ಕಲ್ಲಿದ್ದಲು, ಗಣಿ ಮತ್ತು ಉಕ್ಕು ಇಲಾಖೆಯ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಗೋವಿಂದ ಕಾರಜೋಳ ನೇಮಕ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 27: 18ನೇ ಲೋಕಸಭೆಯಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಎಂ. ಕಾರಜೋಳರವರನ್ನು ಸಂಸತ್ತಿನ ಕಲ್ಲಿದ್ದಲು, ಗಣಿ ಮತ್ತು ಉಕ್ಕು ಇಲಾಖೆಯ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ಲೋಕಸಭಾ ಸ್ಪೀಕರಾದ ಓಂ ಬಿರ್ಲಾರವರು ನೇಮಕ ಮಾಡಿರುತ್ತಾರೆ.

ಈ ಸ್ಥಾಯಿ ಸಮಿತಿಯಲ್ಲಿ 10 ಜನ ರಾಜ್ಯ ಸಭಾ ಸದಸ್ಯರು ಹಾಗೂ 21 ಜನ ಲೋಕಸಭಾ ಸದಸ್ಯರುಗಳು ಕಾರ್ಯನಿರ್ವಹಿಸಲಿದ್ದು, ಈ
ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಅನುರಾಗ್ ಸಿಂಗ್ ಠಾಕೂರ್‍ರವರನ್ನು ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *