
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜೂ. 02 ನಗರದ 14ನೇ ವಾರ್ಡಿನಲ್ಲಿ ಅನಧಿಕೃತವಾಗಿ ನಾಮಫಲಕ ಹಾಕುತ್ತಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಹಾಗೂ ಸ್ಥಳೀಯರಿಂದ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸುವ ಮುಖಾಂತರ ಕಾನೂನು ಕ್ರಮ ಜರುಗಿಸಬೇಕೆಂದು
ಒತ್ತಾಯಿಸಲಾಯಿತು.
ಅನಾದಿಕಾಲದಿಂದ ಇರುವ ಹೊಳಲ್ಕೆರೆ ರಸ್ತೆಯ ಮಾರಮ್ಮನ ದೇವಸ್ಥಾನದ ಪ್ರದೇಶಕ್ಕೆ – ಮಕ್ಕ ಮಸೀದಿ ರಸ್ತೆ ಎಂದು ಹೆಸರು
ಬದಲಾವಣೆಯನ್ನು ಮಾಡುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಹಾಗೂ ಸ್ಥಳೀಯರಿಂದ ವಿರೋಧ ವ್ಯಕ್ತಪಡಿಸಿ
ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸುವ ಮುಖಾಂತರ ಕಾನೂನು ಕ್ರಮ ಜರುಗಿಸಬೇಕೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ. ಪಿ.ರುದ್ರೇಶ್ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮುಖಂಡರು, ಹಾಗೂ ಪ್ರಮುಖರಾದ ಶ್ರೀನಿವಾಸ್
ಮಂಜುನಾಥ್ , ಚಲವಾದಿ ತಿಪ್ಪೇಸ್ವಾಮಿ ಮತ್ತು 14ನೇ ವಾರ್ಡಿನ ಸ್ಥಳೀಯ ಪ್ರಮುಖರಾದ ಪುನೀತ್, ಆಡಿಟರ್ ಗಂಗಣ್ಣ , ರಾಜ
ರಾಜಣ್ಣ , ನವೀನ್ , ಮಂಜು, ಇತರರು ಇದ್ದರು.