RRB Recruitment: ರೈಲ್ವೆ ಇಲಾಖೆಯಲ್ಲಿ ಭರ್ಜರಿ 11558 ಉದ್ಯೋಗ ನೇಮಕಾತಿ, ಆನ್‌ಲೈನಲ್ಲಿ ಅರ್ಜಿ ಹಾಕಿ.

ಬೆಂಗಳೂರು, ಸೆಪ್ಟಂಬರ್ 09: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರಿಗೆ ರೈಲ್ವೆ ನೇಮಕಾತಿ ಮಂಡಳಿ (RRBs) ಸಿಹಿ ಸುದ್ದಿ ನೀಡಿದೆ. ರೈಲ್ವೆಯ 2024ರ ನಾನ್‌ ಟೆಕ್ನಿಕಲ್‌ ಪಾಪ್ಯುಲರ್‌ ಕೆಟಗರಿ (NTPC) ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಹುದ್ದೆಗಳು, ಅರ್ಜಿ ಸಲ್ಲಿಕೆ ವಿಧಾನ, ಪ್ರಮುಖ ದಿನಾಂಕ ಇತರ ಎಲ್ಲ ಮಾಹಿತಿ ಇಲ್ಲಿದೆ.

ರೈಲ್ವೆ ನೇಮಕಾತಿ ಮಂಡಳಿ (RRBs) ಒಟ್ಟು 11,558 ಹುದ್ದೆಗಳ ನೇಮಕಾತಿ ನಡೆಸಲಿದ್ದು, ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದರಲ್ಲಿ ಪದವೀಧರರಿಗಾಗಿ 8113 ಹುದ್ದೆ ಹಾಗೂ ಪದವಿಪೂರ್ವ ವಿದ್ಯಾಭ್ಯಾಸ ಪೂರ್ಣಗೊಳಿಸಿದವರಿಗೆ 3,445 ಹುದ್ದೆಗಳು ಇವೆ.

ಈ ಕೆಳಗಿನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ರೈಲ್ವೆ ಸಚಿವಾಲವು ಮಾಹಿತಿ ನೀಡಿದೆ.

Bank Recruitment 2024: ಸೆಂಟ್ರಲ್ ಬ್ಯಾಂಕನಲ್ಲಿವೆ 13 ಖಾಲಿ ಉದ್ಯೋಗ, ಲಿಖಿತ ಪರೀಕ್ಷೆ ಇಲ್ಲದೇ ನೇಮಕ ನೇಮಕಾತಿ ಪೂರ್ಣ ವಿವರ ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRBs)

ಒಟ್ಟು ಹುದ್ದೆಗಳು: 11558 ಹುದ್ದೆ

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಎರಡು ಹಂತದಲ್ಲಿ ಅರ್ಜಿ ಸಲ್ಲಿಕೆ: ಸೆಪ್ಟಂಬರ್ 14ರಿಂದ & ಸೆಪ್ಟಂಬರ್ 21ರಿಂದ.

ಪದವಿಪೂರ್ವ ಹುದ್ದೆ: ವಯೋಮಿತಿ 18 ರಿಂದ 33 ವರ್ಷ

ಪದವೀಧರ ಹುದ್ದೆ: ವಯೋಮಿತಿ 18 ರಿಂದ 36 ವರ್ಷ

ಮಾಸಿಕ ವೇತನ: ನಿಯಮಾನುಸಾರ ಎರಡು ಹಂತಗಳಲ್ಲಿ ಅರ್ಜಿ ಸಲ್ಲಿಕೆ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಪದವಿಧರರ ಮತ್ತು ಪದವಿಪೂರ್ವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಒಟ್ಟು 11,558 ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ ಪದವೀಧರರಿಗೆ (8113) ಖಾಲಿ ಹುದ್ದೆಗಳಿಗೆ ಇದೇ ತಿಂಗಳು ಸೆ. 14 ರಿಂದ ಅಕ್ಟೋಬರ್ 13ರವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ.

ಇನ್ನೂ ಎರಡನೇ ಹಂತದಲ್ಲಿ ಪದವಿಪೂರ್ವ ಹುದ್ದೆಗಳಿಗೆ ಸೆಪ್ಟೆಂಬರ್ 21 ರಿಂದ ಅಕ್ಟೋಬರ್‌ 20 ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆರ್‌ಆರ್‌ಬಿ ತಿಳಿಸಿದೆ.
ಖಾಲಿ ಹುದ್ದೆಗಳು ಯಾವುವು? ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಮುಖ್ಯ ವಾಣಿಜ್ಯ/ ಟಿಕೆಟ್ ಮೇಲ್ವಿಚಾರಕರು, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಮತ್ತು ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳು ಸೇರುವ ಸಾಧ್ಯತೆ ಇದೆ. ಪದವಿಪೂರ್ವ ವಿಭಾಗದಲ್ಲಿ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ ಕ್ಲರ್ಕ್, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು.

ವಯಸ್ಸಿನ ಮಿತಿ ಎಷ್ಟಿರಬೇಕು? ಈ ರೈಲ್ವೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ 18 ರಿಂದ 33 ವರ್ಷ (ಪದವಿಪೂರ್ವ) ಹಾಗೂ18 ರಿಂದ 36 ವರ್ಷ (ಪದವೀಧರ ಹುದ್ದೆಗಳು) ವಯಸ್ಸಾಗಿರಬೇಕು ಎಂದು ಅಧಿಸೂಚನೆ ತಿಳಿಸಿದೆ.

ಅಭ್ಯರ್ಥಿಗಳ ಆಯ್ಕೆ ಹೇಗೆ? ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಂಡಳಿಯು ವಿವಿಧ ಪರೀಕ್ಷೆಗಳನ್ನು ನಡೆಸಲಿದೆ. ಈ ಪೈಕಿ ಆನ್‌ಲೈನ್ ಪರೀಕ್ಷೆ ಹಂತ 1(CBT), ಆನ್‌ಲೈನ್ ಪರೀಕ್ಷೆ ಹಂತ 2 (CBT 2), ಟೈಪಿಂಗ್ ಟೆಸ್ಟ್ (ಕೌಶಲ್ಯ ಪರೀಕ್ಷೆ) / ಆಪ್ಟಿಟ್ಯೂಡ್ ಪರೀಕ್ಷೆ ನಡೆಸುವ ಜೊತೆಗೆ ಅಭ್ಯರ್ಥಿಗಳ ದಾಖಲೆಗಳ ಪರಿಶೀಲಿಸಲಾಗುತ್ತದೆ. ಕೊನೆಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮಗೊಳಿಸಲಾಗುತ್ತದೆ. ಅರ್ಜಿ ಶುಲ್ಕ ಎಷ್ಟಿರಬೇಕು? ರೈಲ್ವೆ ನೇಮಕಾತಿ ಮಂಡಳಿ ಪ್ರಕಾರ, SC ಮತ್ತು ST ಮಾಜಿ ಸೈನಿಕರು, ಮಹಿಳೆ, PWD, ಟ್ರಾನ್ಸ್‌ಜೆಂಡರ್, ಅಲ್ಪಸಂಖ್ಯಾತರು ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 250 ರೂ. ನಿಗದಿಪಡಿಸಲಾಗಿದೆ. ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂ. ಇದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು www.rrbapply.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

Source : https://kannada.oneindia.com/jobs/railway-jobs-rrb-recruitment-candidate-can-apply-11558-ntpc-posts-374573.html




Leave a Reply

Your email address will not be published. Required fields are marked *