ಸ್ವದೇಶಿ ಮೇಳದಲ್ಲಿ ಪೌರ ಕಾರ್ಮಿಕರಿಗೆ ಗೌರವ: ಸ್ವಚ್ಚತೆಯ ಸೇವೆಗೆ ಶ್ಲಾಘನೆ.

ಚಿತ್ರದುರ್ಗ ನ. 16

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿನ ಜಗದ್ಗುರು ಶ್ರೀ ಜಯದೇವ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಕಳೆದ 12 ರಿಂದ ನಡೆಯುತ್ತಿರುವ ಸ್ವದೇಶಿ ಜಾಗರಣ ಮಂಚ್ ಅಡಿಯಲ್ಲಿನ ಸ್ವದೇಶಿ ಮೇಳದ ಐದು ದಿನವೂ ಸಹಾ ಸ್ವಚ್ಚತೆಯನ್ನು ಮಾಡಿದ ಚಿತ್ರದುರ್ಗ ನಗರಸಭೆಯ ಪೌರ ಕಾರ್ಮಿಕರಿಗೆ ಭಾನುವಾರ ಅವರ ಕಾರ್ಯವನ್ನು ಶ್ಲಾಘಿಸಿ ಗೌರವಿಸಲಾಯತು.


ಸ್ವದೇಶಿ ಮೇಳದ ಸಂಯೋಜಕರಾದ ಕೆ.ಎಸ್.ನವೀನ್ ಹಾಗೂ ಸಹ ಸಂಘಟಕರಾದ ಜಿ.ಎಸ್. ಆನಿತ್ ಕುಮಾರ್ ರವರು ಸುಮಾರು 30 ಜನ ಪೌರ ಕಾರ್ಮಿಕರಿಗೆ ದಿನ ನಿತ್ಯ ಗೃಹ ಬಳಕೆಯ ಲಿಟ್ ನೀಡುವುದರ ಮೂಲಕ ಗೌರವಿಸಲಾಯಿತು. 
ಈ ಸಂದರ್ಭದಲ್ಲಿ ಶ್ಯಾಮಲ, ಮಲ್ಲಿಕಾರ್ಜನ್, ಸೌಬಾಗ್ಯ ಬಸವರಾಜನ್, ಸಂಪತ್ ಕುಮಾರ್ ಮೂರಾರ್ಜಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *