ಸಿದ್ದಗಂಗಾ ವಿದ್ಯಾಸಂಸ್ಥೆಯ ಎಲ್ಲ ಜಿಲ್ಲೆ ಶಾಲೆಗಳಲ್ಲಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ.

ಹೈಲೈಟ್ಸ್‌:

  • SSES ಶಾಲೆಗಳಲ್ಲಿ ಉದ್ಯೋಗಾವಕಾಶ.
  • ಪದವಿ, ಬಿ.ಇಡಿ, ಬಿಪಿ.ಇಡಿ ಪಾಸಾದವರು ಅರ್ಜಿ ಸಲ್ಲಿಸಿ.
  • ಅರ್ಜಿ ಸಲ್ಲಿಸಲು 21 ದಿನ ಕಾಲಾವಕಾಶ.

ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಶ್ರೀ ಸಿದ್ಧಗಂಗಾಮಠ, ತುಮಕೂರು ಜಿಲ್ಲೆ ಇದರ ಆಶ್ರಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಗಳಲ್ಲಿ ದಿನಾಂಕ 31-12-2015 ರವರೆಗೆ ವರ್ಗಾವಣೆ, ನಿಧನ, ಹಾಗೂ ಮುಂಬಡ್ತಿಯಿಂದ ತೆರವಾಗಿರುವ ವಿವಿಧ ವಿಷಯಗಳ ಸಹಶಿಕ್ಷಕರು / ದೈಹಿಕ ಶಿಕ್ಷಣ ಶಿಕ್ಷಕರು ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಕನ್ನಡ ವಿಷಯ ಸಹಶಿಕ್ಷಕರು9
ಆಂಗ್ಲ ವಿಷಯ ಸಹಶಿಕ್ಷಕರು16
ಹಿಂದಿ ವಿಷಯ ಸಹಶಿಕ್ಷಕರು3
ಗಣಿತ ವಿಷಯ ಸಹಶಿಕ್ಷಕರು4
ವಿಜ್ಞಾನ ವಿಷಯ ಸಹಶಿಕ್ಷಕರು8
ಕಲಾ ವಿಷಯಗಳ ಸಹಶಿಕ್ಷಕರು8
ದೈಹಿಕ ಶಿಕ್ಷಣ ಶಿಕ್ಷಕರು3
ಒಟ್ಟು ಶಿಕ್ಷಕರುಗಳ ಸಂಖ್ಯೆ51

ವಿದ್ಯಾರ್ಹತೆ : ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಪದವಿ ಹಾಗೂ ಬಿ.ಇಡಿ ಶಿಕ್ಷಣ ತರಬೇತಿಯನ್ನು ಸಂಬಂಧಿಸಿದ ವಿಷಯಗಳ ಬೋಧನ ಕ್ರಮಗಳಿಗೆ ತಕ್ಕಂತೆ ಹೊಂದಿರಬೇಕು.

ವಯೋಮಿತಿಯು ಸರ್ಕಾರದ ಆದೆಶಗಳನ್ವಯ ಇರಬೇಕು.

ಅರ್ಜಿ ಸಲ್ಲಿಸುವ ಅರ್ಜಿದಾರರು ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಾಗಿದ್ದಲ್ಲಿ ರೂ.1000 ಡಿಡಿಯನ್ನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ರೂ.500 ಡಿಡಿ ಅನ್ನು – ಅಧ್ಯಕ್ಷರು, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ, ಶ್ರೀ ಸಿದ್ಧಗಂಗಾಮಠ, ತುಮಕೂರು ಜಿಲ್ಲೆ ಇವರ ಹೆಸರಿಗೆ ಪಡೆದು ಸಲ್ಲಿಸಬೇಕು. ಡಿಡಿ ಮೊಬಲಗಿನ ಹಣವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಹುದ್ದೆಯ ವಿವರಗಳನ್ನು ತಿಳಿಯಲು, ಅಧಿಸೂಚನೆಯನ್ನು ಓದಲು, ವರ್ಗಾವಾರು ಮೀಸಲಿರುವ ಹುದ್ದೆಗಳ ಸಂಖ್ಯೆಯನ್ನು ತಿಳಿಯಲು ಸಂಸ್ಥೆಯ ವೆಬ್‌ಸೈಟ್‌ www.sses.org.in ಗೆ ಭೇಟಿ ನೀಡುವುದು. ಹಾಗೂ ಅರ್ಜಿ ನಮೂನೆಯನ್ನು ಇದೇ ವೆಬ್‌ಸೈಟ್‌ನಲ್ಲಿ ಪಡೆದುಕೊಂಡು, ಜುಲೈ 24 ರಿಂದ ಮುಂದಿನ 21 ದಿನಗಳೊಳಗೆ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಅರ್ಜಿಯ ಪ್ರತಿಯನ್ನು ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ತುಮಕೂರು ಜಿಲ್ಲೆ ಇವರಿಗೆ ಸಲ್ಲಿಸುವುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು/ ವಿವರಗಳು

ಅಭ್ಯರ್ಥಿ ಹೆಸರು, ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ವೈಯಕ್ತಿಕ ವಿವರ, ಕಾರ್ಯಾನುಭವ ವಿವರ ಹಾಗೂ ದಾಖಲೆ, ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪದವಿ ಹಾಗೂ ಬಿ.ಇಡಿ ಶಿಕ್ಷಣ ಪ್ರಮಾಣ ಪತ್ರ, ಇತರೆ ದಾಖಲೆಗಳ ಜೆರಾಕ್ಸ್‌ ಪ್ರತಿಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸುವುದು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳ ಮುಖಪುಟ ಮತ್ತು ಕವರ್‌ನ ಮೇಲ್ಭಾಗದಲ್ಲಿ ಅರ್ಜಿ ಸಲ್ಲಿಸಿದ ಹುದ್ದೆಯ ಹೆಸರು, ಮೀಸಲಾತಿ ಮತ್ತು ಸಮತಲ ಮೀಸಲಾತಿಯನ್ನು ಸ್ಪಷ್ಟವಾಗಿ, ಕಡ್ಡಾಯವಾಗಿ ಬರೆದಿರಬೇಕು. ಅಸ್ಪಷ್ಟ ಅರ್ಜಿಗಳನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸಲಾಗುವುದು.
ಅಪೂರ್ಣ ಮಾಹಿತಿಗಳುಳ್ಳ ಹಾಗೂ ನಿಗದಿತ ದಿನಾಂಕವನ್ನು ಮೀರಿ ಬರುವ ಅರ್ಜಿಗಳನ್ನು ಯಾವ ಹಿಂಬರಹ ನೀಡದೆ ತಿರಸ್ಕರಿಸಲಾಗುವುದು ಹಾಗೂ ಹಿಂದಿರುಗಿಸಲಾಗುವುದಿಲ್ಲ.

 

Leave a Reply

Your email address will not be published. Required fields are marked *