ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 02: ಸಂವಿಧಾನಬಾಹಿರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ 30-40 ವರ್ಷಗಳ ಹಳೆಯ ಸಿವಿಲ್ ಸ್ವರೂಪದ ಪ್ರಕ್ರಿಯೆ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರನ್ನು ವಜಾ ಮಾಡುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾನೂನು ಘಟಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿತು.
ಕರ್ನಾಟಕ ಸರ್ಕಾರವು ಮೂಡಾ ಹಗರಣವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುತ್ತಿರುವಾಗಲೇ ರಾಜ್ಯಪಾಲರು ತರಾತುರಿಯಲ್ಲಿ ಕಾನೂನುಬಾಹಿರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ಕೂಡಲೇ ಅವರನ್ನು ವಜಾಮಾಡಬೇಕು. ರಾಜ್ಯಪಾಲರು ಕರ್ನಾಟಕದ ಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸಲು ಕಿರುಕುಳ ನೀಡುತ್ತಿದ್ದಾರೆ. ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರ ರಾಜ್ಯಭವನವನ್ನು ಬಿ.ಜೆ.ಪಿ.ಯ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಸಂವಿಧಾನ ಸಂಸ್ಥೆಗಳಾದ Iಖಿ/ಇಆ/ಅಃI ಮತ್ತು ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಸಂವಿಧಾನವಾಹಿರ ಕೃತ್ಯದಲ್ಲಿ ತೊಡಗಿರುತ್ತದೆ.
ರಾಜ್ಯಪಾಲರ ಮುಂದೆ ಪ್ರಾಸಿಕ್ಯೂಷನ್‌ಗಾಗಿ ನೂರಾರು ದೂರುಗಳು ಬಾಕಿ ಇದ್ದರೂ ಮುಖ್ಯಮಂತ್ರಿಗಳ ವಿರುದ್ಧ ತರಾತುರಿಯಲ್ಲಿ ಅನುಮತಿ ನೀಡಿರುವುದು ಸಂವಿಧಾನ ಬಾಹಿರ ಎಂದು ದೂರಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯದಲ್ಲಿನ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳುಗೆಡವಿ ರಾಜ್ಯದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನ ಮಾಡುತ್ತಿದೆ. ಕರ್ನಾಟಕ ರಾಜ್ಯಪಾಲರ ಸಂವಿಧಾನಬಾಹಿರ ನಡೆಯ ಹಿಂದಿರುವ ಒಳಸಂಚು ಮತ್ತು ವಿಚಿತ್ರಕಾರಿ ಶಕ್ತಿಗಳ ವಿರುದ್ಧ ಅವರಿಗೆ ಕಾನೂನುಬಾಹಿರವಾದ ಸಲಹೆ ನೀಡಿರುವವರ ವಿರುದ್ಧ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿನೀಡಲು ಸಹಕರಿಸಿರುವವರ ವಿರುದ್ಧ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲು ಒತ್ತಾಯ.
ಸದರಿ ಪ್ರಕರಣ ಸುಮಾರು 20-30 ವರ್ಷಗಳ ಸಿವಿಲ್ ಸ್ವರೂಪದ ದೂರಾಗಿದ್ದು ಈ ದೂರನ್ನು ಇಟ್ಟುಕೊಂಡು ಚುನಾಯಿತ ಸರ್ಕಾರದಮೇಲೆ ದಬ್ಬಾಳಿಕೆ ನಡೆಸುವ ರಾಜ್ಯಪಾಲರನ್ನು ಈ ಕೂಡಲೇ ವಜಾ ಮಾಡುವಂತೆ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾನೂನು ಘಟಕದವತಿಯಿಂದ ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಶಶಾಂಕ್.ಎನ್, ಪ್ರಧಾನ ಕಾರ್ಯದರ್ಶಿಗಳಾದ ಭರತ್, ಮಲ್ಲಿಕಾರ್ಜನ್, ಶಿವಕುಮಾರ್, ಗುರುಮೂರ್ತಿ, ರಾಕೇಶ್, ನವೀನ್ ಉಪಸ್ಥಿತರಿದ್ದರು..