![](https://samagrasuddi.co.in/wp-content/uploads/2024/02/image-195-1024x576.png)
ಆಪಲ್ ಸ್ಮಾರ್ಟ್‌ವಾಚ್‌ಗಳು (Apple Smartwatch) ಆಕರ್ಷಕ ಶೈಲಿ ಹಾಗೂ ವಿಶೇಷ ಫೀಚರ್ಸ್ ಮೂಲಕ ಬಳಕೆದಾರರಿಗೆ ದೊಡ್ಡ ಮಟ್ಟದ ಸೇವೆ ಸಲ್ಲಿಸುತ್ತಿವೆ. ಈ ವಾಚ್‌ಗಳು ವೈದ್ಯರಂತೆ ಕೆಲಸ ಮಾಡಲಿದ್ದು, ದೊಡ್ಡ ದೊಡ್ಡ ಅನಾಹುತದ ಸಂದರ್ಭಗಳಲ್ಲಿ ಆಪತ್ಬಾಂಧವನಾಗಿಯೂ ಜನಪ್ರಿಯತೆ ಪಡೆದುಕೊಂಡಿವೆ.
ಇದರ ಭಾಗವಾಗಿಯೇ ಈಗ 82 ವರ್ಷದ ವ್ಯಕ್ತಿಯ ಜೀವ ಉಳಿಸಲಾಗಿದೆ.
ಹೌದು, ಆಪಲ್ ವಾಚ್‌ಗಳು (Apple Watch) ಸಾಕಷ್ಟು ಜನರ ಜೀವ ಉಳಿಸುವ ಮೂಲಕ ತಮ್ಮ ಮೌಲ್ಯವನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಂಡಿವೆ. ಅದರಂತೆ ಈಗ ವಯೋವೃದ್ಧನ ಜೀವ ಕಾಪಾಡುವಲ್ಲಿ ಸಹಾಯ ಮಾಡಿದೆ. ಹಾಗಿದ್ರೆ ಈ ವೃದ್ಧರಿಗೆ ಆಗಿದ್ದೇನು?, ಇವರ ಪ್ರಾಣ ಉಳಿಸುವಲ್ಲಿ ಆಪಲ್ ಸ್ಮಾರ್ಟ್ ವಾಚ್ ಮಾಡಿದ ಕೆಲಸಗಳು ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ವೃದ್ಧನನ್ನು ಕಾಪಾಡಿದ ಆಪಲ್ ಸ್ಮಾರ್ಟ್‌ವಾಚ್: ಈ ಘಟನೆ ಜನವರಿ 19, 2024 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುಕೆಯ ಕಿಡ್ಡರ್‌ಮಿನ್‌ಸ್ಟರ್‌ನಲ್ಲಿ ಟೋನಿ ಜಾನ್ಸಿ ಎಂಬ ವೃದ್ಧ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಈ ಗಂಭೀರ ಅಪಘಾತದಿಂದ ಹಲವಾರು ಸಮಸ್ಯೆಗಳು ಉಂಟಾದರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರನ್ನು ಕಾಪಾಡಿದ ವಾಚ್ ಅನ್ನು ಕ್ರಿಸ್‌ಮಸ್ ಹಿನ್ನೆಲೆ ಉಡುಗೊರೆಯಾಗಿ ಪಡೆದಿದ್ದರಂತೆ.
ಆ ವೃದ್ಧ ಕಾರ್ ಪಾರ್ಕಿಂಗ್ ಕಡೆ ಹೋಗಲು ಟ್ರಾಫಿಕ್ ಸರ್ಕಲ್ ದಾಟುತ್ತಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅವರು ಬಿದ್ದ ತಕ್ಷಣ, ಆಪಲ್ ವಾಚ್ ಅಪಘಾತವನ್ನು ಪತ್ತೆ ಮಾಡಿ ತುರ್ತು ಸಹಾಯಕ್ಕೆ ಪ್ರತಿಕ್ರಿಯೆ ಪಡೆಯಲು ಮುಂದಾಗಿದೆ. ಆದರೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಆ ವ್ಯಕ್ತಿ ಇರಲಿಲ್ಲ. ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸದಿದ್ದಾಗ, ಆಪಲ್ ವಾಚ್ ಆಟೋಮ್ಯಾಟಿಕ್ ಆಗಿ ತುರ್ತು ಸಹಾಯ ಎಚ್ಚರಿಕೆಯನ್ನು ಸಂಬಂಧಿಸಿದವರಿಗೆ ಕಳುಹಿಸಿದೆ. ಈ ಮೂಲಕ ಅವರ ಪ್ರಾಣವನ್ನು ಉಳಿಸಲಾಗಿದೆ. ಅದಾಗ್ಯೂ ಅವರಿಗೆ ಕೊರಳ ಮೂಳೆ, ಪಕ್ಕೆಲುಬುಗಳು ಮುರಿದಿವೆ.
ತುರ್ತು ಸೇವೆಗಳಿಗೆ ಕರೆ ಮಾಡುವಲ್ಲಿ ವಾಚ್ ತೆಗೆದುಕೊಂಡ ತ್ವರಿತ ಕ್ರಮವು ವೈಯಕ್ತಿಕ ಸುರಕ್ಷತೆಗಾಗಿ ತಂತ್ರಜ್ಞಾನದ ಮೇಲೆ ಹೆಚ್ಚುತ್ತಿರುವ ಅವಲಂಬನೆಯನ್ನು ಒತ್ತಿಹೇಳುತ್ತದೆ. ಧರಿಸಬಹುದಾದ ತಂತ್ರಜ್ಞಾನವು ವಿಕಸನಗೊಳ್ಳುತ್ತಲೇ ಇರುವುದರಿಂದ, ಇಂದಿನ ವೇಗದ ಮತ್ತು ಅನಿರೀಕ್ಷಿತ ಜಗತ್ತಿನಲ್ಲಿ ಈ ಡಿವೈಸ್‌ಗಳ ಪ್ರಾಮುಖ್ಯತೆ ಖಂಡಿತಾ ಹೆಚ್ಚಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಇತ್ತೀಚೆಗೆ ಆಪಲ್ ವಾಚ್ ಮಹಿಳೆಯೊಬ್ಬರ ಜೀವ ಉಳಿಸಿದ ಘಟನೆ ಸಹ ವರದಿ ಆಗಿತ್ತು. ಜನವರಿ 9 ರಂದು ಯುಕೆಯಿಂದ ಇಟಲಿಗೆ ರಯಾನ್‌ಏರ್ ವಿಮಾನದಲ್ಲಿ 70 ವರ್ಷ ವಯಸ್ಸಿನ ಬ್ರಿಟಿಷ್ ಮಹಿಳೆ ಉಸಿರಾಟದ ತೊಂದರೆ ಎದುರಿಸಿದ್ದಾರೆ. ವಿಮಾನದಲ್ಲಿದ್ದ 43 ವರ್ಷದ ವೈದ್ಯರು ಮಹಿಳೆಯ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಆಪಲ್ ವಾಚ್ ಹೊಂದಿದ್ದೀರಾ ಎಂದು ವಿಮಾನ ಸಿಬ್ಬಂದಿಯನ್ನು ಕೇಳಿದ್ದರು.
ಅದೃಷ್ಟವಶಾತ್ ಒಬ್ಬ ಫ್ಲೈಟ್ ಅಟೆಂಡೆಂಟ್ ಬಳಿ ಆಪಲ್ ವಾಚ್ ಇತ್ತು. ಇದಾದ ನಂತರ, ಮಹಿಳಾ ರೋಗಿಯ ಆಮ್ಲಜನಕದ ಮಟ್ಟವನ್ನು ಅಳೆಯಲು ಡಾ.ರಿಯಾಜ್ ವಾಚ್‌ನ ಮಾನಿಟರಿಂಗ್ ಸಿಸ್ಟಮ್ ಅನ್ನು ಬಳಸಿದರು. ನಂತರ ಆಮ್ಲಜನಕ ಕಡಿಮೆಯಾದಾಗ ಮಹಿಳೆಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು. ಈ ರೀತಿಯಾಗಿ ಆಕೆಯ ಜೀವವನ್ನು ಉಳಿಸಲಾಗಿತ್ತು.
ಸ್ಮಾರ್ಟ್‌ವಾಚ್‌ನಲ್ಲಿ ತುರ್ತು ಕರೆ ಮಾಡುವುದು ಹೇಗೆ? : ತುರ್ತು ಕರೆ ಸ್ಲೈಡರ್ ಕಾಣಿಸಿಕೊಳ್ಳುವವರೆಗೆ ನಿಮ್ಮ ವಾಚ್‌ನ ಸೈಡ್ ಬಟನ್ (ಡಿಜಿಟಲ್ ಕ್ರೌನ್‌ನ ಕೆಳಗಿನ ಬಟನ್) ಒತ್ತಿ ಹಿಡಿದುಕೊಳ್ಳಿ. ಕರೆಯನ್ನು ತಕ್ಷಣವೇ ಪ್ರಾರಂಭಿಸಲು ತುರ್ತು ಕರೆ ಸ್ಲೈಡರ್ ಅನ್ನು ಎಳೆಯಿರಿ. ಅಥವಾ ಸೈಡ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳಬಹುದು, ಕೌಂಟ್‌ಡೌನ್ ನಂತರ ನಿಮ್ಮ ವಾಚ್ ತುರ್ತು ಸೇವೆಗಳಿಗೆ ಆಟೋಮ್ಯಾಟಿಕ್ ಆಗಿ ಕರೆ ಮಾಡುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1