಿರುವುದು ಹಿಂದಿನ ಸದಸ್ಯರುಗಳಿಗೆ ಮತ್ತು ಈಗಿನ ಸದಸ್ಯರಿಗೂ ಹಾಗೂ ಆಧಿಕಾರಿಗಳಿಗೂ ತಿಳಿದ ವಿಚಾರವಾಗಿರುತ್ತದೆ.

ಆದರೂ ಸಹ ಈ ಎಲ್ಲಾ ವಿಷಯಗಳು ತಿಳಿದ್ದರೂ ಖಾಲಿ ಜಾಗವನ್ನು ಅಕ್ರಮಣ ಮಾಡಿಕೊಳ್ಳುವುದಕ್ಕೆ ಹೊಂಚು ಹಾಕುತ್ತಿದ್ದರೆ, ನಾವು 20ಲಕ್ಷಕ್ಕೆ ಕೊಂಡುಕೊಂಡಿರುತ್ತೇವೆ ನಮಗೆ ಇ-ಸ್ವತ್ತು ಆಗಿರುತ್ತದೆ ಎಂದು ಹೇಳಿ ಸಂಘದ ಹೆಣ್ಣು ಮಕ್ಕಳಿಗೆ ಅವಶಬ್ದಗಳಿಂದ ಮಾತನಾಡುತ್ತಿದ್ದರೆ. ಇವರಿಗೆ ಯಾವರೀತಿ ಇ-ಸ್ವತ್ತು ಪಾರ್ಕಿನ ಜಾಗದಲ್ಲಿ ಮಾಡಿಕೊಟ್ಟರು ಎಂಬುದರ ಬಗ್ಗೆ ಮಾಹಿತಿ ನೀಡಿರುವುದಿಲ್ಲ. ಕಾನೂನು ರೀತಿಯಲ್ಲಿ ಪಾರ್ಕಿನ ಜಾಗದಲ್ಲಿ ಇ-ಸ್ವತ್ತು ನೀಡಬಾರದು ಎಂದು ಇದ್ದರು ಸಹ ನಗರ ಸಭೆಯಲ್ಲಿ ಇ-ಸ್ವತ್ತು ನಮಗೆ ಕೊಟ್ಟಿದ್ದರೆ ಎಂದು ರಮ್ಯ ಮತ್ತು ಅವರ ಕುಟುಂಬದವರು ದೌರ್ಜನ್ಯದಿಂದ ಕಟ್ಟಡ ನಿಮಾರ್ಣ ಮಾಡುವುದಕ್ಕೆ ಮುಂದಾಗಿದ್ದರೆ ಎಂದು ದೂರಿದ್ದಾರೆ. ಈ ವಿಚಾರದ ಬಗ್ಗೆ ನಗರಸಭೆ ಪೌರಾಯುಕ್ತರಿಗೂ ಮನವಿಯನ್ನು ಸಲ್ಲಿಸಲಾಗಿದೆ ಆದರೂ ರಮ್ಯ ಕುಟುಂಬದವರು ದೌರ್ಜನ್ಯ ಮಾಡುತ್ತಿದ್ದರೆ.

ಆದ್ದರಿಂದ ತಾವುಗಳು ಮನೆ ಕಟ್ಟಿಕೊಳ್ಳುವವರನ್ನು ತಡೆದು ಸಾರ್ವಜನಿಕ ಆಸ್ತಿಯಾಗಿ ಉಳಿಸಬೇಕು ಇಲ್ಲದಿದ್ದರೆ ನಾವುಗಳು ಅರ್ನಿಧಿಷ್ಟ ಕಾಲ ನಗರಸಭೆಯ ಮುಂದೆ ಧರಣಿ ಮಾಡುತ್ತೇವೆ ಇದಕ್ಕೆ ಅವಕಾಶ ಮಾಡಿಕೊಡದೇ ನ್ಯಾಯ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲಾ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಸಿ.ಕೆ.ಗೌಸ್‍ಪೀರ್ ಶ್ರೀ ವಾಲ್ಮೀಕಿ ಮಹಿಳಾ ಮತ್ತು ಯುವ ಸಾರ್ವಜನಿಕರ ಸಂಘದ ಅಧ್ಯಕ್ಷರಾದ ಪುಟ್ಟಮ್ಮ, ಕಾರ್ಯದರ್ಶಿ ಅನುಸೂಯಮ್ಮ ಸದಸ್ಯರಾದ ಪಾಲಮ್ಮ, ಮಂಗಳಮ್ಮ, ಅನಿತಾ, ಶ್ರೀದೇವಿ, ಪದ್ಮ, ಗೌರಮ್ಮ, ರತ್ನಮ್ಮ, ಓಬಮ್ಮ, ತಿಪ್ಪಮ್ಮ, ಲಕ್ಷ್ಮೀ, ಬೋಮಕ್ಕ, ಬಸಮ್ಮ, ಗಂಗಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *