IPPB Recruitment 2024: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India Post Payments Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 47 ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಏಪ್ರಿಲ್ 5, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್‌ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ರೆ ಈಗಲೇ ಅಪ್ಲೈ ಮಾಡಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ |
ಹುದ್ದೆ | ಎಕ್ಸಿಕ್ಯೂಟಿವ್ |
ಒಟ್ಟು ಹುದ್ದೆ | 47 |
ವಿದ್ಯಾರ್ಹತೆ | ಪದವಿ, ಎಂಬಿಎ |
ವೇತನ | ಮಾಸಿಕ ₹ 27,650- 52,650 |
ಉದ್ಯೋಗದ ಸ್ಥಳ | ತುಮಕೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ಏಪ್ರಿಲ್ 5, 2024 |
ಹುದ್ದೆಯ ಮಾಹಿತಿ:
ಬಿಹಾರ- 5
ದೆಹಲಿ- 1
ಗುಜರಾತ್- 8
ಹರಿಯಾಣ- 4
ಜಾರ್ಖಂಡ್-1
ಕರ್ನಾಟಕ- 1
ಮಧ್ಯ ಪ್ರದೇಶ- 3
ಮಹಾರಾಷ್ಟ್ರ- 2
ಒಡಿಶಾ- 1
ಪಂಜಾಬ್- 4
ರಾಜಸ್ಥಾನ- 4
ತಮಿಳುನಾಡು-2
ಉತ್ತರ ಪ್ರದೇಶ- 11
ವಿದ್ಯಾರ್ಹತೆ:
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಎಂಬಿಎ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 1, 2024ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWD (UR) ಅಭ್ಯರ್ಥಿಗಳು: 10 ವರ್ಷಗಳು
PWD [OBC (NCL)] ಅಭ್ಯರ್ಥಿಗಳು: 13 ವರ್ಷಗಳು
PWD (SC/ST) ಅಭ್ಯರ್ಥಿಗಳು: 15 ವರ್ಷಗಳು
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ವೇತನ:
ಮಾಸಿಕ ₹ 30,000
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು: ರೂ.150/-
ಸಾಮಾನ್ಯ ಅಭ್ಯರ್ಥಿಗಳು: ರೂ.750/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಟೆಸ್ಟ್
ಗುಂಪು ಚರ್ಚೆ
ವೈಯಕ್ತಿಕ ಸಂದರ್ಶನ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಹಾಕಲು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/03/2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 5, 2024 (ನಾಳೆ)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1